ಹಾಸನ : ಕ್ಯಾಂಪ್ ನಲ್ಲಿ ಮಧ್ಯಾಹ್ನದ ಊಟ ಸೇವಿಸಿದ ಬಳಿಕ 35 ಸೈನಿಕರು ಅಸ್ವಸ್ಥಗೊಂಡಿರುವ ಘಟನೆ ಸಕಲೇಶಪುರ ತಾಲೂಕಿನ ಕುಡುಗರಹಳ್ಳಿಯಲ್ಲಿ ನಡೆದಿದೆ.
ಸೈನಿಕರು ಕುಡುಗರಹಳ್ಳಿಯ ಕ್ಯಾಂಪ್ ನಲ್ಲಿ ಚಾಲನಾ ತರಬೇತಿಗೆ ಬಂದಿದ್ದರು. ಇಂದು ಮಧ್ಯಾಹ್ನ ಕ್ಯಾಂಪ್‌ನಲ್ಲಿ ತಯಾರಿಸಿದ್ದ ಊಟ ಸೇವಿಸಿದ್ದರು, ಬಳಿಕ 35 ಸೈನಿಕರು ಅಸ್ವಸ್ಥಗೊಂಡಿದ್ದಾರೆ. ಕೂಡಲೇ ಅಸ್ವಸ್ಥರನ್ನು ಸಕಲೇಶಪುರ ಕ್ರಾಫರ್ಡ್ ಆಸ್ಪತ್ರೆ ದಾಖಲಿಸಿ, ಚಿಕಿತ್ಸೆ ನೀಡಲಾಗಿದೆ.
ಮಾಹಿತಿ ತಿಳಿದ ಕೂಡಲೇ ಶಾಸಕ ಸಿಮೆಂಟ್ ಮಂಜು ಅವರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವತ್ತಿರುವ ಸೈನಿಕರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ. ಉತ್ತಮ ಚಿಕಿತ್ಸೆ ನೀಡುವಂತೆ ವೈದ್ಯರಿಗೆ ಸೂಚನೆ ಕೊಟ್ಟಿದ್ದಾರೆ. ಫುಡ್ ಪಾಯ್ಸನ್ ನಿಂದ ಅಸ್ವಸ್ಥಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ : ಕೊಲ್ಲಾಪುರದಲ್ಲಿ ಉದ್ವಿಗ್ನ ಪರಿಸ್ಥಿತಿ, 144 ಸೆಕ್ಷನ್ ಜಾರಿ
ಟ್ರ್ಯಾಕ್ಟರ್ ಗೆ ಬಾಲಕ ಬಲಿ
ಕುಡಿದ ಮುತ್ತಿನಲ್ಲಿ ವಾಟರ್ ಟ್ಯಾಂಕರ್(ಟ್ರ್ಯಾಕ್ಟರ್) ಚಾಲನೆಗೆ ಬಾಲಕ ಬಲಿಯಾಗಿರುವ ಘಟನೆ ಬನ್ನೇರುಘಟ್ಟ ಸಮೀಪದ ಸಿ.ಕೆ ಪಾಳ್ಯದಲ್ಲಿ ನಡೆದಿದೆ. ಭುವನ್(4) ಸಾವನ್ನಪ್ಪಿರುವ ಬಾಲಕ. ಸಿ.ಕೆ ಪಾಳ್ಯದ ನಿವಾಸಿ ಎಂದು ತಿಳಿದುಬಂದಿದೆ.
ಅಣ್ಣನ ಜೊತೆ ಬೇಕರಿಯಲ್ಲಿ ಐಸ್ ಕ್ರೀಮ್ ತೆಗೆದುಕೊಂಡು ಬರುವಾಗ ಘಟನೆ ನಡೆದಿದೆ. ಘಟನೆ ಬಳಿಕ ಚಾಲಕ ವಾಟರ್ ಟ್ಯಾಂಕರ್ ಅನ್ನು ಬಿಟ್ಟು ಪರಾರಿಯಾಗಿದ್ದಾನೆ. ಅಪಘಾತದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಅಪಘಾತದ ದೃಶ್ಯ ನೋಡಿದರೆ ಎಂಥವರಿಗೂ ಎದೆ ಒಂದು ಬಾರಿ ಎದೆ ಜೆಲ್ ಅನಿಸುತ್ತೆ. ಬನ್ನೇರುಘಟ್ಟ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ.