Friday, April 19, 2024

ಬಾಡಿಗೆದಾರರಿಗೂ ಉಚಿತ ವಿದ್ಯುತ್ ಸಿಗುತ್ತದೆ : ಸಿದ್ದರಾಮಯ್ಯ ಸ್ಪಷ್ಟನೆ

ಬೆಂಗಳೂರು : ಬಾಡಿಗೆದಾರರಿಗೂ 200 ಯುನಿಟ್ ಉಚಿತ ವಿದ್ಯುತ್ ಸಿಗುತ್ತದೆ. ಯಾವುದೇ ಗೊಂದಲ ಬೇಡ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು ,200 ಯೂನಿಟ್​ ಒಳಗೆ ವಿದ್ಯುತ್​​ ಉಪಯೋಗಿಸುವ ಎಲ್ಲರಿಗೂ ಉಚಿತವಾಗಿರುತ್ತದೆ. ವಾಣಿಜ್ಯ ಉದ್ದೇಶಕ್ಕೆ ವಿದ್ಯುತ್​ ಬಳಸುವವರಿಗೆ ಮಾತ್ರ ಈ ನಿಯಮ ಅನ್ವಯ ಆಗಲ್ಲ ಎಂದು ಪುನರುಚ್ಚರಿಸಿದ್ದಾರೆ.

ಬಿಜೆಪಿಯವರಿಗೆ ಏನೂ ಇಲ್ವಲ್ಲ ಪಾಪ. ವಾಟ್ ಮಾರಲ್ ರೈಟ್ ದೇ ಹ್ಯಾವ್. ಹೀಗಾಗಿ, ಬಿಜೆಪಿಯವರು ಮೊಸರಲ್ಲಿ ಕಲ್ಲು ಹುಡುಕೋಕೆ ಹೊರಟಿದ್ದಾರೆ. ಬಿಜೆಪಿ ಜನವಿರೋಧಿ ಪಕ್ಷ. ಅಧಿಕಾರದಲ್ಲಿ ಇದ್ದಾಗ ಲೂಟಿ ಹೊಡೆದು ರಾಜ್ಯವನ್ನು ಹಾಳು ಮಾಡಿಬಿಟ್ಟರು. ಅವರು ನಮಗೆ ಪಾಠ ಮಾಡೋದಕ್ಕೆ ಬರ್ತಾರಾ? ಕೃಷಿ ಭಾಗ್ಯ ನಿಲ್ಲಿಸಿದವರು ಯಾರು? ಸೈಕಲ್ ನಿಲ್ಲಿಸಿದವರು ಯಾರು? ಒಂದಾ, ಎರಡಾ ಹೇಳೋದು? ಎಂದು ಸಿದ್ದರಾಮಯ್ಯ ಛೇಡಿಸಿದ್ದಾರೆ.

ಇದನ್ನೂ ಓದಿ : ಒಂದು RR ಸಂಖ್ಯೆಗೆ ಮಾತ್ರ ಕರೆಂಟ್ ಉಚಿತ!

‘200 ಯುನಿಟ್ ಗಳ ಒಳಗೆ ವಿದ್ಯುತ್ ಬಳಕೆ ಮಾಡುವವರು ಬಿಲ್ ಕಟ್ಟುವ ಅಗತ್ಯವಿಲ್ಲ. ಬಾಡಿಗೆದಾರರಿಗೂ ಇದು ಅನ್ವಯವಾಗುತ್ತದೆ. ವಾಣಿಜ್ಯ ಕಟ್ಟಡಗಳಿಗೆ ಮಾತ್ರ ಇದು ಅನ್ವಯಿಸುವುದಿಲ್ಲ’.

  • ಸಿದ್ದರಾಮಯ್ಯ, ಮುಖ್ಯಮಂತ್ರಿ

ಬಿಜೆಪಿ ತಪ್ಪು ಸಂದೇಶ ಸಾರುತ್ತಿದೆ

ಗೃಹಜ್ಯೋತಿ ಯೋಜನೆ ಬಗ್ಗೆ ರಾಜ್ಯ ಕಾಂಗ್ರೆಸ್​​ ಟ್ವೀಟ್ ಮಾಡಿದೆ.​​ ನಮ್ಮ ಗ್ಯಾರಂಟಿ ಯೋಜನೆಗಳು ಸಮಾಜ ಕಲ್ಯಾಣದ ಕಾರ್ಯಕ್ರಮಗಳಾಗಿವೆ. ಗೃಹಜ್ಯೋತಿ ಯೋಜನೆಯು ಬಾಡಿಗೆ ಮನೆಯಲ್ಲಿ ವಾಸಿಸುವವರಿಗೂ ಅನ್ವಯವಾಗಲಿದೆ ಎಂದು ಹೇಳಿದೆ.

ಕೆಲವು ಮಾಧ್ಯಮಗಳು ಹಾಗೂ ಬಿಜೆಪಿ ತಪ್ಪು ಅಭಿಪ್ರಾಯ ಮೂಡಿಸುತ್ತಿದ್ದು, ಸಾರ್ವಜನಿಕರು ಅದಕ್ಕೆ ಬಲಿಯಾಗಬಾರದು. ಬಾಡಿಗೆ ಮನೆಯ ವಾಸಿಗಳು ಈ ಕೆಳಕಂಡ ಮಾರ್ಗಸೂಚಿಯನ್ನು ಅನುಸರಿಸಿ ಯೋಜನೆಯ ಪ್ರಯೋಜನ ಪಡೆಯಬಹುದು ಎಂದು ತಿಳಿಸಿದೆ.

RELATED ARTICLES

Related Articles

TRENDING ARTICLES