Sunday, May 12, 2024

ಸೂಲಿಬೆಲೆ ದೇಶಭಕ್ತಿಗೆ ಕಾಂಗ್ರೆಸ್ ಸರ್ಟಿಫಿಕೇಟ್ ಬೇಕಾಗಿಲ್ಲ : ಸಿ.ಟಿ ರವಿ

ಚಿಕ್ಕಮಗಳೂರು : ಚಕ್ರವರ್ತಿ ಸೂಲಿಬೆಲೆ ದೇಶಭಕ್ತಿಗೆ ಕಾಂಗ್ರೆಸ್ ಸರ್ಟಿಫಿಕೇಟ್ ಬೇಕಾಗಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಮಾಜಿ ಸಚಿವ ಸಿ.ಟಿ ರವಿ ತಿರುಗೇಟು ನೀಡಿದ್ದಾರೆ.

ಚಿಕ್ಕಮಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಕಾಂಗ್ರೆಸ್ ನಾಯಕರ ಕಣ್ಣಿಗೆ ಚಕ್ರವರ್ತಿ ಸೂಲಿಬೆಲೆ ಲಾಡೆನ್ ತರ ಕಾಣ್ತಿದ್ದಾರಾ? ಎಂದು ಪ್ರಶ್ನೆ ಮಾಡಿದ್ದಾರೆ.

ಲಾಡೆನ್ ಬಂದ್ರೆ ಬಿಟ್ಕೊಳ್ತಾರೆ, ಚಕ್ರವರ್ತಿ ಸೂಲಿಬೆಲೆ ವಿಚಾರ ಗೋಷ್ಠಿಯನ್ನು ರದ್ದು ಮಾಡ್ತಾರೆ. ಇವರು ಪ್ರಜಾಪ್ರಭುತ್ವದ ಬಗ್ಗೆ ಮಾತನಾಡುತ್ತಾರೆ. ಅಗೋಷಿತ‌ ತುರ್ತು ಪರಿಸ್ಥಿತಿ ಅಂತ ಕರೆಯೋದಿಲ್ಲ. ಅಧಿಕಾರದ ಅತಿಯಾದ ಮದ ಅಂತ ಹೇಳ್ಬೋದು ಎಂದು ಸಿ.ಟಿ ರವಿ ಕುಟುಕಿದ್ದಾರೆ.

ಇದನ್ನೂ ಓದಿ : ಸಭೆ ಕರೆದವರು ಟೈಮ್ ಸರಿಯಾಗಿ ಬರಬೇಕು, ಜವಾಬ್ದಾರಿ ಇರಬೇಕು : ಅಶ್ವತ್ಥನಾರಾಯಣ ಕಿಡಿ

ಮದ ಇಳ್ಸೋಕೆ ಹೆಚ್ಚು ಟೈಮ್ ಬೇಕಿಲ್ಲ

ಅಧಿಕಾರದ ಅತಿಯಾದ ಮದ ಹೆಚ್ಚು‌ ದಿನ‌ ಇರಲು ಸಾಧ್ಯವಿಲ್ಲ. ಹಿಂದೆ ಕಾಂಗ್ರೆಸ್, ಸಂವಿಧಾನವನ್ನೇ ಬುಡಮೇಲು ಮಾಡಿ, ಪ್ರಜಾಪ್ರಭುತ್ವವನ್ನೇ ಹತ್ತಿಕ್ಕಿತ್ತು. ಜನ ಹಿಂದೆ ಕಾಂಗ್ರೆಸ್ಸಿಗೆ ಬುದ್ಧಿ ಕಲಿಸಿದ್ದನ್ನು ನೆನಪಿಟ್ಟುಕೊಳ್ಳಬೇಕು. ಮದ ಇಳಿಯೋದಕ್ಕೆ-ಇಳ್ಸೋದಕ್ಕೆ ಬಹಳ ಕಾಲಬೇಕಾಗಲ್ಲ ಎಂದು ಪರೋಕ್ಷವಾಗಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಧೂಳಿಪಟ ಆಗಲಿದೆ ಎಂದು ಟಕ್ಕರ್ ಕೊಟ್ಟಿದ್ದಾರೆ.

ಅಹಂಕಾರದಿಂದ ಹೇಳಿಕೆ ನೀಡಿದ್ದಾರೆ

ಸಚಿವ ಎಂ.ಬಿ ಪಾಟೀಲ್ ಜೈಲಿಗೆ ಹಾಕುತ್ತೇವೆ ಎಂದು ಅಧಿಕಾರದ ಅಹಂಕಾರದಿಂದ ಹೇಳಿದ್ದಾರೆ. ಇದನ್ನು ಖಂಡಿಸುತ್ತೇವೆ ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ. ಚಕ್ರವರ್ತಿ ಸೂಲಿಬೆಲಿಯವರು ಮೈಸೂರಿನಲ್ಲಿ ಸಾರ್ವಕರ್ ಕುರಿತು ಕಾರ್ಯಕ್ರಮ ಆಯೋಜನೆ ಮಾಡಿದ್ದರು. ಅದಕ್ಕೆ ಅನುಮತಿ ಕೊಡಬಾರದು, ಸಮಸ್ಯೆ ಮಾಡಬೇಕು ಎಂದು ಕಾಂಗ್ರೆಸ್ ಸಚಿವರು ಪ್ರಯತ್ನ ಮಾಡಿದ್ರು. ಅದಕ್ಕೆ ಚಕ್ರವರ್ತಿ ಅವರು ಅಭಿವ್ಯಕ್ತಿ ಸ್ವಾತಂತ್ರ್ಯ ಹತ್ತಿಕ್ಕುತ್ತಿದೆ. ಇದು ಹಿಟ್ಲರ್ ಸರ್ಕಾರ ಅಂದಿದ್ದಾರೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

RELATED ARTICLES

Related Articles

TRENDING ARTICLES