Thursday, April 18, 2024

ಆತಂಕ ಬೇಡ : ಬಾಡಿಗೆದಾರರಿಗೂ 200 ಯುನಿಟ್ ಫ್ರೀ ವಿದ್ಯುತ್

ಬೆಂಗಳೂರು : ಬಾಡಿಗೆ ಮನೆಗಳಲ್ಲಿ ಇರುವವರಿಗೆ ‘ಗೃಹಜ್ಯೋತಿ’ ಸಿಗಲ್ವಾ?ಎಂಬ ಗೊಂದಲಕ್ಕೆ ಖುದ್ದು ಇಂಧನ ಸಚಿವ ಕೆ.ಜೆ ಜಾರ್ಜ್ ಸ್ಪಷ್ಟನೆ ಕೊಟ್ಟಿದ್ದು, ಗೊಂದಲಗಳಿಗೆ ತೆರೆ ಎಳೆದಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿರುವ ಅವರು, ಬಾಡಿಗೆದಾರರಿಗೂ 200 ಯುನಿಟ್ ವಿದ್ಯುತ್ ಉಚಿತ ಎಂದು ಹೇಳಿದ್ದಾರೆ. ಜೊತೆಗೆ ಕೆಲವು ಷರತ್ತು ಅಪ್ಲೈ ಆಗಲಿದೆ ಎಂದೂ ತಿಳಿಸಿದ್ದಾರೆ.

ಬಾಡಿಗೆದಾರರು ಅರ್ಜಿ ಸಲ್ಲಿಸುವಾಗ ಎಷ್ಟು ವರ್ಷದಿಂದ ಬಾಡಿಗೆ ಮನೆಯಲ್ಲಿ ವಾಸವಿದ್ದೇವೆ ಎಂಬ ದಾಖಲೆಗಳು ಇರಬೇಕು. ಮನೆ ಮಾಲೀಕರು ತೆರಿಗೆ ಕಟ್ಟಿರಬೇಕು. ವಿದ್ಯುತ್ ಬಿಲ್ ಹಾಗೂ ಅಗ್ರಿಮೆಂಟ್ ಇರಬೇಕು. ಆಗ ಮಾತ್ರ ಬಾಡಿಗೆದಾರರಿಗೂ ಉಚಿತ ವಿದ್ಯುತ್ ನೀಡಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.

ಪವರ್ ಟಿವಿ ವರದಿಯ ಮೆಗಾ ಇಂಪ್ಯಾಕ್ಟ್

ಬಾಡಿಗೆದಾರರಿಗೆ ಸರ್ಕಾರ ಶಾಕ್ ಎಂದು ಪವರ್ ಟಿವಿ ವರದಿಯ ಬೆನ್ನಲ್ಲೇ ರಾಜ್ಯ ಸರ್ಕಾರ ಅಲರ್ಟ್ ಆಗಿದೆ. ಜನರ ಪರವಾಗಿ ಪವರ್ ಟಿವಿ ಚಾರ್ಜ್ ಮಾಡುತ್ತಿದ್ದಂತೆ ಸರ್ಕಾರ ಎಚ್ಚೆತ್ತಿದೆ. ಈಗ ಬಾಡಿಗೆದಾರರಿಗೂ 200 ಯೂನಿಟ್​ ಕರೆಂಟ್​ ಫ್ರೀ, ಬಾಡಿಗೆದಾರರಿಗೆ ಖಂಡಿತ ಗೃಹಜ್ಯೋತಿ ಸೌಲಭ್ಯ ಸಿಗುತ್ತೆ ಎಂದು ಖುದ್ದು ಇಂಧನ ಸಚಿವ ಕೆ.ಜೆ ಜಾರ್ಜ್ ಸ್ಪಷ್ಟನೆ ನೀಡಿದ್ದಾರೆ.

ನಿನ್ನೆ ಶಾಕ್ ಕೊಟ್ಟಿದ್ದ ಜಾರ್ಜ್​

ಒಂದು ಆರ್.ಆರ್ ಸಂಖ್ಯೆಗೆ ಮಾತ್ರ ‘ಗೃಹಜ್ಯೋತಿ’ ಯೋಜನೆಯಡಿ ಉಚಿತ ವಿದ್ಯುತ್ ನೀಡಲಾಗುತ್ತದೆ ಎಂದು ಇಂಧನ ಸಚಿವ ಕೆ.ಜೆ ಜಾರ್ಜ್​ ಸರ್ಕಾರದ ನಿಲುವನ್ನು ಪುನರುಚ್ಚರಿಸಿದ್ದಾರೆ. ಬಾಡಿಗೆದಾರರು ಹಾಗೂ ಮಾಲೀಕರು ಎಂದು ನಾವು ತಾರತಮ್ಯ(ವ್ಯತ್ಯಾಸ) ಮಾಡುತ್ತಿಲ್ಲ. ಸ್ಥಾವರ ಎಂಬುದರ ಅರ್ಥ ಒಂದು ಆರ್.ಆರ್ ನಂಬರ್. ಯಾರು ಎಷ್ಟೇ ಆರ್.ಆರ್ ನಂಬರ್ ಹೊಂದಿರಬಹುದು. ಆದರೆ, ಒಂದು ಆರ್.ಆರ್ ನಂಬರ್ ಗೆ ಮಾತ್ರ ‘ಗೃಹಜ್ಯೋತಿ’ ಯೋಜನೆಯಡಿ ಬರುತ್ತದೆ ಎಂದು ಹೇಳಿದ್ದರು.

ಬಾಡಿಗೆದಾರರಿಗೂ ರೂಲ್ಸ್?

  • ಉಚಿತ ಕರೆಂಟ್ ಪಡೆಯಲು ಸೂಕ್ತ ದಾಖಲೆ ಸಲ್ಲಿಸಬೇಕು
  • ಎಷ್ಟು ವರ್ಷಗಳಿಂದ ಬಾಡಿಗೆ ಇದ್ದಾರೆ ಎಂಬ ದಾಖಲೆ
  • ಒಂದೇ ಮನೆಯಲ್ಲಿ ಕನಿಷ್ಟ 1 ವರ್ಷದಿಂದ ಬಾಡಿಗೆಗೆ ಇದ್ರೆ ಗೃಹಜ್ಯೋತಿ ಅನ್ವಯ
  • ವಿದ್ಯುತ್ ಬಿಲ್, ಬಾಡಿಗೆ ಕರಾರು ಪತ್ರ ಸಲ್ಲಿಸಬೇಕು
  • ಮನೆ ಮಾಲೀಕ ಆದಾಯ ತೆರಿಗೆ ಸಲ್ಲಿಸಿರಬೇಕು

RELATED ARTICLES

Related Articles

TRENDING ARTICLES