Saturday, January 11, 2025

ಜನಾರ್ದನ ಹೋಟೆಲ್ ನಲ್ಲಿ ದೋಸೆ ಸವಿದ ವೆಂಕಯ್ಯ ನಾಯ್ಡು

ಬೆಂಗಳೂರು : ಮಾಜಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಬೆಂಗಳೂರಿನ ಜನಾರ್ದನ ಹೋಟೆಲ್ ನಲ್ಲಿ ದೋಸೆ ಸವಿದಿದ್ದಾರೆ.

ದಿ.ಅಂಬರೀಶ್ ಹಾಗೂ ಸುಮಲತಾ ಅವರ ಪುತ್ರ ಅಭಿಷೇಕ್ ಅಂಬರೀಶ್ ವಿವಾಹಕ್ಕೆ ಆಗಮಿಸಿದ್ದ ಮಾಜಿ ಉಪ ರಾಷ್ಟ್ರಪತಿ ಎಂ. ವೆಂಕಯ್ಯನಾಯ್ಡು ಹಾಟ್ ಫೇವರಿಟ್ ಮಸಾಲೆ ದೋಸೆ ಸವಿದಿದ್ದಾರೆ.

ಬೆಂಗಳೂರಿಗೆ ಭೇಟಿ ನೀಡಿದಾಗಲೆಲ್ಲಾ ಶಿವಾನಂದ ವೃತ್ತದ ಸಮೀಪದಲ್ಲಿರುವ ಜನಾರ್ದನ ಹೋಟೆಲ್ ಗೆ ಎಂ. ವೆಂಕಯ್ಯ ನಾಯ್ಡು ಭೇಟಿ ನೀಡುತ್ತಾರೆ. ಮಸಾಲೆ ದೋಸೆ ಸವಿದು ಕಾಫಿ ಸೇವಿಸಿ ಕೆಲಕಾಲ ಆಪ್ತರ ಜೊತೆ ವೆಂಕಯ್ಯ ನಾಯ್ಡು ಅವರು ಕಾಲ ಕಳೆದಿದ್ದಾರೆ.

ವೆಂಕಯ್ಯ ನಾಯ್ಡು ಅವರು ಹಲವು ವರ್ಷದಿಂದ ಹೋಟೆಲ್ ನಲ್ಲಿ ಕೆಲಸ ಮಾಡುತ್ತಿರುವವರೊಂದಿಗೆ ಆತ್ಮೀಯವಾಗಿ ಮಾತನಾಡಿದರು. ಹೋಟೆಲ್ ಮಾಲೀಕರನ್ನು ಭೇಟಿಯಾದರು. ಈ ಕುರಿತು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ವೆಂಕಯ್ಯ ನಾಯ್ಡು ಪೋಸ್ಟ್ ಹಾಕಿದ್ದಾರೆ.

ಇದನ್ನೂ ಓದಿ : ಅಭಿ ಬಾಳಲ್ಲಿ ಅವಿವಾ ತಂಗಾಳಿ, ಮಗನ ಮದ್ವೆ ನೋಡಿ ಸುಮಲತಾ ಭಾವುಕ : ಹೇಗಿತ್ತು ಕಲ್ಯಾಣೋತ್ಸವ?

ನನ್ನ ನೆಚ್ಚಿನ ಮಸಾಲೆ ದೋಸೆ ಸವಿದೆ

ಬೆಳಗ್ಗೆಯ ಉಪಹಾರಕ್ಕೆ ನನ್ನ ನೆಚ್ಚಿನ ಮಸಾಲೆ ದೋಸೆಯನ್ನು ಸವಿದೆ. ಎರಡು ದಶಕದಿಂದ ಬೆಂಗಳೂರಿಗೆ ಬಂದಾಗ ಜನಾರ್ದನ ಹೋಟೆಲ್ ಗೆ ತೆರಳಿ ಉಪಹಾರ ಸೇವಿಸುವ ರೂಢಿಯಿದೆ. ಅದರಂತೆ ಇಂದು ಕೂಡ ದೋಸೆ ಸವಿದೆ. ಹೋಟೆಲ್ ನ ಮಾಲೀಕರು ಹಾಗೂ ಸಿಬ್ಬಂದಿಯನ್ನು ಭೇಟಿಯಾದೆ ಎಂದು ಟ್ವೀಟ್ ನಲ್ಲಿ ಬರೆದುಕೊಂಡಿದ್ದಾರೆ.

ಅಭಿಷೇಕ್ ಮದುವೆಯಲ್ಲಿ ಭಾಗಿ

ಬಳಿಕ, ನಗರದ ಅರಮನೆ ಮೈದಾನದಲ್ಲಿ ನಡೆದ ಅಭಿಷೇಕ್ ಅಂಬರೀಶ್ ಮದುವೆ ಸಮಾರಂಭದಲ್ಲಿ ವೆಂಕಯ್ಯ ನಾಯ್ಡು ಭಾಗಿಯಾದರು. ನೂತನ ವಧು ವರರಿಗೆ ಆಶೀರ್ವಾದ ಮಾಡಿ ಶುಭ ಕೋರಿದರು. ಈ ವೇಳೆ ನಟ ರಜನಿಕಾಂತ್, ಸುಮಲತಾ, ರಾಕ್ ಲೈನ್ ವೆಂಕಟೇಶ್ ಹಾಗೂ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.

RELATED ARTICLES

Related Articles

TRENDING ARTICLES