Wednesday, January 22, 2025

ನಮ್ಮ ಇಲಾಖೆಯಲ್ಲಿ ಹೆಣ್ಣುಮಕ್ಕಳೇ ಇದ್ದೇವೆ, ಒಳ್ಳೆಯ ಕೆಲಸವನ್ನು ಮಾಡ್ತೀವಿ : ಲಕ್ಷ್ಮಿ ಹೆಬ್ಬಾಳ್ಕರ್

ಬೆಂಗಳೂರು : ನಮ್ಮ ಇಲಾಖೆಯಲ್ಲಿ ಎಲ್ಲ ಹೆಣ್ಣು ಮಕ್ಕಳೇ ಇದ್ದೇವೆ, ಒಳ್ಳೆಯ ಕೆಲಸವನ್ನು ಮಾಡ್ತೀವಿ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಮೂರನೇ ಮಹಡಿಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ನೂತನ ಕಚೇರಿಯಲ್ಲಿ ಮಹಾಲಕ್ಷ್ಮಿ ಪೂಜೆ ಇಟ್ಟುಕೊಂಡಿದ್ದೇವು. ನನ್ನ ಆರಾಧ್ಯದೈವ ಗಂಗಾಧರ ಅಜ್ಜ ನೊಣವಿನ ಕೆರೆ ಅಜ್ಜನ ಪೂಜೆಯನ್ನು ಮಾಡಿದ್ವಿ ಎಂದು ಹೇಳಿದ್ದಾರೆ.

ಕೊಲ್ಲಾಪುರ ಲಕ್ಷ್ಮೀ, ಮನೆ ದೇವರು ವೀರಭದ್ರೇಶ್ವರ ದರ್ಶನವನ್ನು ಮಾಡಕೊಂಡು ಬಂದು ಪೂಜೆ ಮಾಡಿದ್ದೇವಿ. ನೂತನ ಕಾಂಗ್ರೆಸ್ ಸರಕಾರಕ್ಕೆ ಒಳ್ಳೆಯ ಹೆಸರು ಬರಲಿ. ನನ್ನ ಇಲಾಖೆ, ನನ್ನ ಮೇಲೆ ವಿಶ್ವಾಸ ಇಟ್ಟು ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಮುಖಂಡರುಗಳ ಜವಬ್ದಾರಿಯನ್ನು ಕೊಟ್ಟಿದ್ದಾರೆ ಎಂದಿದ್ದಾರೆ.

ಇದನ್ನೂ ಓದಿ : ಸೊರಬದಲ್ಲಿ ಶಿವಣ್ಣ ಮ್ಯೂಸಿಕಲ್ ನೈಟ್ ನಡೆಸಿಕೊಡ್ತಾರೆ : ಗೀತಾ ಶಿವರಾಜ್ ಕುಮಾರ್

ಸರಕಾರಕ್ಕೆ ಒಳ್ಳೆಯ ಹೆಸರನ್ನು ತರಲಿ

ನನ್ನ ಜವಾಬ್ದಾರಿಯನ್ನು ಗಮನದಲ್ಲಿಟ್ಟುಕೊಂಡು ರಾಜ್ಯದ ಜನತೆಗೆ ಒಳ್ಳೆಯ ಕಾರ್ಯಕ್ರಮಗಳನ್ನು ಕೊಡುತ್ತೇನೆ. ಒಳ್ಳೆಯ ಕೆಲಸವನ್ನು ಮಾಡ್ಲಿ, ಸರಕಾರಕ್ಕೆ ಒಳ್ಳೆಯ ಹೆಸರನ್ನು ತರಲಿ ಅಂತ ಲಕ್ಷ್ಮೀ ಪೂಜೆಯನ್ನು ಮಾಡಿದ್ದೇವೆ. ನಮ್ಮ ಇಲಾಖೆಯಲ್ಲಿ ಎಲ್ಲ ಹೆಣ್ಣು ಮಕ್ಕಳೇ ಇದ್ದೇವೆ ಒಳ್ಳೆಯ ಕೆಲಸವನ್ನು ಮಾಡ್ತೀವಿ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದಾರೆ.

ಎಲ್ಲರಿಗೂ ಗೃಹಲಕ್ಷ್ಮಿ ಯೋಜನೆ ಮುಟ್ಟಬೇಕು

ಒಳ್ಳೆಯ ಕೆಲಸ ಮಾಡಬೇಕು ಅಂತ ಮೊದಲಿನಿಂದಲೂ ಅಂದು ಕೊಡ್ಡಿದ್ದೇವೆ. ಒಳ್ಳೆಯ ಮನಸ್ಸು ಇಟ್ಟುಕೊಂಡು ಪೂಜೆಯ ಮೂಲಕ ಕಾರ್ಯವನ್ನು ಪ್ರಾರಂಭ ಮಾಡಿದ್ದೇವೆ. ನಮ್ಮ ಇಲಾಖೆಯಲ್ಲಿ ಬರುವ ಗೃಹಲಕ್ಷ್ಮಿ ಯೋಜನೆ ಪ್ರಮುಖವಾಗಿ ಗ್ಯಾರಂಟಿ ಯೋಜನೆ. ಇಲಾಖೆಗೆ, ಸರಕಾರಕ್ಕೆ ಹೆಸರು ಬರಬೇಕು. ಜನಸಾಮಾನ್ಯರಿಗೆ ಈ ಯೋಜನೆ ಮುಟ್ಟಬೇಕು ಅಂತ ದೇವರಲ್ಲಿ ಪ್ರಾರ್ಥನೆ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.

RELATED ARTICLES

Related Articles

TRENDING ARTICLES