Monday, December 23, 2024

ಈ ಸರ್ಕಾರ ದರ ಏರಿಕೆ ವಿರುದ್ಧ ಅಂದಿದ್ರು, ಬಂದ ತಕ್ಷಣವೇ ದರ ಏರಿಕೆ ಮಾಡ್ತಿದ್ದಾರೆ : ಅಶ್ವತ್ಥನಾರಾಯಣ ಕಿಡಿ

ಬೆಂಗಳೂರು : ಈ ಸರ್ಕಾರದ ದರ ಏರಿಕೆ ವಿರುದ್ಧ ಅಂತ ಕಾಂಗ್ರೆಸ್ ನಾಯಕರು ಬೊಬ್ಬೆ ಹೊಡೆದಿದ್ದರು. ಆದರೆ, ಅಧಿಕಾರಕ್ಕೆ ಬಂದ ತಕ್ಷಣವೇ ಇದೀಗಾ ದರ ಏರಿಕೆ ಮಾಡಿದ್ದಾರೆ ಎಂದು ಮಾಜಿ ಸಚಿವ ಅಶ್ವತ್ಥನಾರಾಯಣ ಛೇಡಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಹೇಳಿಕೆಗಳ ಭರಾಟೆ ಹೆಚ್ಚಾಗಿದೆ. ಈ ಹೇಳಿಕೆ ಸೌಂಡ್ ಗಳಿಂದ ಏನು ವರ್ಕ್ ಔಟ್ ಆಗೋದಿಲ್ಲ. ಪೇಪರ್ ಹೇಳಿಕೆಗಳು, ಪೇಪರ್ ಟೈಗರ್ ಬೇಕಾಗಿಲ್ಲ. ಕೆಲಸ ಮಾಡೋದಕ್ಕೆ ಶುರುಮಾಡಿ ಎಂದು ಕಾಂಗ್ರೆಸ್ ನಾಯಕರಿಗೆ ಟಕ್ಕರ್ ಕೊಟ್ಟಿದ್ದಾರೆ.

200 ಯುನಿಟ್ ವಿದ್ಯುತ್ ಫ್ರೀ ಕೊಡ್ತೀವಿ ಅಂದಿದ್ರು. ಇದೀಗ ವಿದ್ಯುತ್ ದರ ಹೆಚ್ಚು ಮಾಡಿದ್ದಾರೆ. ಇವಾಗ 60 ಯುನಿಟ್ ಗಿಂತ ಹೆಚ್ಚಾಗಿ ಯೂಸ್ ಮಾಡಿದ್ರೆ, ಎಲ್ಲವೂ ಕ್ಯಾನ್ಸಲ್ ಮಾಡುತ್ತೇವೆ ಅನ್ನೋದು ತಪ್ಪು. ಈ ಸರ್ಕಾರದ ದರ ಏರಿಕೆ ವಿರುದ್ಧನಾ? ವಿದ್ಯುತ್ ದರ ಏರಿಕೆ ಜೊತೆಗೆ, ಮಿನಿಮಮ್ ಸ್ಲ್ಯಾಬ್ ದರ ಸಹ 56 ರೂಪಾಯಿ ಹೆಚ್ಚಳ ಮಾಡಿದ್ದಾರೆ. ಎಲ್ಲ ಕಡೆಯೂ ದರ ಕಡಿಮೆ‌ ಮಾಡ್ತಾ ಇದ್ದಾರೆ, ಇವ್ರು ಏರಿಕೆ ಮಾಡ್ತಾ ಇದ್ದಾರೆ ಎಂದು ಕುಟುಕಿದ್ದಾರೆ.

ಇದನ್ನೂ ಓದಿ : ಒಂದು RR ಸಂಖ್ಯೆಗೆ ಮಾತ್ರ ಕರೆಂಟ್ ಉಚಿತ!

ನಾನು ಪ್ರಾಣಿಹತ್ಯೆ ನಿಷೇಧ ಪರ

ಗೋ ಹತ್ಯೆ ನಿಷೇಧ ಕಾಯ್ದೆ ತಿದ್ದುಪಡಿ ವಿಚಾರವಾಗಿ ಪ್ರತಿಕ್ರಿಯಿಸಿದ ಅಶ್ವತ್ಥನಾರಾಯಣ ಅವರು, ನಾನು ಪ್ರಾಣಿಹತ್ಯೆ ನಿಷೇಧ ಪರವಾಗಿದ್ದೇನೆ. ಇಡೀ ಭಾರತದಲ್ಲಿ, ನಾಡಿನಲ್ಲಿ ಗೋ ಹತ್ಯೆ ನಿಷೇಧ ಆಗಬೇಕು ಅನ್ನೋದು ಎಲ್ಲರ ಆಶಯ. ಆದರೆ, ಈ ಸರ್ಕಾರದಲ್ಲಿ ಉದ್ದಟತನ ತೋರುತ್ತಿದ್ದಾರೆ ಎಂದು ಹೇಳಿದ್ದಾರೆ.

ನಾಳೆ ಕಾಂಗ್ರೆಸ್ ವಿರುದ್ಧ ಪ್ರತಿಭಟನೆ

ಹಾಲಿನ ಪ್ರೋತ್ಸಾಹ ಧನ ಕಡಿತ ಹಾಗೂ ವಿದ್ಯುತ್ ದರ ಏರಿಕೆ ಖಂಡಿಸಿ ನಾಳೆ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ ನಡೆಸಲಿದೆ. ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಬೆಳಗ್ಗೆ 11ಕ್ಕೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಬೆಂಗಳೂರು ನಗರದ ಬಿಜೆಪಿಯ‌ ಮೂರು ಜಿಲ್ಲಾ ಘಟಕಗಳಿಂದ ಪ್ರತಿಭಟನೆ ಆಯೋಜನೆ ಮಾಡಲಾಗಿದೆ.

RELATED ARTICLES

Related Articles

TRENDING ARTICLES