Wednesday, January 22, 2025

Abhishek Ambareesh Marriage : ಅವಿವಾ ಬಿದ್ದಪ್ಪ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಅಭಿಷೇಕ್ ಅಂಬರೀಶ್

ಬೆಂಗಳೂರು:  ಅಭಿಷೇಕ್ ಅಂಬರೀಷ್ ಜೊತೆ​ ಅವಿವಾ ಮದುವೆ ಬೆಂಗಳೂರಿನ ಅರಮನೆ ಮೈದಾನದಲ್ಲಿಅದ್ಧೂರಿಯಾಗಿ ನಡೆದಿದೆ. 

ಹೌದು, ಶುಭ ಮುಹೂರ್ತದಲ್ಲಿ ಮಾಂಗಲ್ಯಧಾರಣೆ ನೆರವೇರಿದ್ದು,ಎಲ್ಲರೂ ನವ ದಂಪತಿಗೆ ಶುಭಾಶಯ ಕೋರುತ್ತಿದ್ದಾರೆ.

ಬೆಂಗಳೂರಿನ ಮಾಣಿಕ್ಯ ಚಾಮರ ವಜ್ರದಲ್ಲಿ ಈ ಅದ್ದೂರಿ ಮದುವೆ ನಡೆಯುತ್ತಿದೆ. ಒಕ್ಕಲಿಗರ ಸಮುದಾಯದಂತೆ ಮದುವೆ ಶಾಸ್ತ್ರಗಳು ನೆರವೇರಿವೆ.

ಇಂದು (ಜೂನ್ 5) ನಡೆದ ಅದ್ದೂರಿ ಮದುವೆ ಸಮಾರಂಭದಲ್ಲಿ ಅಭಿಷೇಕ್​ ಅವರು ಅವಿವಾಗೆ (Aviva Bidapa)  ಮಾಂಗಲ್ಯಧಾರಣೆ ಮಾಡಿದರು. ಸೆಲೆಬ್ರಿಟಿಗಳು, ಕುಟುಂಬದವರ ಸಮ್ಮುಖದಲ್ಲಿ ಈ ವಿವಾಹಕಾರ್ಯ ನೆರವೇರಿದೆ.

ಇನ್ನೂ ಹಲವು ವರ್ಷಗಳ ಕಾಲ ಪ್ರೀತಿಸುತ್ತಿದ್ದ ಅಭಿಷೇಕ್ ಅಂಬರೀಷ್ (Abhishek Ambareesh) ಹಾಗೂ ಅವಿವಾ ಈಗ ಪತಿ-ಪತ್ನಿಯರು.

ಅಭಿಷೇಕ್ ಅಂಬರೀಷ್ ಹಾಗೂ ಅವಿವಾ ಮದುವೆಗೆ ಸೆಲೆಬ್ರಿಟಿಗಳ ದಂಡು ನೆರೆದಿದೆ. ಅಂಬಿ ಪುತ್ರನ ಮದುವೆಗೆ ಖ್ಯಾತ ನಟಿ ಸುಹಾಸಿನಿ ಆಗಮಿಸಿದ್ದಾರೆ. ಟಾಲಿವುಡ್ ನಟ ಮೋಹನ್ ಬಾಬು, ಮನೋಜ್ ಮಂಚು ಮೊದಲಾದವರು ಆಗಮಿಸಿದ್ದಾರೆ. ಇಷ್ಟೇ ಅಲ್ಲದೆ ಇನ್ನೂ ಅನೇಕರು ಈ ವಿವಾಹ ಕಾರ್ಯಕ್ಕೆ ಬರಲಿದ್ದಾರೆ.

ಇನ್ನೂ ಹಲವು ವರ್ಷಗಳ ಕಾಲ ಪ್ರೀತಿಸುತ್ತಿದ್ದ ಅಭಿಷೇಕ್ ಅಂಬರೀಷ್ (Abhishek Ambareesh) ಹಾಗೂ ಅವಿವಾ ಈಗ ಪತಿ-ಪತ್ನಿಯರು.

 

RELATED ARTICLES

Related Articles

TRENDING ARTICLES