Monday, December 23, 2024

ಸಕ್ರೆಬೈಲಿನಲ್ಲಿ ಮೂರು ಆನೆಗಳಿಗೆ ನಾಮಕರಣ : ಹೆಸರು ಏನು ಗೊತ್ತಾ?

ಬೆಂಗಳೂರು : ವಿಶ್ವ ಪರಿಸರ ದಿನಾಚರಣೆ ಹಿನ್ನೆಲೆಯಲ್ಲಿ ಶಿವಮೊಗ್ಗ ಜಿಲ್ಲೆಯ ಸಕ್ರೆಬೈಲ್ ಆನೆಬಿಡಾರದ ಮೂರು ಆನೆಗಳಿಗೆ ನಾಮಕರಣ ಮಾಡಲಾಗಿದೆ.

ಪ್ರವಾಸೋದ್ಯಮ, ಅರಣ್ಯ ಇಲಾಖೆಯ ಸಹಯೋಗದಲ್ಲಿ ಇಂದು ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಗಿದೆ. ಈ ವೇಳೆ  ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಉಪಸ್ಥಿತಿಯಲ್ಲಿ ಮೂರು ಆನೆಗಳಿಗೆ ಹೆಸರಿಡಲಾಗಿದೆ.

ಧೃವ, ಕೃಷ್ಣ, ಅಭಿಮನ್ಯು

ಸಕ್ರೆಬೈಲ್ ನಲ್ಲಿ ಎರಡೂವರೆ ವರ್ಷಗಳ ಹಿಂದೆ ಮರಿ ಹಾಕಿದ್ದ ಕುಂತಿಯ ನಾಲ್ಕನೇ ಮರಿಗೆ ಧೃವ(ಧ್ರುವ) ಎಂಬ ಹೆಸರಿಡಲಾಗಿದೆ. ಇನ್ನು ಚಿಕ್ಕಮಗಳೂರಿನ ಕೊಪ್ಪದಲ್ಲಿ ಸೆರೆ ಸಿಕ್ಕ ಆನೆಗೆ ಕೃಷ್ಣ ಮತ್ತು ಇನ್ನೂ ಸ್ಕ್ರಾಲ್ ನಲ್ಲಿ ತರಬೇತಿ ಪಡೆಯುತ್ತಿರುವ ಆನೆಗೆ ಅಭಿಮನ್ಯು ಎಂಬ ಹೆಸರಿಡಲಾಗಿದೆ.

ಇದನ್ನೂ ಓದಿ : ಆನೆ ದಾಳಿ : ಮೃತಪಟ್ಟವರ ಕುಟುಂಬಕ್ಕೆ 15 ಲಕ್ಷ ರೂ. ಪರಿಹಾರ ಚೆಕ್ ವಿತರಣೆ

ನಾಲ್ವರ ಮೇಲೆ ದಾಳಿ ನಡೆಸಿದ್ದ ಅಭಿಮನ್ಯು

ಅಭಿಮನ್ಯು ಎಂದು ನಾಮಕರಣಗೊಂಡ ಆನೆಯು ದಾವಣಗೆರೆಯ ಹೊನ್ನಾಳಿ ಬಳಿ ಕೂಂಬಿಂಗ್ ವೇಳೆ ಆನೆ ಬಿಡಾರದ ವೈದ್ಯ ಡಾ. ವಿನಯ್ ಮೇಲೆ ದಾಳಿ ನಡೆಸಿ ಅವರನ್ನು ಹಾಸಿಗೆ ಹಿಡಿಯುವಂತೆ ಮಾಡಿತ್ತು. ಇದಕ್ಕೂ ಮುನ್ನ ನಾಲ್ವರ ಮೇಲೆ ದಾಳಿ ನಡೆಸಿತ್ತು. ಚನ್ನಗಿರಿಯ ನಲ್ಲೂರಿನಲ್ಲಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ತಾಯಿ ಮಗಳನ್ನ ಕೂಡ ಸಾಯಿಸಿತ್ತು.

ಇದೀಗ ಈ ಮೂರು ಆನೆಗಳ ಆಗಮನದಿಂದ ಆನೆ ಬಿಡಾರದಲ್ಲಿ ಆನೆಗಳ ಸಂಖ್ಯೆ 20ಕ್ಕೆ ಏರಿಕೆಯಾಗಿದೆ. ಮಧ್ಯಪ್ರದೇಶ, ಉತ್ತರ ಪ್ರದೇಶಕ್ಕೆ ಕಳುಹಿಸಿದ ಮೇಲೆ ಹಾಗೂ ಎರಡು ಮೂರು ಆನೆಗಳ ಸಾವಿನ ಬಳಿಕ ಆನೆಗಳ ಸಂಖ್ಯೆ 17ಕ್ಕೆ ಇಳಿದಿತ್ತು.

RELATED ARTICLES

Related Articles

TRENDING ARTICLES