Wednesday, January 22, 2025

Viral video : ಗಂಗಾನದಿಗೆ ಕುಸಿದು ಬಿದ್ದ ನಿರ್ಮಾಣ ಹಂತದ ಸೇತುವೆ

ಬೆಂಗಳೂರು : ಬಿಹಾರದಲ್ಲಿ ಗಂಗಾನದಿಗೆ ಅಡ್ಡಲಾಗಿ ಕಟ್ಟಲಾಗುತ್ತಿದ್ದ ನಿರ್ಮಾಣ ಹಂತದ ಬೃಹತ್ ಸೇತುವೆ ನೋಡನೋಡುತ್ತಲೇ ಕುಸಿದು ಬಿದ್ದಿದೆ. ಈ ಬ್ರಿಡ್ಜ್ ಕುಸಿದು ಬಿದ್ದಿರುವುದು ಎರಡನೇ ಬಾರಿ.

ಹೌದು, ಬಿಹಾರದ ಭಾಗಲ್ಪುರದಲ್ಲಿ ಗಂಗಾನದಿಯ ಮೇಲೆ ನಿರ್ಮಿಸಲಾಗುತ್ತಿದ್ದ ಅಗ್ವಾನಿ ಹಾಗೂ ಸುಲ್ತಾನ್  ಗಂಜ್ ಖೇಬಲ್ ಬ್ರಿಡ್ಜ್ ನದಿಗೆ ಕುಸಿದು ಬಿದ್ದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.

2014ರಲ್ಲಿ ಸೇತುವೆ ಉದ್ಘಾಟನೆಗೆ ಶಂಕುಸ್ಥಾಪನೆ ನೆರವೇರಿಸಲಾಗಿತ್ತು. ಈ ಸೇತುವೆ ಭಾಗಲ್ಫುರ ಹಾಗೂ ಖಗಾರಿಯಾವನ್ನು ಸಂಪರ್ಕಿಸುತ್ತದೆ. ಈ ಸೇತುವೆ ಕಸಿದಿರುವುದು ಎರಡನೇ ಬಾರಿ. ಸೇತುವೆ ಕುಸಿತುತ್ತಿರುವಾಗ ಸ್ಥಳೀಯರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ : ಕಿಲ್ಲರ್ ಕೆಎಸ್ಸಾರ್ಟಿಸಿ : ಬಸ್ ಹರಿದು ಮಹಿಳೆ ಸ್ಥಳದಲ್ಲೇ ಸಾವು

ಸೇತುವ ಕುಸಿತದಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಘಟನೆಯಲ್ಲಿ ಯಾರಾದರೂ ಗಾಯಗೊಂಡಿದ್ದಾರೆಯೇ ಎಂಬ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಈ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

2014ರ ಫೆಬ್ರವರಿ 23ರಂದು ಸೇತುವೆ ನಿರ್ಮಾಣಕ್ಕೆ ಸಿಎಂ ನಿತೀಶ್ ಕುಮಾರ್ ಅವರು ಅಡಿಪಾಯ ಹಾಕಿದ್ದರು. 1,710 ಕೋಟಿ ಅಂದಾಜು ವೆಚ್ಚದ 3,160 ಮೀಟರ್ ಉದ್ದದ ನಾಲ್ಕು ಪಥದ ಕೇಬಲ್ ತಂಗುದಾಣ ಸೇತುವೆಯ ಜೊತೆಗೆ ಅಪ್ರೋಚ್ ರಸ್ತೆಯ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿದ್ದರು.

RELATED ARTICLES

Related Articles

TRENDING ARTICLES