Monday, December 23, 2024

ಮುಸ್ಲಿಂ ಸಮುದಾಯದ ಮೇಲೆ ಈಗ ಪ್ರೀತಿ ಬಂದಿದ್ಯಾ? : ಡಿ.ಕೆ ಸುರೇಶ್ ಟಾಂಗ್

ರಾಮನಗರ : ಗೃಹಲಕ್ಷ್ಮಿ ಯೋಜನೆ ಮೂಲಕ ಕಾಂಗ್ರೆಸ್ ಮುಸ್ಲಿಂ ಕುಟುಂಬ ಒಡೆಯುವ ಕೆಲಸ ಮಾಡುತ್ತಿದೆ ಎಂಬ ಸಂಸದ ಪ್ರತಾಪ್ ಸಿಂಹ ಹೇಳಿಕೆಗೆ ಸಂಸದ ಡಿ.ಕೆ‌ ಸುರೇಶ್ ತಿರುಗೇಟು ಕೊಟ್ಟಿದ್ದಾರೆ.

ಕಬ್ಬಾಳು ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಕಾಂಗ್ರೆಸ್ ಪಕ್ಷದ್ದು ಒಡೆಯುವ ಸಂಸ್ಕೃತಿ ಅಲ್ಲ. ಬಿಜೆಪಿ ಪಕ್ಷದ್ದು ಒಡೆದು ಆಳುವ ಸಂಸ್ಕೃತಿ. ಮನೆ ಒಡೆಯೋ ಸಂಸ್ಕೃತಿ ಬಿಜೆಪಿಯವರದ್ದು ಎಂದು ಟಾಂಗ್ ಕೊಟ್ಟಿದ್ದಾರೆ.

ರಾಜ್ಯ ಸರ್ಕಾರದ ಯೋಜನೆ ಬಗ್ಗೆ ಪ್ರತಾಪ್ ಸಿಂಹಗೆ ಯಾಕೆ ಆತಂಕ. ಮುಸ್ಲಿಂ ಸಮುದಾಯದ ಮೇಲೆ ಈಗ ಪ್ರೀತಿ ಬಂದಿದ್ಯಾ? ಅದು ಅವರ ಕುಟುಂಬಕ್ಕೆ ಸಂಬಂಧಿಸಿದ ವಿಚಾರ. ಯಾರು ಯಜಮಾನಿ ಅಂತ ಅವರೇ ತೀರ್ಮಾನ ಮಾಡಿಕೊಳ್ತಾರೆ ಎಂದು ಡಿ.ಕೆ ಸುರೇಶ್ ಹೇಳಿದ್ದಾರೆ.

ಇದನ್ನೂ ಓದಿ : ಮುಸ್ಲಿಮರ ಮನೆಯಲ್ಲಿ 2 ಹೆಂಡ್ತಿ, 3 ಹೆಂಡ್ತಿ ಇದ್ದಾರೆ, ಅವರಲ್ಲಿ ಯಜಮಾನಿ ಯಾರು? : ಪ್ರತಾಪ್ ಸಿಂಹ ಟಕ್ಕರ್

ಈಗ್ಯಾಕೆ ಮುಸ್ಲಿಂ ಪರ ಪ್ರೀತಿ?

ಪ್ರತಾಪ್ ಸಿಂಹ ಸಿದ್ಧಾಂತ ಮುಸ್ಲಿಮರನ್ನು ವಿರೋಧಿಸೋದು. ಈಗ್ಯಾಕೆ ಮುಸ್ಲಿಂ ಪರ ಪ್ರೀತಿ ತೋರಿಸುವ ನಾಟಕ. ನಾವು ಕೊಟ್ಟ ಭರವಸೆಯನ್ನು ಈಡೇಸುವ ಕೆಲಸವನ್ನ ನಾವು ಮಾಡ್ತೀವಿ. ನಾವು ಮತ್ತು ನಮ್ಮ ನಾಯಕರು ಕುಟುಂಬ ಕೂಡಿಸುವ ಕೆಲಸ ಮಾಡ್ತೇವೆ ಎಂದು ತಿಳಿಸಿದ್ದಾರೆ.

ಗೋ ಹತ್ಯೆ ಕಾಯ್ದೆ ವಾಪಸ್?

ಗೋ ಹತ್ಯೆ ಕಾಯ್ದೆ ವಾಪಸ್ ಚರ್ಚೆ ವಿಚಾರ ಕುರಿತು ಪ್ರತಿಕ್ರಿಯಿಸಿರುವ ಅವರು, ಆ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಸರ್ಕಾರ ಏನು ತೀರ್ಮಾನ ಕೈಗೊಳ್ಳುತ್ತೋ ನೋಡೊಣ. ರೈತರಿಗೆ ಅನುಪಯುಕ್ತವಾದ ಜಾನುವಾರುಗಳನ್ನು ಹಿಂದಿನಿಂದಲೂ ಬೇರೆ ಬೇರೆ ಕ್ಷೇತ್ರಕ್ಕೆ ಉಪಯೋಗಿಸಿಕೊಂಡಿದ್ದಾರೆ. ಈ ಬಗ್ಗೆ ಸೂಕ್ತ ಚರ್ಚೆ ಆಗಬೇಕು. ರೈತರ ಹಿತದೃಷ್ಟಿಯಿಂದಲೂ ನೋಡಬೇಕು, ನಮ್ಮ ಸಂಸ್ಕೃತಿ ದೃಷ್ಟಿಯಿಂದಲೂ ನೋಡಬೇಕು. ಸದ್ಯಕ್ಕೆ ಕಾದು ನೋಡೊಣ ಎಂದು ಹೇಳಿದ್ದಾರೆ.

RELATED ARTICLES

Related Articles

TRENDING ARTICLES