Sunday, January 19, 2025

ಪೈ ಇಂಟರ್ ನ್ಯಾಶನಲ್ ಲಕ್ಕಿ ಡ್ರಾ : 60 ಗ್ರಾಹಕರಿಗೆ 50 ಸಾವಿರ ಬಹುಮಾನ

ಆನೇಕಲ್ : ಪೈ ಇಂಟರ್‌ನ್ಯಾಶನಲ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ವತಿಯಿಂದ ಬೆಂಗಳೂರಿನ ಕೂಡ್ಲು ಗೇಟ್ ನಲ್ಲಿರುವ ಪೈ ಸೆಂಟ್ರಲ್ ವೇರ್ ಹೌಸ್‌ನಲ್ಲಿ ಗ್ರಾಹಕರಿಗೆ ಮೂರನೇ ಆವೃತ್ತಿಯ ಲಕ್ಕಿ ಡ್ರಾ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು.

ಪೈ ಶೋ ರೂಮ್ ಗಳಲ್ಲಿ ಶಾಪಿಂಗ್ ಮಾಡಿದ ಗ್ರಾಹಕರಿಗಾಗಿ ಪಾರದರ್ಶಕ ಲಕ್ಕಿ ಡ್ರಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಕೂಪನ್ ಹೊಂದಿರುವ ಗ್ರಾಹಕರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

16 ಕೋಟಿ ಪೈ ಲಾಯಲ್ಟಿ

ಪೈ ಶೋರೂಮ್ ಗಳಲ್ಲಿ ವಿವಿಧ ರೀತಿಯ ವಸ್ತುಗಳನ್ನು ಖರೀದಿ ಮಾಡಿದ್ದ ಗ್ರಾಹಕರಿಗೆ ಕೂಪನ್ ಗಳನ್ನು ನೀಡಲಾಗಿತ್ತು. ಅಂತಹ ಗ್ರಾಹಕರಿಗೆ ಲಕ್ಕಿ ಡ್ರಾ ಹಮ್ಮಿಕೊಂಡಿದ್ದು, ಲಕ್ಕಿ ಡ್ರಾನಲ್ಲಿ ಅರವತ್ತು  ಗ್ರಾಹಕರಿಗೆ 50 ಸಾವಿರ ಬಹುಮಾನ ಹಾಗೂ ಹದಿನಾರು ಕೋಟಿಯಷ್ಟು ಪೈ ಲಾಯಲ್ಟಿ ಪಾಯಿಂಟ್ಸ್ ನೀಡಲಾಗಿದೆ.

ಇದನ್ನೂ ಓದಿ : ಪವರ್ ಟಿವಿ ಪ್ರಾಯೋಜಕತ್ವದಲ್ಲಿ ‘ಫರ್ನಿಚರ್ ಎಕ್ಸ್ ಪೋ’

ವಿಜೇತರಿಗೆ ಲಕ್ಕಿ ಕೂಪನ್

ಪೈ ಇಂಟರ್‌ನ್ಯಾಶನಲ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ರಾಜ್‌ಕುಮಾರ್ ಪೈ ಮಾತನಾಡಿ, ಗ್ರಾಹಕರು ತಮ್ಮ ಹತ್ತಿರದ ಪೈ ಶೋರೂಮ್‌ನಲ್ಲಿ ಲಕ್ಕಿ ಡ್ರಾ ಫಲಿತಾಂಶಗಳನ್ನು ಪರಿಶೀಲಿಸಬಹುದು ಅಥವಾ ಪೈ ಇಂಟರ್‌ನ್ಯಾಶನಲ್‌ನ ಸಾಮಾಜಿಕ ಜಾಲತಾಣದಲ್ಲಿ ಪರಿಶೀಲಿಸಬಹುದಾಗಿದೆ ಎಂದು ಹೇಳಿದರು.

ಇನ್ನೂ ಪ್ರತಿ ಬಾರಿಯಂತೆ ಈ ಬಾರಿಯೂ ಸಹ ವಿಜೇತರಿಗೆ ಲಕ್ಕಿ ಕೂಪನ್ ನಡೆಸಿದ್ದು, ಲಕ್ಕಿ ಕೂಪನ್ ಡ್ರಾವನ್ನು ಪಾರದರ್ಶಕತೆಯಿಂದ ನಡೆಸಿ ಗ್ರಾಹಕರಿಗೆ ಬಹುಮಾನ ವಿತರಣೆ ಮಾಡಲಾಗುವುದು ಎಂದು ಅವರು ತಿಳಿಸಿದರು.

RELATED ARTICLES

Related Articles

TRENDING ARTICLES