Monday, December 23, 2024

ಮೊದಲ ರಾತ್ರಿಯೇ ನವಜೋಡಿ ಹೃದಯಘಾತದಿಂದ ಸಾವು!

ಬೆಂಗಳೂರು : ಅವರು ಈಗಷ್ಟೇ ಸಾವಿರಾರು ಕನಸುಗಳೊಂದಿಗೆ ಹೊಸ ಜೀವನಕ್ಕೆ ಕಾಲಿಟ್ಟ ದಂಪತಿ. ಆದರೆ, ಅವರ ಹೊಸ ಜೀವನ ಯಮರಾಜನಿಗೆ ಇಷ್ಟವಿರಲಿಲ್ಲ ಎಂದೆನಿಸುತ್ತದೆ. ಮೊದಲ ರಾತ್ರಿಯೇ ಅವರ ಪ್ರಾಣಪಕ್ಷಿಯನ್ನು ಕಿತ್ತುಕೊಂಡಿದ್ದಾನೆ.

ಹೌದು, ಮದುವೆಯಾದ ಮೊದಲ ರಾತ್ರಿಯೇ ನವದಂಪತಿಗಳು ಹೃದಯಘಾತದಿಂದ ಸಾವನ್ನಪ್ಪಿದ್ದಾರೆ. ಈ ಹೃದಯವಿದ್ರಾವಕ ಘಟನೆ ಉತ್ತರ ಪ್ರದೇಶದ ಬಹ್ರೈಚ್ ನಲ್ಲಿ ನಡೆದಿದೆ.

ಪ್ರತಾಪ್ ಯಾದವ್(22) ಹಾಗೂ ಪುಷ್ಪಾ (20) ಮೃತಪಟ್ಟಿರುವ ನವದಂಪತಿ. ಸಾವಿನಲ್ಲೂ ಈ ನವಜೋಡಿ ಒಂದಾಗಿದ್ದಾರೆ.

ಇದನ್ನೂ ಓದಿ : ಲವರ್​ಗೆ ಮೆಸೇಜ್ ಮಾಡಿದ ರೂಂ ಮೇಟ್​ಗೆ ಚಾಕು ಇರಿದ ಫ್ರೆಂಡ್​

ಇದೇ ಮೇ 30ರಂದು ಪ್ರತಾಪ್ ಹಾಗೂ ಪುಷ್ಪಾ ಅವರ ಮದುವೆ ನಡೆದಿತ್ತು. ಮದುವೆಯಾದ ಮೊದಲ ರಾತ್ರಿ ನವದಂಪತಿ ತಮ್ಮ ರೂಮ್ ಗೆ ತೆರಳಿದ್ದಾರೆ. ಮರುದಿನ ಬೆಳಗ್ಗೆ ಇಬ್ಬರು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಘಟನೆ ತಿಳಿದ ಕೂಡಲೇ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಮೃತ ನವಜೋಡಿಯನ್ನು ಪೋಸ್ಟ್‌ ಮಾರ್ಟಂ ಗೆ ಶವಾಗಾರಕ್ಕೆ ಕೊಂಡೊಯ್ದಿದ್ದಾರೆ. ಬಳಿಕ ಬಂದ ವರದಿಯಲ್ಲಿ ಇಬ್ಬರು ಹೃದಯಾಘಾತದಿಂದ ಸಾವನ್ನಪ್ಪಿರುವುದು ಖಚಿತವಾಗಿದೆ.

RELATED ARTICLES

Related Articles

TRENDING ARTICLES