Friday, May 17, 2024

ಕಟೀಲ್ ಅವ್ರೇ, ನೀವು ಫೇಲ್ ಆಗಿದ್ದೀರಾ.. ಈಗಲಾದ್ರೂ ನಿಮಗೆ ಬುದ್ದಿ ಬರಲಿ : ಮಧು ಬಂಗಾರಪ್ಪ ಟಕ್ಕರ್

ಶಿವಮೊಗ್ಗ : ನಳಿನ ಕುಮಾರ್ ಕಟೀಲ್ ಅವರೇ, ನೀವು ಫೇಲ್ ಆಗಿದ್ದೀರಾ.. 67ಕ್ಕೆ ಬಂದು ಕೂತಿದ್ದೀರಾ ನೀವು.. ಈಗಲಾದರೂ ನಿಮಗೆ ಬುದ್ದಿ ಬರಲಿ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಟಕ್ಕರ್ ಕೊಟ್ಟಿದ್ದಾರೆ.

ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಐದು ಉಚಿತ ಗ್ಯಾರಂಟಿ ಜಾರಿಗೆ ಶ್ವೇತಪತ್ರ ಹೊರಡಿಸಲಿ ಎಂಬ ನಳಿನ್ ಕುಮಾರ್ ಕಟೀಲ್ ಹಾಗೂ ಬಿಜೆಪಿ ನಾಯಕರ ಹೇಳಿಕೆ ತಿರುಗೇಟು ಕೊಟ್ಟಿದ್ದಾರೆ.

ಬಿಜೆಪಿಯವರು 15 ಲಕ್ಷ ರೂ. ಯಾರಿಗೆ ಕೊಟ್ಟಿದ್ದಾರೆ ಅಂತ ಲೆಕ್ಕ ಕೊಡಲಿ. ಆಮೇಲೆ ಅವರಿಗೆ ಉತ್ತರ ಕೊಡ್ತೀನಿ. ಪ್ರಶ್ನೆ ಕೇಳುವಂತಹ ಅಧಿಕಾರ ಬಿಜೆಪಿಯವರು ಕಳೆದುಕೊಂಡಿದ್ದಾರೆ. ಬಡವರಿಗಾಗಿ ಉಚಿತ ವಿದ್ಯುತ್ ಯೋಜನೆ ಮಾಡಿರುವುದು. ಈಗಿನ ಸರಾಸರಿಗಿಂತ ಶೇ.10 ಹೆಚ್ಚುವರಿ ಫ್ರೀ ಕೊಡ್ತೀವಿ ಎಂದು ಹೇಳಿದ್ದಾರೆ.

ಇದನ್ನೂ ಓದಿ : ‘ಷರತ್ತು ಸರಕಾರ’ವನ್ನು ಜನರು ಕ್ಷಮಿಸಲ್ಲ : ಮಾಜಿ ಸಿಎಂ ಹೆಚ್​.ಡಿ ಕುಮಾರಸ್ವಾಮಿ 

ಪಠ್ಯ ಪುಸ್ತಕ ಪರಿಷ್ಕರಣೆ ಮಾಡುವುದು ನಿಶ್ಚಿತ

ಪಠ್ಯ ಪುಸ್ತಕ ಪರಿಷ್ಕರಣೆ ಮಾಡುವುದು ನಿಶ್ಚಿತ. ಇದರಲ್ಲಿ ಏನೂ ಗೊಂದಲವಿಲ್ಲ. ಮಕ್ಕಳಿಗೆ ಅವಶ್ಯಕತೆ ಇಲ್ಲದ, ತೊಂದರೆ ಆಗುವಂತಹದ್ದನ್ನು ಕೈ ಬಿಡ್ತೀವಿ. ಈ ತೀರ್ಮಾನ ಈಗಾಗಲೇ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ನಾನು ಕೂಡ ಪ್ರಣಾಳಿಕೆಯ ಉಪಾಧ್ಯಕ್ಷನಾಗಿದ್ದೆ. ಪಠ್ಯ ಪರಿಷ್ಕರಣೆ ಮಾಡ್ತೀವಂತ ಪ್ರಣಾಳಿಕೆಯಲ್ಲಿ ಹಾಕಿದ್ವಿ ಎಂದು ಸಚಿವ ಮಧು ಬಂಗಾರಪ್ಪ ಮಾಹಿತಿ ನೀಡಿದ್ದಾರೆ.

ಬರಗೂರು ನೇತೃತ್ವದಲ್ಲಿ ಪಠ್ಯ ಪರಿಷ್ಕರಣೆ?

ಅಧಿಕಾರ ವಹಿಸಿಕೊಳ್ಳವ ಒಳಗಾಗಿ ಪಠ್ಯ ಪುಸ್ತಕ ವಿತರಣೆ ಆಗಿದೆ. ಕಾನೂನು ಬದ್ಧವಾಗಿ ಪಠ್ಯ ಪರಿಷ್ಕರಣೆ ಮಾಡ್ತೀವಿ. ಬರಗೂರು ನೇತೃತ್ವದಲ್ಲಿ ಪಠ್ಯ ಪರಿಷ್ಕರಣೆ ವಿಚಾರ, ಅದು ಚರ್ಚೆ ಅಷ್ಟೇ, ಹಲವರ ಹೆಸರು ಚರ್ಚೆ ಆಗ್ತಿದೆ. ಸಿಎಂ ಮಾರ್ಗದರ್ಶನದಲ್ಲಿ ಎಲ್ಲಾ ನಡೀತಿದೆ. ಮಕ್ಕಳ ಭವಿಷ್ಯಕ್ಕಾಗಿ ಕೆಲ ತಪ್ಪುಗಳನ್ನು ಸರಿಪಡಿಸಬೇಕಿದೆ ಎಂದು ಹೇಳಿದ್ದಾರೆ.

ಸಿಎಂ ಸಿದ್ದರಾಮಯ್ಯನವರು ಕೂಡ ವೈಯಕ್ತಿಕವಾಗಿ ಆಸೆ ಹೊಂದಿದ್ದಾರೆ. ಶಿಕ್ಷಕರ ನೇಮಕಾತಿ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಆಡಳಿತ ವ್ಯವಸ್ಥೆ ಒಂದು ಹಂತಕ್ಕೆ ಬರಬೇಕಿದೆ. ಎಲ್ಲರೂ ಸೇರಿ ವ್ಯವಸ್ಥೆಯನ್ನು ಸರಿದಾರಿಯತ್ತ ಸಾಗಿಸೋಣ ಎಂದು ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.

RELATED ARTICLES

Related Articles

TRENDING ARTICLES