Friday, May 17, 2024

ವಿಜಯೇಂದ್ರ ಅವರೇ, ಯಡಿಯೂರಪ್ಪ ಸದನದ ಒಳಗೆ, ಹೊರಗೆ ಕಣ್ಣೀರು ಹಾಕಿದ್ರು : ಸಚಿವ ಎಂ.ಬಿ ಪಾಟೀಲ್

ಚಿತ್ರದುರ್ಗ : ಮುಖ್ಯಮಂತ್ರಿ ಸಿದ್ಧರಾಮಯ್ಯ 5 ವರ್ಷ ಸಿಎಂ ಆಗಿರುವುದು ಗ್ಯಾರಂಟಿ ಇಲ್ಲ ಎಂಬ ಶಾಸಕ ಬಿ.ವೈ ವಿಜಯೇಂದ್ರ ಹೇಳಿಕೆಗೆ ಸಚಿವ ಎಂ.ಬಿ ಪಾಟೀಲ್ ತಿರುಗೇಟು ನೀಡಿದ್ದಾರೆ.

ಚಿತ್ರದುರ್ಗ ಮುರುಘಾಮಠಕ್ಕೆ ಭೇಟಿ ನೀಡಿ ಉಸ್ತುವಾರಿ ಶ್ರೀಗಳಾದ ಬಸವಪ್ರಭು ಸ್ವಾಮೀಜಿಗಳನ್ನು ಭೇಟಿ ಮಾಡಿದರು. ಬಳಿಕ, ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಜಯೇಂದ್ರ ಅವರೇ.. ನಿಮ್ಮ ತಂದೆ ಕಣ್ಣೀರು ಹಾಕಿದ್ದರು. ಸದನದ ಒಳಗೂ, ಹೊರಗೂ ಬಿಎಸ್ ವೈ ಕಣ್ಣೀರು ಹಾಕಿದ್ದರು ಎಂದು ತಿರುಗೇಟು ಕೊಟ್ಟಿದ್ದಾರೆ.

ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ 2 ಅವಧಿಯಲ್ಲೂ ಪೂರ್ಣ ಆಡಳಿತ ಮಾಡಲಿಲ್ಲ. ಆಪರೇಷನ್ ಕಮಲ ಮಾಡಿ ಅಧಿಕಾರಕ್ಕೆ ಬಂದಿದ್ದರು. ಯಡಿಯೂರಪ್ಪ ಅವರಿಗೆ ಗ್ಯಾರಂಟಿ ಇರಲಿಲ್ಲ. ನಮ್ಮ ಪಕ್ಷದಲ್ಲಿ ಹೈಕಮಾಂಡ್ ತೀರ್ಮಾನ ಕೈಗೊಳ್ಳುತ್ತದೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ಈಗಾಗಲೇ ಸ್ಪಷ್ಟಪಡಿಸಿದ್ದಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ : ಈ.. ಸಿಎಂ 5 ವರ್ಷ ಅಧಿಕಾರದಲ್ಲಿ ಇರ್ತಾರಾ ಅನ್ನೋದೇ ಡೌಟು : ಬಿ.ವೈ ವಿಜಯೇಂದ್ರ

ನನ್ನ ಹೆಂಡ್ತಿನೂ ಬಸ್ ನಲ್ಲಿ ಹೋಗಬಹುದು

ಮಹಿಳೆಯರಿಗೆ ಡಕೋಟಾ ಬಸ್ ಎಂಬ ಕೇಂದ್ರ ಸಚಿವ‌ ಎ.ನಾರಾಯಣಸ್ವಾಮಿ ಟೀಕೆ‌‌ ವಿಚಾರವಾಗಿ ಮಾತನಾಡಿ, ಜನ ಸಾಮಾನ್ಯರು ಓಡಾಡುವ ಬಸ್ ಡಕೋಟಾ ಬಸ್? ಬಿಜೆಪಿ ಆಡಳಿದಲ್ಲಿ ಜನ ಓಡಾಡಿದ್ದು ಡಕೋಟಾ ಬಸ್? ಜನ ಸಾಮಾನ್ಯರಿಗೆ ಏನು ಬೇಕು ಅದನ್ನು ನಾವು ಕೊಟ್ಟಿದ್ದೇವೆ. ನನ್ನ ಪತ್ನಿ ಕೂಡ ಬಸ್ ನಲ್ಲಿ ಹೋಗಬಹುದು ಎಂದು ಟಕ್ಕರ್ ಕೊಟ್ಟಿದ್ದಾರೆ.

ಬಿಜೆಪಿಯವ್ರಿಗೆ ಮಾತಾಡಲು ಏನೂ ಉಳಿದಿಲ್ಲ

ಎಸಿ ಬಸ್ ಹೊರತುಪಡಿಸಿ ಉಳಿದ ಸಾರಿಗೆ ಬಸ್ ನಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ. ಎಸಿ ಬಸ್ ಜನ ಸಾಮಾನ್ಯರಿಗೆ ಬೇಕಿಲ್ಲ, ಎಂ.ಬಿ ಪಾಟೀಲ್ ಗೆ ಬೇಕಾಗಿರಬಹುದು. ಬಿಜೆಪಿಯವರಿಗೆ ಮಾತಾಡಲು ಏನು ಉಳಿದಿಲ್ಲ. ಭ್ರಷ್ಟ ಸರ್ಕಾರ ಎಂದು ಜನ ಬಿಜೆಪಿಯನ್ನು ತಿರಸ್ಕರಿಸಿದ್ದಾರೆ. ನಾವು ಘೋಷಿಸಿದ್ದ ಗ್ಯಾರಂಟಿ ಪ್ರಕಾರ ವಿದ್ಯುತ್ ಉಚಿತ. ದುರುಪಯೋಗ ಆಗದಂತೆ 12 ತಿಂಗಳ ಸರಾಸರಿ ಪಡೆದು ಉಚಿತ‌ ವಿದ್ಯುತ್ ನೀಡಲಾಗುವುದು ಎಂದು ಹೇಳಿದ್ದಾರೆ.

ಈ ಸಂದರ್ಭದಲ್ಲಿ ಚಿತ್ರದುರ್ಗ ಶಾಸಕ ಕೆ.ಸಿ ವಿರೇಂದ್ರ ಪಪ್ಪಿ ಹಾಗೂ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.

RELATED ARTICLES

Related Articles

TRENDING ARTICLES