Wednesday, January 22, 2025

Belly Fat Loss Tips : ಹೊಟ್ಟೆಯ ಬೊಜ್ಜು ಕರಗಿಸಲು ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ

ನಮ್ಮ ಆಧುನಿಕ ಜೀವನಶೈಲಿಯಿಂದ ಆರೋಗ್ಯ ಸಮಸ್ಸೆಗಳು ದಿನಲ್ಲೂ ಕಾಡುತ್ತಲೇ ಇರುತ್ತದೆ. ಇದರಿಂದ ನಮ್ಮ ದೇಹದ ಸೌದರ್ಯದ ಮೇಲೂ ಪರಿಣಾಮ ಬೀರುತ್ತದೆ. ಅದರಲ್ಲೂ ಈ ಐಟಿ ಬಿಟಿ ಕಂಪನಿಗಳಲ್ಲಿ ಕೆಲಸ ಮಾಡುವವರ ಕಥೆಯಂತೂ ಮುಗಿದೆ ಹೋಯ್ತು ಅನ್ನೋವಷ್ಟು ಒತ್ತಡವನ್ನು ಹೇರುತ್ತಾರೆ. ಇದರಿಂದ ನಾವು ನಮ್ಮ ಆರೋಗ್ಯದ ಕಡೆಗೆ ಅಷ್ಟು ಗಮನಹರಿಸದೇ ಕೆಲಸ ಅಷ್ಟೇ ಮಾಡುತ್ತಾವೆ.

ಈ ಕ್ರಮವನ್ನು ಅನುಸರಿಸಿದ್ದಾಗ ನಮ್ಮ ಆಹಾರ ಪದ್ಧತಿ ಚೇಂಜ್​ ಆಗುವುದರ ಜೊತೆ ನಮ್ಮಗೆ ಹಲವು ಆರೋಗ್ಯದ ಸಮಸ್ಸೆಗಳು ಕಾಡುತ್ತವೆ. ನಮ್ಮ ಈ ಕ್ರಮದಿಂದಾಗಿ ಹೊಟ್ಟೆಯ ಸಮಸ್ಯೆ ಹೆಚ್ಚಾಗಿ ಕಾಡುತ್ತಿರುತ್ತಾದೆ. ಇದಕ್ಕೆ ತಜ್ಞರ  ಕಾರಣ ನೀಡಿದ್ದು, ಹೊಟ್ಟೆಯ ಬೊಜ್ಜು ಅತೀಯಾಗಿ ಕಾಣಿಸಿಕೊಂಡರೆ ಮಧುಮೇಹದಿಂದ ಹಿಡಿದು ಹೃದಯದ ಸಮಸ್ಯೆ, ಕ್ಯಾನ್ಸರ್ ನಂತಹ ಹಲವಾರು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು ಎಂದು ಹೇಳಿದ್ದಾರೆ.

ಹಾಗಾದ್ರೆ ನಾವು ಈ ಸಮಸ್ಸೆಯಿಂದ ಬಜಾವ್​ ಆಗಲು ಕೆಲವೊಂದು ಬದಲಾವಣೆ ನಮ್ಮ ಡೈಲಿ ರೊಟಿನ್ ಮಾಡಿಕೊಳ್ಳಬೇಕು.

ಬೊಜ್ಜು ಕರಗಿಸಲು ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ

1.ಸ್ವೀಟ್ಸ್ ಸ್ವಲ್ಪ ಕಡಿಮೆ ತಿನ್ನಿ..

ಸಾಮಾನ್ಯವಾಗಿ ಹೊಟ್ಟೆಯ ಕೊಬ್ಬು ಹೆಚ್ಚಾಗಲು ಕಾರಣ ಪ್ರತಿದಿನ ಸೇವಿಸುವ ಸಿಹಿ ಪದಾರ್ಥಗಳು..! ಹಾಗಾಗಿ ಸಕ್ಕರೆ ಮಿಶ್ರಿತ ಸ್ವೀಟ್ಸ್​ಗಳನ್ನ ಕಡಿಮೆ ತಿನ್ನಿ

 2. ಖಾಲಿ ಹೊಟ್ಟೆಗೆ ಒಂದು ಗ್ಲಾಸ್ ಲಿಂಬೆ ನೀರು ಕುಡಿಯಿರಿ

ಒಂದು ಲೋಟ ಉಗುರುಬೆಚ್ಚನೆಯ ನೀರಿಗೆ ಲಿಂಬೆಯ ರಸವನ್ನು ಸೇರಿಸಿ ದಿನಾ ಖಾಲಿ ಹೊಟ್ಟೆಗೆ ಸೇವಿಸಿ

3.ಜೀರಿಗೆ ನೀರು ಸೇ ವನೆ ಮಾಡಿ 

ಒಂದೆರಡು ಟೀ ಚಮಚ ಜೀರಿಗೆಯನ್ನು ನೀರಿನೊಂದಿಗೆ ಚೆನ್ನಾಗಿ ಕುದಿಸಿ ಕುದಿಸಿ, ಉಗುರು ಬೆಚ್ಚಗಿರುವಾಗಲೇ ಪ್ರತಿದಿನ ಒಂದೊಂದು ಲೋಟ ಕುಡಿಯುತ್ತಾ ಬಂದರೆ ಕಿಬ್ಬೊಟ್ಟೆ ಹಾಗೂ ಸೊಂಟದ ಸುತ್ತಲೂ ಶೇಖರಣೆ ಗೊಂಡ ಕೊಬ್ಬು ಸುಲಭವಾಗಿ ಕರಗಿಸುತ್ತದೆ

 4.ದಿನಕ್ಕೆ ಎರಡು ಗ್ಲಾಸ್ ಗ್ರೀನ್ ಟೀ ಕುಡಿಯಿರಿ

ಪ್ರತಿ ದಿನ ಎರಡು ಗ್ಲಾಸ್ ಹಾಲಿಲ್ಲದ ಗ್ರೀನ್ ಟೀ ಸೇವಿಸಿದರೆ, ದೇಹದ ತೂಕ ಕಡಿಮೆಯಾಗುವುದರ ಜೊತೆಗೆ ಕೊಬ್ಬನ್ನು ಕರಗಿಸಲೂ ಸಾಧ್ಯವಾಗುತ್ತದೆ.

5. ಶುಂಠಿ ಟೀ ಕುಡಿಯಿರಿ 

ಹಸಿ ಶುಂಠಿ ಜೀರ್ಣ ಶಕ್ತಿಯನ್ನು ಹೆಚ್ಚಿಸುವುದರ ಜೊತೆಗೆ ದೇಹದ ಬಿಸಿಯನ್ನು ಏರಿಸುವ ಮೂಲಕ ದೇಹದಲ್ಲಿ ಸಂಗ್ರಹವಾಗಿದ್ದ ಕೊಬ್ಬು ಕರಗಲು ನೆರವಾಗುತ್ತದೆ.

ಈ ಮೇಲಿನ ಕ್ರಮಗಳನ್ನೂ ಅನುಸರಿಸಿದರೆ ನಾವು ಹೊಟ್ಟೆಯ ಬೊಜ್ಜುನ್ನು ಕಡಿಮೆ ಮಾಡಿಕೊಳ್ಳಬಹುದು.

RELATED ARTICLES

Related Articles

TRENDING ARTICLES