Wednesday, January 22, 2025

GOOD NEWS : ಸದ್ಯದಲ್ಲೇ 15 ಸಾವಿರ ಪೊಲೀಸ್ ಪೇದೆಗಳ ನೇಮಕ : ಗೃಹ ಸಚಿವ ಡಾ.ಜಿ ಪರಮೇಶ್ವರ

ತುಮಕೂರು : ಸದ್ಯದಲ್ಲೇ 15 ಸಾವಿರ ಪೊಲೀಸ್ ಪೇದೆಗಳ ನೇಮಕ ಮಾಡಲಾಗುತ್ತದೆ ಎಂದು ಗೃಹ ಸಚಿವ ಡಾ.ಜಿ ಪರಮೇಶ್ವರ ಹೇಳಿದ್ದಾರೆ.

ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಜುಲೈನಲ್ಲಿ ಸಿಎಂ ಸಿದ್ದರಾಮಯ್ಯ ಬಜೆಟ್ ಮಂಡನೆ ಮಾಡುತ್ತಾರೆ. ಬಜೆಟ್ ನಲ್ಲಿ ಎತ್ತಿನಹೊಳೆ ಯೋಜನೆ ಬಗ್ಗೆ ಅನುದಾನ ಮೀಸಲು ಇಡಲಾಗುವುದು. ಔರಾದ್ಕರ್ ವರದಿ ಜಾರಿ ಬಗ್ಗೆ ಪರಿಶೀಲನೆ ಮಾಡುತ್ತೇನೆ. 7ನೇ ವೇತನ ಆಯೋಗ ಜಾರಿ ಮಾಡಿದರೆ ಔರಾದ್ಕರ್ ವರದಿ ಪ್ರತ್ಯೇಕವಾಗಿ ಜಾರಿ ಮಾಡುವ ಅವಶ್ಯಕತೆ ಇಲ್ಲ. ಸದ್ಯದಲ್ಲೇ 15 ಸಾವಿರ ಪೊಲೀಸ್ ಪೇದೆಗಳ ನೇಮಕ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.

ಪಿಎಸ್ ಐ ನೇಮಕಾತಿ ಹಗರಣ ವಿಚಾರ ಕುರಿತು ಮಾತನಾಡಿರುವ ಅವರು, ತನಿಖೆ ಕಾನೂನು ಪ್ರಕಾರ ನಡೆಯುತ್ತಿದೆ. 53 ಜನರು ತಪ್ಪಿತಸ್ಥರು ಎಂದು ಕಂಡು ಬಂದಿದೆ. ಮರು ಪರೀಕ್ಷೆ ಮಾಡಬಾರದು ಎಂದು ಕೋರ್ಟ್ ತಡೆ ನೀಡಿದೆ. ಕಾನೂನು ತಜ್ಞರ ಸಲಹೆ ಪಡೆದು ಅವರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.

ಹಾಲಿನ ಪ್ರೋತ್ಸಾಹ ಧನ 7 ರೂ.ಗೆ ಹೆಚ್ಚಳ

ಹಾಲಿನ ಪ್ರೋತ್ಸಾಹ ಧನ 7 ರೂ.ಗೆ ಹೆಚ್ಚಿಗೆ ಮಾಡುತ್ತೇವೆ. ಬೆಂಗಳೂರಿನ ಹಾಲು ಒಕ್ಕೂಟದ್ದು ಅವರ ಸ್ವತಃ ನಿರ್ಧಾರದಿಂದ 1.50 ಕಡಿಮೆ ಮಾಡಿದ್ದಾರೆ. ಅದು ಸರ್ಕಾರದ ನಿರ್ಧಾರ ಅಲ್ಲ. ಉಸ್ತುವಾರಿ ಸಚಿವರ ಆಯ್ಕೆ  ಸಿಎಂ ಅವರ ವಿವೇಚನೆಗೆ ಬಿಟ್ಟಿದ್ದು. ಇನ್ನೆರಡು  ದಿನದಲ್ಲಿ ಉಸ್ತುವಾರಿ ಘೋಷಣೆ ಆಗಬಹುದು ಎಂದು ಪರಮೇಶ್ವರ ಹೇಳಿದ್ದಾರೆ.

ಇದನ್ನೂ ಓದಿ : ಬಿಜೆಪಿಯವರೇ ತಪ್ಪು ಮಾಡಿದ್ರೆ ಅವರನ್ನು ಹಿಡಿದು ಜೈಲಿಗೆ ಹಾಕಿ : ಸಂಸದ ಪ್ರತಾಪ್ ಸಿಂಹ

ಸಂಪನ್ಮೂಲಗಳ ಕ್ರೂಡೀಕರಣ ಅಸ್ತ್ರ

ನಮ್ಮ ನಾಯಕರಾದ ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ ಚುನಾವಣೆ ವೇಳೆ ಗ್ಯಾರಂಟಿ ಭರವಸೆ ಕೊಟ್ಟಿದ್ರು. ಕೊಟ್ಟ ಭರವಸೆಯಂತೆ ನಮ್ಮ ಗ್ಯಾರಂಟಿಗಳಿಗೆ ನಿನ್ನೆ ಅನುಷ್ಠಾನಕ್ಕೆ ತೀರ್ಮಾನ ಆಗಿದೆ. ಅದರ ಪ್ರೋಷಿಸರ್ ಬಗ್ಗೆ ನಿನ್ನೆ ಚರ್ಚೆ ಆಗಿದೆ. ಅನುಷ್ಠಾನ ಮಾಡೋದಕ್ಕೆ ಆರಂಭ ಮಾಡುತ್ತೇವೆ. ಸಂಪನ್ಮೂಲಗಳ ಕ್ರೂಡೀಕರಣ ಪ್ರಶ್ನೆ ಎಲ್ಲರೂ ಎತ್ತಿದ್ರು. ವಿರೋಧ ಪಕ್ಷದವರು ಇದನ್ನು ಒಂದು ಅಸ್ತ್ರವಾಗಿ ಪ್ರಯೋಗ ಮಾಡಿದ್ರು ಎಂದು ವಿಪಕ್ಷ ನಾಯಕರ ನಡೆಗೆ ಬೇಸರ ವ್ಯಕ್ತಪಡಿಸಿದ್ದಾರೆ.

ಅನಾವಶ್ಯಕ ಯೋಜನೆ, ಕಾರ್ಯಕ್ರಮ ಸ್ಥಗಿತ

ಹಣಕಾಸು ವ್ಯಯ ಆಗದೇ, ಜನರ ಹಿತಾಸಕ್ತಿ ಗಮನದಲ್ಲಿ ಇಟ್ಟುಕೊಂಡು ಗ್ಯಾರಂಟಿ ಜಾರಿ ಮಾಡುತ್ತೇವೆ. ಅನಾವಶ್ಯಕವಾದ ಯೋಜನೆ, ಕಾರ್ಯಕ್ರಮ ಇದ್ದರೆ ಅದನ್ನು ಸ್ಥಗಿತ ಮಾಡುತ್ತೇವೆ. ಎಲ್ಲಾ ಯೋಜನೆಗಳ ಡಿಪಿಆರ್ ಮಾಡುವಾಗ ಎಚ್ಚರಿಕೆಯಿಂದ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಅಭಿವೃದ್ಧಿ ಕುಂಟಿತವಾಗದ ರೀತಿಯಲ್ಲಿ ಗ್ಯಾರಂಟಿ ಜಾರಿ ಮಾಡುತ್ತೇವೆ. ನಿಗಮ ಮಂಡಳಿ ಅನಗತ್ಯ ಇದ್ದರೆ ಅದನ್ನು ಪರಿಶೀಲನೆ ಮಾಡುತ್ತೇವೆ. ಜನಪರ ಆಡಳಿತ ಕೊಡುತ್ತೇವೆ ಎಂದಿದ್ದೇವೆ. ಬೆಲೆ ಏರಿಕೆ ವಿರುದ್ಧ ಜನ ಕಾಂಗ್ರೆಸ್ ಗೆ ಮತಹಾಕಿದ್ದಾರೆ. ಅದನ್ನು ಗಮನ ಇಟ್ಟುಕೊಂಡು ಆಡಳಿತ ನಡೆಸುತ್ತೇವೆ. ನಾವು ಐದು ವರ್ಷದ ವರೆಗೂ ಈ ಗ್ಯಾರಂಟಿ ಮುಂದುವರೆಸುತ್ತೇವೆ ಎಂದು ಭರವಸೆ ನೀಡಿದ್ದಾರೆ.

RELATED ARTICLES

Related Articles

TRENDING ARTICLES