Wednesday, October 30, 2024

ಈ ಧಾನ್ಯಗಳನ್ನು ತಿಂದ್ರೆ ಸಾಕು ನಿಮ್ಮ ದೇಹ ತಂಪಾಗಿರುತ್ತೆ..!

ನೀವು ಹೆಲ್ದಿ ಆಗಿರಬೇಕಾ..? ಹಾಗಾದ್ರೆ ನೀವು ನಿಮ್ಮ ಆಹಾರದ ಕ್ರಮದಲ್ಲಿ ಕೆಲವೊಂದು ಬದಲಾವಣೆಯನ್ನು ತಂದುಕೊಳ್ಳಿ.. ಆಗ ನಮ್ಮ ಆರೋಗ್ಯ ಹಾಗೂ ದೇಹ ತಂಪಾಗಿರುತ್ತದೆ.

ಹೌದು, ನಮ್ಮ ಹಿರಿಯರು ಹಿಂದಿನ ಕಾಲದಲ್ಲಿ ಸಿರಿಧಾನ್ಯಗಳನ್ನು ಹೆಚ್ಚು ಬಳಕೆ ಮಾಡುತ್ತಿದ್ದರು ಅಂದ್ರೆ ಇದೀಗ ಅದರ ಬಳಕೆ ಕಡಿಮೆಯಾಗುತ್ತ ಬಂದಿದೆ. ಇಂದಿನ ಸಮೂದಯ ಹಣ್ಣು ತರಕಾರಿಯ ಬದಲು ಪಿಜ್ಜಾ ಬರ್ಗರ್ ತಿಂದು ದಿನಕಳೆಯುವಂತಹ ಕಾಲದಲ್ಲಿ ಇದ್ದೇವೆ,ಇದರಿಂದ ಎಲ್ಲಿ ನಮ್ಮ ಆರೋಗ್ಯ..? ಇಲ್ಲ ಅನಾರೋಗ್ಯ ಬಿಟ್ಟರೆ ಬೇರೆ ಯಾವುದೂ ಇರುವುದಿಲ್ಲ. ಆದರಿಂದ ನಾವು ಇದನ್ನು ಬಿಟ್ಟು ಉತ್ತಮ ಆರೋಗ್ಯದ ಜೀವನ ಶೈಲಿಯನ್ನು ಅಳವಡಿಸಿಕೊಳ್ಳಬೇಕು.

ಸಿರಿಧಾನ್ಯಗಳು ಪೋಷಕಾಂಶಗಳಿಂದ ಸಮೃದ್ಧವಾಗಿರುವುದರಿಂದ ದೈಹಿಕ ಆರೋಗ್ಯವನ್ನು ಸುಧಾರಿಸುತ್ತದೆ. ಜೊತೆಗೆ ಇವುಗಳ ಸೇವನೆಯಿಂದ ಅನೇಕ ರೋಗಗಳು ಗುಣವಾಗುತ್ತವೆ. ಮೆಡಿಕಲ್ ನ್ಯೂಸ್ ಟುಡೇ ಪ್ರಕಾರ, ಧಾನ್ಯಗಳು ಫ್ರೀ ರಾಡಿಕಲ್ಗಳನ್ನು ಹೊಂದಿದೆ. ರೋಗಗಳ ವಿರುದ್ಧ ಹೋರಾಡಲು ಇವು ಹೆಚ್ಚು ಸಹಾಯಕವಾಗಿದೆ. ಅವುಗಳ ಬಗೆಗಿನ ಒಂದಷ್ಟು ಮಾಹಿತಿ ಇಲ್ಲಿದೆ ನೋಡಿ.

ರಾಗಿ

ರಾಗಿ ದೇಹವನ್ನು ತುಂಬಾ ತಂಪಾಗಿರಿಸುತ್ತದೆ. ಆದ್ದರಿಂದ ಬೇಸಿಗೆ ಕಾಲ ಆರಂಭವಾದಾಗ ರಾಗಿ ಗಂಜಿಯನ್ನು ಮುಖ್ಯ ಆಹಾರವಾಗಿ ಸೇವಿಸಬೇಕು. ರಾಗಿಯಲ್ಲಿ ಪಾಲಿಫಿನಾಲ್ ಮತ್ತು ಫೈಬರ್ ಇರುತ್ತದೆ. ಇದು ರೋಗಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.

ಬಿಳಿ ಜೋಳ

ಬಿಳಿ ಜೋಳ ಈಗ ಸೂಪರ್ ಹೆಲ್ದಿ ಫುಡ್ ಆಗಿದೆ. ಇದು ವಿಟಮಿನ್ ಬಿ ಸಂಕೀರ್ಣದಲ್ಲಿ ಸಮೃದ್ಧವಾಗಿದೆ. ಬಿಳಿ ಜೋಳದಲ್ಲಿ ಫೀನಾಲಿಕ್ ಆಮ್ಲ ಕಂಡುಬರುತ್ತದೆ. ಇದಲ್ಲದೇ, ಇದು ಅನೇಕ ರೀತಿಯ ಉತ್ಕರ್ಷಣ ನಿರೋಧಕಗಳನ್ನು ಹೊಂದಿದೆ.ಇದನ್ನು ನಿತ್ಯ ಸೇವಿಸಿದರೆ ತೂಕ ಕಡಿಮೆಯಾಗುತ್ತದೆ. ಈ ಬಿಳಿ ಜೋಳ ರಕ್ತದಲ್ಲಿನ ಸಕ್ಕರೆ ಅಂಶವನ್ನು ಕೂಡ ನಿಯಂತ್ರಿಸುತ್ತದೆ.

ಸಜ್ಜೆ:

ಸಜ್ಜೆ ಎಂದರೆ ಕೇವಲ ಸಜ್ಜೆ ಅಲ್ಲ, ಸಜ್ಜೆಯನ್ನು ಪೌಷ್ಟಿಕಾಂಶಗಳ ಖಜಾನೆ ಎಂದೇ ಹೇಳಬಹುದು. ಇದರಲ್ಲಿ ಕ್ಯಾಲ್ಸಿಯಂ, ಪ್ರೋಟೀನ್, ಕಬ್ಬಿಣ, ಫೈಬರ್, ಮೆಗ್ನೀಸಿಯಮ್, ಥಯಾಮಿನ್, ನಿಯಾಸಿನ್, ರೈಬೋಫ್ಲಾವಿನ್, ವಿವಿಧ ಜೀವಸತ್ವಗಳು ಮತ್ತು ಖನಿಜಗಳಿಂದ ಸಮೃದ್ಧವಾಗಿದೆ.

ಬಾರ್ಲಿ

ನಾವು ನಿತ್ಯವೂ ಬಾರ್ಲಿ ಸೇವನೆ ಮಾಡಿದರೆ, ಆರೋಗ್ಯಕ್ಕೆ ಹಲವಾರು ಲಾಭಗಳು ಸಿಗುತ್ತದೆ. ವಿಶೇಷವಾಗಿ ಬಾರ್ಲಿ ಗಂಜಿಗೆ ಸಾಕಷ್ಟು ಮಹತ್ವವಿದೆ. ಬಾರ್ಲಿ ದೇಹವನ್ನು ತಂಪಾಗಿಡುತ್ತದೆ. ಬಾರ್ಲಿಯಲ್ಲಿ ಫೈಬರ್ ಸಮೃದ್ಧವಾಗಿದೆ.

ಹೆಸರುಕಾಳು

ಹೆಸರು ಕಾಳಿನಲ್ಲಿ ಫೋಲೇಟ್, ವಿಟಮಿನ್ ಬಿ9 ಸಮೃದ್ಧವಾಗಿವೆ. ಇವು ದೇಹದಲ್ಲಿ ಹೊಸ ರಕ್ತಕಣಗಳ ಸೃಷ್ಟಿಗೆ ಸಹಾಯ ಮಾಡುತ್ತವೆ. ಅದರಲ್ಲೂ ಕೆಂಪು ರಕ್ತ ಕಣಗಳನ್ನು ಹೆಚ್ಚುವಂತೆ ಮಾಡುವುದು.ಹೆಸರು ಕಾಳಿನಲ್ಲಿ ಫ್ಲೋವೊನೈಡ್ ಆಂಟಿ ಆಕ್ಸಿಡೆಂಟ್ ಅಧಿಕವಾಗಿದೆ. ದೇಹದ ಉಷ್ಣಾಂತೆ ಕಡಿಮೆ ಮಾಡಿ ತಂಪಾಗಿಡಲು ಸಹಾಯಕವಾಗುತ್ತದೆ.

ನೀವು ಈ ಮೇಲಿನ ಸಿರಿಧಾನ್ಯಗಳನ್ನು ಸೇವನೆ ಮಾಡುವುದರಿಂದ ಆರೋಗ್ಯದ ಜೊತೆಗೆ ನಮ್ಮ ದೇಹವನ್ನೂ ತಂಪಾಗಿಡಲು ಸಹಕಾರಿಯಾಗುತ್ತದೆ…

RELATED ARTICLES

Related Articles

TRENDING ARTICLES