ಬೆಂಗಳೂರು: ಜೂನ್ ತಿಂಗಳ ಮೊದಲ ದಿನವೇ ಗ್ರಾಹಕರಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ ಕೊಟ್ಟಿದೆ.
ಹೌದು, ದಿನಬಳಕೆಯ ಗ್ಯಾಸ್ ಸಿಲಿಂಡರ್ ಅಂದ್ರೆ ಸಾಕು ಜನರಲ್ಲಿ ಅಬ್ಬಾ.. ಮತ್ತೆ ಏರಿಗೆ ಆಯ್ತಾ ಅಂತ ಆತಂಕ ಪಡುತ್ತಿದವರಿಗೆ ರಾಜ್ಯದ ಜನರಿಗೆ ಸರ್ಕಾರ ತುಸು ಬೆಲೆ ಕಡಿಮೆ ಮಾಡಿ ನಿರಾಳ ಮಾಡಿದ್ದಾರೆ.
ಇನ್ನೂ 19 ಕೆಜಿ ಎಲ್‌ಪಿಜಿ ಸಿಲಿಂಡರ್(LPG Cylinder) ನ ಬೆಲೆ 83.50 ರೂ.ಗೆ ಇಳಿಕೆಯಾಗಿದೆ. ಗ್ರಾಹಕರಿಗೆ ಖುಷಿ ತಂದಿದೆ.
ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆ 83 ರೂ. ನಷ್ಟು ಇಳಿಕೆಯಾಗಿದೆ. ಈ ಹೊಸ ದರ ಇಂದಿನಿಂದಲೇ ಜಾರಿಗೆ ಬರಲಿದೆ. ಆದರೆ ಈ ಬೆಲೆ ಕಡಿತ ನಿರ್ಧಾರ ಕೆಲವರಿಗೆ ಮಾತ್ರ ಅನ್ವಯಿಸುತ್ತದೆ.
ವಾಣಿಜ್ಯ ಅನಿಲ ಸಿಲಿಂಡರ್‌ಗಳಿಗೆ ಮಾತ್ರ ದರ ಇಳಿಕೆ ಅನ್ವಯವಾಗುತ್ತದೆ ಎಂದು ಕಂಪನಿಗಳು ಹೇಳಿಕೊಂಡಿವೆ. ಅಂದರೆ 14.2 ಕೆಜಿ ಗ್ಯಾಸ್ ಸಿಲಿಂಡರ್ ಬಳಸುವವರಿಗೆ ಯಾವುದೇ ಪ್ರಯೋಜನವಿಲ್ಲ.
ಕಳೆದ ತಿಂಗಳು ಸಹ ಸಿಲಿಂಡರ್ ಬೆಲೆ 172 ರೂ.ಗೆ ಇಳಿದಿದೆ. ಮತ್ತೆ ಈಗ ಸಿಲಿಂಡರ್ ಬೆಲೆ 85 ರೂ.ನಷ್ಟು ಇಳಿಕೆಯಾಗಿದೆ. ಅಂದರೆ ಒಂದು ತಿಂಗಳೊಳಗೆ ಸಿಲಿಂಡರ್ ಬೆಲೆ 250 ರೂ.ನಷ್ಟು ಕಡಿಮೆಯಾಗಿದೆ ಎನ್ನಬಹುದು.
ದೇಶದಲ್ಲಿ ಎಲ್‌ಪಿಜಿ ಬೆಲೆಯನ್ನು ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಪ್ರತಿ ತಿಂಗಳು ನಿಗದಿಪಡಿಸುತ್ತವೆ . ಜಾಗತಿಕ ಕಚ್ಚಾ ಇಂಧನ ದರಗಳ ಆಧಾರದ ಮೇಲೆ ತೈಲ ಬೆಲೆಗಳನ್ನು ನಿರ್ಧರಿಸಲಾಗುತ್ತದೆ. ಅದಕ್ಕಾಗಿಯೇ ಪ್ರತಿ ತಿಂಗಳು ತೈಲ ಬೆಲೆಗಳನ್ನು ಬದಲಾಗುತ್ತಲ್ಲೇ ಇರುತ್ತದೆ.
ಕಚ್ಚಾ ತೈಲ ಬೆಲೆಗಳು LPG ಬೆಲೆಗಳ ಮೇಲೆ ನೇರ ಪರಿಣಾಮ ಬೀರುತ್ತವೆ. ಇದಲ್ಲದೆ, ಎಫ್‌ಒಬಿ, ಸಾರಿಗೆ, ವಿಮೆ, ಕಸ್ಟಮ್ ಸುಂಕ ಮತ್ತು ಪೋರ್ಟ್ ಡ್ಯೂಟಿ ಇತ್ಯಾದಿ ಅಂಶಗಳಿಂದ ಎಲ್‌ಪಿಜಿ ಬೆಲೆಗಳು ಬದಲಾಗುತ್ತವೆ.