Monday, December 23, 2024

ಮುದ್ದಾದ ಅವಳಿ ಮಕ್ಕಳನ್ನು ಉಸಿರುಗಟ್ಟಿಸಿ ಕೊಂದ ಪಾಪಿ ತಂದೆ

ಹಾವೇರಿ : ಮುದ್ದಾದ ಅವಳಿ ಮಕ್ಕಳನ್ನು ಸಂತ ತಂದೆಯೇ ಉಸಿರುಗಟ್ಟಿಸಿ ಕೊಂದ ಹೃದಯವಿದ್ರಾವಕ ಘಟನೆ ಹಾವೇರಿಯಲ್ಲಿ ನಡೆದಿದೆ.

ರಾಣೆಬೆನ್ನೂರು ತಾಲೂಕಿನ ಚಳಗೇರಿ ಟೋಲ್ ಗೇಟ್ ಬಳಿ ಘಟನೆ ನಡೆದಿದೆ. ಅದ್ವೈತ್ (4) ಹಾಗೂ ಅನ್ವೀತ್ (4) ಮೃತಪಟ್ಟ ಮುದ್ದಾದ ಅವಳಿ ಮಕ್ಕಳು. ಕೆಮಿಕಲ್ ಇಂಜಿನಿಯರ್ ಆಗಿರುವ ಅಮರ್ ಮಕ್ಕಳನ್ನು ಕೊಂದ ಪಾಪಿ ತಂದೆಯಾಗಿದ್ದಾನೆ.

ಆರೋಪಿ ಅಮರ್ ತನ್ನ ಪತ್ನಿ ವಿಜಯಪುರದ ತನ್ನ ತಾಯಿ ಮನೆಗೆ ಹೋಗಿದ್ದಾಗ ಈ ಕೃತ್ಯ ಎಸಗಿದ್ದಾನೆ. ಮಕ್ಕಳನ್ನು ಕಾರಿನಲ್ಲಿ ಕರೆದುಕೊಂಡು ಹೋಗಿದ್ದ ಅಮರ್, ಮಕ್ಕಳ ಮುಖಕ್ಕೆ ಟೆಕ್ಸೋ ಟೇಪ್ ಅಂಟಿಸಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ.

ಮಕ್ಕಳ ಕಥೆ ಮುಗಿದಿದೆ ಎಂದ ಪಾಪಿ

ಬೆಳಗಾವಿ ಜಿಲ್ಲೆ ಗೋಕಾಕ್ ಮೂಲದ ಅಮರ್ ದಾವಣಗೆರೆಯ ಆಂಜನೇಯ ಮಿಲ್ ಬಡಾವಣೆಯಲ್ಲಿ ವಾಸವಾಗಿದ್ದನು. ಹರಿಹರ ಸಮೀಪದ ಕಾರ್ಗಿಲ್ ಫ್ಯಾಕ್ಟರಿಯಲ್ಲಿ ಕೆಮಿಕಲ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದನು. ಮಕ್ಕಳನ್ನು ಕಾರಿನಲ್ಲಿ ಕರೆದುಕೊಂಡು ಹೋಗಿದ್ದಾಗ ಪತ್ನಿ ಕರೆ ಮಾಡಿದ್ದರು. ಈ ವೇಳೆ ಮಕ್ಕಳ ಕಥೆ ಮುಗಿದಿದೆ ಅಂತಾ ಅಮರ್ ಹೇಳಿದ್ದಾನೆ.

ಇದನ್ನೂ ಓದಿ : ಜೋಕಾಲಿ ಸೀರೆ ಕುತ್ತಿಗೆಗೆ ಸಿಲುಕಿ ಬಾಲಕಿ ಸಾವು

ಕಾರಿನಲ್ಲೇ ಶವ ತಂದ ಆರೋಪಿ

ಅಮರ್ ಮಾತಿನಿಂದ ಗಾಬರಿಗೊಂಡ ಪತ್ನಿ ಕೂಡಲೇ ಪೊಲೀಸರಿಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದಾರೆ. ಆ ವೇಳೆಗಾಗಲೇ ಅಮರ್ ತನ್ನ ಮೊಬೈಲ್ ಸ್ವಿಚ್ ಆಫ್ ಮಾಡಿದ್ದನು. ಸಿಮ್ ಕಾರ್ಡ್ ಟ್ರೇಸ್ ಮಾಡಿದ ಪೊಲೀಸರು ಚಳಗೇರಿ ಟೋಲ್ ಬಳಿ ಅಮರ್ ಇರುವ ಬಗ್ಗೆ ಮಾಹಿತಿ ಲಭ್ಯವಾಗಿತ್ತು. ಅಲ್ಲಿಗೆ ಪೊಲೀಸರು ಹೋದಾಗ ಅಮರ್ ದಾವಣಗೆರೆಗೆ ಹಿಂದಿರುಗಿರುವುದು ತಿಳಿದಿದೆ. ಕೊಲೆ ಬಳಿಕ ಅಮರ್ ಮಕ್ಕಳ ಮೃತದೇಹಗಳನ್ನು ಕಾರಿನಲ್ಲಿಯೇ ತಂದಿದ್ದ ಎನ್ನಲಾಗಿದೆ.

ದಾವಣಗೆರೆಗೆ ಬಂದ ಪೊಲೀಸರು ಆರೋಪಿ ತಂದೆಯನ್ನು ಅರೆಸ್ಟ್ ಮಾಡಿದ್ದಾರೆ. ತನಿಖೆ ವೇಳೆ ತಾನೇ ಮಕ್ಕಳನ್ನು ಕೊಂದಿರುವುದಾಗಿ ಒಪ್ಪಿಕೊಂಡಿದ್ದಾನೆ. ಈ ಸಂಬಂಧ ದಾವಣಗೆರೆಯ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

Related Articles

TRENDING ARTICLES