Thursday, December 19, 2024

ಫುಲ್ ಟೈಟ್​ ಆಗಿ ಆಪರೇಷನ್ ಥಿಯೇಟರ್​ಗೆ ಬಂದ ಡಾಕ್ಟರ್ ..!

ಚಿಕ್ಕಮಗಳೂರು: ಸಂತಾನಹರಣ ಆಪರೇಷನ್​ಗೆ ವೈದ್ಯೆನೊಬ್ಬ ಕುಡಿದ ಅಮಲಿನಲ್ಲಿ ಆಸ್ಪತ್ರೆ ಬಂದಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ. 

ಹೌದು  ಆಸ್ಪತ್ರೆಗೆ ಪಾನಮತ್ತನಾಗಿ (Drunkard Doctor) ಬಂದಿರುವ ಘಟನೆ ಚಿಕ್ಕಮಗಳೂರು (Chikkamagaluru) ಜಿಲ್ಲೆಯ ಕಳಸ ತಾಲೂಕು ಆಸ್ಪತ್ರೆಯಲ್ಲಿ (Kalasa Taluk Hospital) ನಡೆದಿದೆ.

ಇನ್ನೂ ಕಳಸ ಸರ್ಕಾರಿ ತಾಲೂಕು ಆಸ್ಪತ್ರೆಯಲ್ಲಿ ಬುಧವಾರ ಸಂತಾನಹರಣ ಕ್ಯಾಂಪ್ ಆಯೋಜನೆ ಮಾಡಲಾಗಿತ್ತು. ಈ ಹಿನ್ನೆಲೆ ಬೆಳಗ್ಗೆ 8 ಗಂಟೆಗೆ 10ಕ್ಕೂ ಹೆಚ್ಚು ಮಹಿಳೆಯರು ಮಕ್ಕಳನ್ನು ಮನೆಯಲ್ಲಿ ಬಿಟ್ಟು ಆಸ್ಪತ್ರೆಗೆ ಬಂದಿದ್ದರು. ಇದೇ ವೇಳೆ ಮಧ್ಯಸೇವನೆ ಮಾಡಿ ಬಂದಿರುವ ವೈದ್ಯನನ್ನು ಬಜಾವ್​ ಮಾಡಲು ಆಸ್ಪತ್ರೆ ಸಿಬ್ಬಂದಿ ಹೈಡ್ರಾಮಾ ಮಾಡಿರುವುದನ್ನು ಗಮನಿಸಿದ ಸಾರ್ವಜನಿಕರು ಆಸ್ಪತ್ರೆ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಶಸ್ತ್ರಚಿಕಿತ್ಸೆ ಮಾಡಬೇಕಿದ್ದ ಕೊಪ್ಪ ಸರ್ಕಾರಿ ಆಸ್ಪತ್ರೆ ವೈದ್ಯ ಬಾಲಕೃಷ್ಣ ಮಧ್ಯಾಹ್ನ 3 ಗಂಟೆಗೆ ಬಂದಿದ್ದಾರೆ. ಅದು ಮದ್ಯ ಸೇವಿಸಿ ನಿಲ್ಲಲಾರದ ಸ್ಥಿತಿಯಲ್ಲಿ ಬಂದಿದ್ದಾರೆ. ಕುಡಿದ ಬಂದ ಡಾಕ್ಟರ್ ಆಪರೇಷನ್ ಥಿಯೇಟರ್​ನಲ್ಲಿಯೇ ನಿದ್ದೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಆಸ್ಪತ್ರೆ ಸಿಬ್ಬಂದಿಯ ಹೈಡ್ರಾಮಾ

ವೈದ್ಯ ಬಾಲಕೃಷ್ಣ ಬರುವ ನಿರೀಕ್ಷೆಯಲ್ಲಿ ಕೆಲ ಮಹಿಳೆಯರಿಗೆ ಅನಸ್ತೇಶಿಯಾ ಸಹ ನೀಡಲಾಗಿತ್ತು. ಕುಡಿದು ಬಂದಿದ್ದ ವೈದ್ಯನ ರಕ್ಷಣೆಗೆ ಮುಂದಾದ ಆಸ್ಪತ್ರೆ ಸಿಬ್ಬಂದಿ ದೊಡ್ಡ ಹೈಡ್ರಾಮಾ ಮಾಡಿದ್ದಾರೆ.  ವೈದ್ಯರಿಗೆ ಏನೋ ಆಗಿದೆ, ಶುಗರ್ ಕಮ್ಮಿ ಆಗಿದೆ, ಬಿಪಿ ಜಾಸ್ತಿ ಆಗಿದೆ ಎಂದು ಸಿಬ್ಬಂದಿ ನಾಟಕವಾಡಿದ್ದಾರೆ.

ಇದನ್ನೆಲ್ಲಾ ಗಮಿನಿಸಿದ ಸಾರ್ವಜನಿಕರು ಆಸ್ಪತ್ರೆ ಸಿಬ್ಬಂದಿ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ವೈದ್ಯ ಪಾನಮತ್ತನಾದ ಹಿನ್ನೆಲೆ ಸಂತಾನಹರಣ ಕ್ಯಾಂಪ್ ಇಂದು ಮುಂದೂಡಿಕೆಯಾಗಿದೆ.

 

 

 

RELATED ARTICLES

Related Articles

TRENDING ARTICLES