Monday, December 23, 2024

ಅವ್ರು, ನಮ್ಮ ತಾಯಂದಿರ ಶೀಲವನ್ನು ಕೆಡಿಸೋದಕ್ಕೆ ಕೈ ಹಾಕಿದವರು : ಸಿ.ಟಿ. ರವಿ ವಾಗ್ದಾಳಿ

ಬೆಂಗಳೂರು : ನಮ್ಮ ತಾಯಂದಿರ ಶೀಲವನ್ನು ಕೆಡಿಸೋದಕ್ಕೆ ಕೈ ಹಾಕಿದವರು ಎಂದು ಬುದ್ಧಿಜೀವಿಗಳ ವಿರುದ್ಧ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಗುಂಡು ತುಂಡು, ಸಿಗರೇಟ್ ಕೈಯಲ್ಲಿ ಇದ್ದರೆ ಮಾತ್ರ ಬುದ್ದಿ ಓಡುವ ಜನ. ಇವರು ಮಾತ್ರ ಬುದ್ದಿಜೀವಿಗಳಾ? ಅವರು ಮಾತ್ರ ವಿರೋಧ ಮಾಡ್ತಾ ಇದ್ದಾರೆ ಎಂದು ಛೇಡಿಸಿದ್ದಾರೆ.

ಬುದ್ದಿಜೀವಿಗಳು ಮೆಕಾಲೆ ಗರಡಿಯಲ್ಲಿ ಪಳಗಿದವರು. ಮೆಕಾಲೆ ಸದಾ ಭಾರತವನ್ನು ದಾಸ್ಯದ ಚಿಂತನೆಯಲ್ಲೇ ಇದ್ದ. ನಮ್ಮ ಸಂಸ್ಕೃತಿಗಳ ವಿರುದ್ಧ ಇದ್ದವರು. ದಾಸ್ಯದಲ್ಲೆ ಇರಬೇಕು ಎನ್ನುವ ಯೋಚನೆಯಲ್ಲಿ ಜನರನ್ನು ತಯಾರು ಮಾಡುವ ಯೋಚನೆ ಅವನದ್ದಾಗಿತ್ತು. ಕಾರ್ಲ್ ಮಾರ್ಕ್ಸ್ ಗರಡಿಯಲ್ಲಿ ಪಳಗಿದವರು. ಕುಟುಂಬ ಒಂದು ಸಂಸ್ಥೆ ಎಂತಿದ್ದ ಮಾರ್ಕ್ಸ್ ಎಂದು ಹೇಳಿದ್ದಾರೆ.

ರಾಜ್ಯ ಇರಬಾರದು ಎನ್ನುವ ಚಿಂತನೆ ಮಾರ್ಕ್ಸ್ ದಾಗಿತ್ತು. ಅವರ ಚಿಂತನೆಯಲ್ಲಿರುವ ಜನ ಭಾರತ ಶ್ರೇಷ್ಠ ಎಂದು ಹೇಳಿದ್ದಾರಾ? ಸತ್ಯ ಹೇಳಿದ್ದಾರಾ? ಅಲೆಗ್ಸಾಂಡರ್ ದಿ ಗ್ರೇಟ್. ಅಕ್ಬರಿ ದಿ ಗ್ರೇಟ್ ಎನ್ನೋ ಜನ. ಇವರು ಯಾರು? ದೇಶ ಲೂಟಿ ಮಾಡಿದವರು, ದಾಳಿಕೋರರು, ನಮ್ಮ ಸಂಸ್ಕೃತಿ ನಾಶ ಮಾಡಿದವರು. ನಮ್ಮ ತಾಯಂದಿರ ಶೀಲವನ್ನು ಕೆಡಿಸೋದಕ್ಕೆ ಕೈ ಹಾಕಿದವರು. ಅಂತರವನ್ನು ದಿ ಗ್ರೇಟ್ ಎಂದು ನಮ್ಮ ದೇಶದಲ್ಲಿ ಹೇಳಿಕೊಳ್ತೇವೆ ಎನ್ನೋದೆ ದೇಶಕ್ಕೆ ಅಪಮಾನ ಎಂದು ಕಿಡಿಕಾರಿದ್ದಾರೆ.

ಇದನ್ನೂ ಓದಿ : ಕರ್ನಾಟಕ ರಾಜ್ಯ ಶಿಕ್ಷಣ ನೀತಿಯನ್ನು ಜಾರಿಗೊಳಿಸುವುದಿಲ್ಲ ; ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್

ಮಕ್ಕಳಿಗೆ ಇದನ್ನು ಕಲಿಸಿದ್ದೇವಾ?

ದೇಶದಲ್ಲಿ ಸಾಧನೆ ಮಾಡಿದವರು ಇರಲಿಲ್ಲವಾ? ಆರ್ಯಭಟ, ಚಾಣಕ್ಯ, ಅಶೋಕ ಚಕ್ರವರ್ತಿ, ರಾಜರಾಜ ಚೋಳ ಎಲ್ಲಿಯವರು? ಅವರ ಇತಿಹಾಸದ ಬಗ್ಗೆ ಎಲ್ಲಾದರೂ ಹೇಳಿದ್ರಾ? ರಾಜ ಚೋಳ, ರಾಜೇಂದ್ರ ಚೋಳ, ಕರಿಕಾಳ ಚೋಳ, ಇವರೆಲ್ಲಾ ಇಂಡೊನೇಷ್ಯಾ ಕಾಂಬೋಡಿಯಾವರೆಗೆ ಭಾರತವನ್ನು ವಿಸ್ತರಣೆ ಮಾಡಿದ್ರು ಎನ್ನೋದನ್ನು ಇತಿಹಾಸದಲ್ಲಿ ಓದಿದ್ದೇವಾ? ಅಶೋಕ್ ಚಕ್ರವರ್ತಿ ಸಾಮ್ರಾಜ್ಯ ಪರ್ಶಿಯಾವನ್ನು ದಾಟಿ ಹೋಗಿತ್ತು. ಅದನ್ನು ಓದೀದ್ದೇವಾ? ಮಕ್ಕಳಿಗೆ ಇದನ್ನು ಕಲಿಸಿದ್ದೇವಾ? ಎಂದು ಪ್ರಶ್ನೆ ಮಾಡಿದ್ದಾರೆ.

ಸಿದ್ದರಾಮಯ್ಯ ಕಿವಿಗೆ ಪದೇ ಪದೆ ಊದ್ತಿದ್ದಾರೆ

ನಾವು ಹೇಳಿಕೊಟ್ಟಿದ್ದು ಅಕ್ಬರ್ ಗ್ರೇಟ್, ಅಲೆಗ್ಸಾಂಡರ್ ಗ್ರೇಟ್. ಈ ಬುದ್ದಿಜೀವಿಗಳು ಮೆಕಾಲೆ ಕಾರ್ಲ್ ಮಾರ್ಕ್ಸ್ ಗರಡಿಯಲ್ಲಿ ಪಳಗಿದವರು. ಆ ಜನರಿಗೆ ಭಾರತೀಯತೆ ಹೇಳುವ, ‌ಭಾರತದ ಹಿರಿಮೆ ಗರಿಮೆಗಳ ಹೇಳುವಂತ ಸಂಗತಿ ಅಪತ್ಯ ಆಗಿ ಕಂಡಿದೆ. ಆ ಜನ ಇವತ್ತು ಸಿದ್ದರಾಮಯ್ಯ ಕಿವಿಗೆ ಪದೇ ಪದೆ ಊದುತ್ತಾ ಇದ್ದಾರೆ. ಭಾರತದ ಶ್ರೇಷ್ಠತೆಯನ್ನು ಹೇಳುವ ಕೆಲಸ ಆಗಬೇಕು. ಆಗ ಭಾರತ ಎದ್ದು ನಿಲ್ಲುತ್ತೆ. ಸಾಮಾನ್ಯ ಜನ ದೇಶಕ್ಕೆ ಸಮರ್ಪಣೆ ಮಾಡಿದ್ದನ್ನು ಹೇಳಬೇಕು. ವಿಜ್ಞಾನ ತಂತ್ರಜ್ಞಾನ ಹೇಳಿದರೆ ಭಾರತ ಎದ್ದು ನಿಲ್ಲುತ್ತದೆ. ಈ ಜನರಿಗೆ ಭಾರತ ಎದ್ದು ನಿಲ್ಲಬಾರದು. ಹೀಗಾಗಿ ಈ ಜನ ಪಠ್ಯ ಪುಸ್ತಕ ನೆಪಮಾಡಿಕೊಂಡಿದ್ದಾರೆ ಎಂದು ಆರೋಪ ಮಾಡಿದ್ದಾರೆ.

RELATED ARTICLES

Related Articles

TRENDING ARTICLES