ಬೆಂಗಳೂರು: ರಾಮನಗರದ ಕಗ್ಗಲೀಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಉದ್ಯಮಿಯೋರ್ವ ತಲೆಗೆ ಗುಂಡುಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣದಲ್ಲಿ ಮಾಜಿ ಸಚಿವ ಅರವಿಂದ ಲಿಂಬಾವಳಿಗೆ ಬಿಗ್ ರಿಲೀಫ್ ಸಿಕ್ಕಿದೆ.
ಹೌದು, ಉದ್ಯಮಿ ಬರೆದಿಟ್ಟಿದ್ದ ಡೆತ್‌ನೋಟ್ ಆರೋಪಕ್ಕೆ ಸೂಕ್ತ ಸಾಕ್ಷ್ಯಗಳಿಲ್ಲದ ಹಿನ್ನೆಲೆಯಲ್ಲಿ ನ್ಯಾಯಾಲಯಕ್ಕೆ ಬಿ ರಿಪೋರ್ಟ್ ಸಲ್ಲಿಸಿ ತನಿಖೆ ಮುಕ್ತಾಯಗೊಳಿಸಲಾಗಿದೆ.
ಇನ್ನೂ ಕಳೆದ ಜನವರಿ 2ರಂದು ಬೆಂಗಳೂರಿನ ಉದ್ಯಮಿ ಪ್ರದೀಪ್, ಕಗ್ಗಲೀಪುರ ಸಮೀಪ ಕಾರಿನಲ್ಲಿಯೇ ಡೆತ್‌ನೋಟ್ ಬರೆದಿಟ್ಟು ಶೂಟೌಟ್ ಮಾಡಿಕೊಳ್ಳುವ ಮೂಲಕ ಆತ್ಮಹತ್ಯೆಗೆ ಶರಣಾಗಿದ್ದರು. ಅದರಲ್ಲಿ ಮಾಜಿ ಶಾಸಕ ಅರವಿಂದ ಲಿಂಬಾವಳಿ ಆತ್ಮಹತ್ಯೆಗೆ ಕಾರಣವೆಂದು ಹೆಸರು ಬರೆದಿಟ್ಟಿದ್ದರು.
ಪ್ರದೀಪ್ ಪತ್ನಿ ನೀಡಿದ ದೂರಿನ ಅನ್ವಯ 6 ಮಂದಿ ವಿರುದ್ಧ ಕಗ್ಗಲೀಪುರ ಪೊಲೀಸ್ ಠಾಣೆಯಲ್ಲಿ FIR ದಾಖಲು ಮಾಡಲಾಗಿತ್ತು. ಡೆತ್ ನೋಟ್ ಆರೋಪಕ್ಕೆ ಸರಿಯಾದ ಸಾಕ್ಷ್ಯಗಳು ಸಿಗದ ಹಿನ್ನಲೆಯಲ್ಲಿ ತನಿಖೆ ಮುಕ್ತಾಯಗೊಳಿಸಲಾಗಿದೆ. ತನಿಖೆ ವೇಳೆ ಕೌಟುಂಬಿಕ ಕಲಹ ಹಾಗೂ ಹಣಕಾಸಿನ ಸಮಸ್ಯೆಯಿಂದ ಆತ್ಮಹತ್ಯೆ ಮಾಡಿಕೊಂಡಿರುವ ವಿಚಾರ ಬೆಳಕಿಗೆ ಬಂದಿದೆ.
ಸದ್ಯಕ್ಕೆ ಅರವಿಂದ್ ಲಿಂಬಾವಳಿಗೆ ಬಿಗ್ ರಿಲೀಫ್ ಸಿಕ್ಕಿದೆ.