ಬೆಂಗಳೂರು : ಗ್ಯಾರಂಟಿ ಗಳಿಂದ ರಾಜ್ಯಕ್ಕೆ ಆರ್ಥಿಕ ಹೊರೆಯಾಗದಂತೆ ಕ್ರಮ ವಹಿಸಿ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಸಿಎಂಗೆ ಪತ್ರ ಬರೆಯುವ ಮೂಲಕ ಮನವಿ ಮಾಡಿದ್
ಹೌದು, ನೀವು ಕಾಂಗ್ರೆಸ್ ಗ್ಯಾರಂಟಿ ಗಳಿಗೆ 50 ಕೋಟಿ ಬೇಕಾಗಬಹುದು ಹೇಳಿದ್ದೀರಿ ಇದರಿಂದ ಆರ್ಥಿಕ ಪರಿಸ್ಥಿತಿ ಬಿಗಡಾಯಿಸಬಾರದು
ಹಾಗೂ ರಾಜ್ಯದ ಜನತೆಯ ಮೇಲೆ ಅಪರೋಕ್ಷವಾಗಿ ಹೆಚ್ಚಿನ ಭಾರ ಬೀಳಬಾರದು ಯೋಚಿಸಿ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳವಿರಿ ಎಂಬ ನಂಬಿಕೆ ಇದೆ.
ಇನ್ನೂ ನೀವು ಎಲ್ಲಾ ಗ್ಯಾರಂಟಿಗಳ ಜೊತೆಗೆ ಎಲ್ಲ ಅಭಿವೃದ್ಧಿ ಯೋಜನೆ ಗಳನ್ನು ಮುಂದುವರಿಸಿಕೊಂಡು ಹೋಗಬೇಕು .ಇದು ಕರ್ನಾಟಕದ ಸರ್ವಾಂಗೀಣ ಅಭಿವೃದ್ಧಿಯ ದೃಷ್ಟಿಯಿಂದ ಇದು ಸರ್ಕಾರದ ಜವಬ್ದಾರಿ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೈಗೊಂಡ ಯೋಜನೆಗಳನ್ನೂ ಕಡಿತಗೊಳಿಸದಂತೆಯೂ ಬೊಮ್ಮಾಯಿ ಮನವಿ ಮಾಡಿಕೊಂಡಿದ್ದಾರೆ.
ಬಿಜೆಪಿ ಅವಧಿಯಲ್ಲಿ ಜಾರಿಗೆ ತಂದಿರುವ ಯೋಜನೆಗಳ ಬಗ್ಗೆ ವಿಸ್ತಾರವಾಗಿ ಪತ್ರದಲ್ಲಿ ಉಲ್ಲೇಖ ಮಾಡಿ ಈ ಯೋಜನೆಗಳನ್ನು ಯಾವುದೇ ಕಾರಣಕ್ಕೂ ಸ್ಥಗಿತಗೊಳಿಸಬಾರದು ಎಂದು ಪತ್ರದಲ್ಲಿ ಬರೆದಿದ್ದಾರೆ.
ಬಸವರಾಜ ಬೊಮ್ಮಾಯಿ ಅವರ ಪತ್ರದಲ್ಲಿ ಏನಿದೆ..?
- ರೈತರಿಗೆ ಮೂರರಿಂದ ಐದು ಲಕ್ಷ ಇಡುತ್ತಿರುವ ಬಡ್ಡಿ ರಹಿತ ಸಾಲ ರದ್ದುಗೊಳಿಸಬಾರದು
- ಕನಿಷ್ಠ ಬೆಂಬಲ ಬೆಲೆ ಯೋಜನೆಗೆ ಒದಗಿಸಲಾದ 1500 ಕೋಟಿ ರೂ. ಕಡಿತಗೊಳಿಸಬಾರದು
- ಪ್ರಸ್ತುತ 9556 ಶಾಲಾ ಕೊಠಡಿಗಳ ನಿರ್ಮಾಣ ನಡೆಯುತ್ತಿದೆ.
- ಈ ವರ್ಷ ಈ ಶಾಲಾ ಕೊಠಡಿಗಳು ನಿರ್ಮಾಣ ಪೂರ್ಣವಾಗಲಿದೆ ಇದನ್ನ ರದ್ದು ಮಾಡಬಾರದು
- ವಿದ್ಯಾರ್ಥಿಗಳೇ ನೀಡುತ್ತಿರುವ ವಿದ್ಯಾ ನಿಧಿ ಯೋಜನೆಗೆ ಬಜೆಟ್ ನಲ್ಲಿ ಹಣ ಮೀಸಲಿರಿಸಲಾಗಿದೆ ಇದನ್ನು ರದ್ದುಗೊಳಿಸಬೇಡಿ
- ಗ್ಯಾರಂಟಿ ಗಳಿಂದ ರಾಜ್ಯಕ್ಕೆ ಆರ್ಥಿಕ ಹೊರೆಯಾಗಬಾರದು ಸಿಎಂ ಸಿದ್ದರಾಮಯ್ಯಗೆ ಪತ್ರದ ಮೂಲಕ ಮನವಿ ಮಾಡಿದ್ದಾರೆ.