ಬೆಂಗಳೂರು : ಮಕ್ಕಳ ಭವಿಷಕ್ಕಾಗಿ ಪಠ್ಯದಲ್ಲಿ ಏನು ಸೇರಿಸಬೇಕು, ಏನನ್ನು ಡಿಲೀಟ್ ಮಾಡ್ಬೇಕು ಎಂಬುದನ್ನು ತಜ್ಞರು ಚರ್ಚೆ ಮಾಡಿ ನಿರ್ಧರಿಸುತ್ತಾರೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.
ಬೆಂಗಳೂರಿನ ಗ್ರಾಮಾಂತರ ಜಿಲ್ಲೆ ದೇವನಹಳ್ಳಿಯಲ್ಲಿ ಮಾತನಾಡಿದ ಅವರು, ಶಾಲೆಯ ಮಕ್ಕಳಿಗೆ ಪಠ್ಯ ಬದಲಾವಣೆ ಬಗ್ಗೆ ಏನು ಮಾತನಾಡಲು ಹೋಗಲ್ಲ. ಬೇರೆ ಸಮಸ್ಯೆಗಳನ್ನು ಹಂತ-ಹಂತವಾಗಿ ಪರಿಹಾರ ಮಾಡೋಣ ಎಂದು ತಿಳಿಸಿದ್ದಾರೆ.
ಮೊದಲು ಪುಸ್ತಕ ಮತ್ತು ಸಮವಸ್ತ್ರ ನೀಡಿ ಎಂದು ಸೂಚನೆ ನೀಡಿದ್ದೇನೆ. ಮೊದಲಿಗೆ ಶಿಕ್ಷಕ ವರ್ಗಾವಣೆ ಗೊಂದಲ ಇತ್ತು. 87 ಸಾವಿರ ಜನರು ಅರ್ಜಿ ಹಾಕಿದ್ದಾರೆ. ನಿನ್ನೆ ಸಂಜೆ 20ರಿಂದ 25 ಸಾವಿರ ಶಿಕ್ಷಕರ ನೇಮಕಕ್ಕೆ ಅನುಮೋದನೆ ನೀಡಿದ್ದೇನೆ. ಅದರ ಪ್ರಕ್ರಿಯೆ ಇವತ್ತಿನಿಂದ ಆರಂಭ ಆಗುತ್ತೆ. ಈ ಹಿಂದಿನ ಸರ್ಕಾರ ಸಾಕಷ್ಟು ದಿನಗಳಿಂದ ಪೆಂಡಿಂಗ್ ಉಳಿಸಿಕೊಂಡಿತ್ತು ಎಂದು ಹೇಳಿದ್ದಾರೆ.
ಇದನ್ನೂ ಓದಿ : 5 ಗ್ಯಾರಂಟಿಗಳನ್ನು ಅನುಷ್ಠಾನ ಮಾಡೇ ಮಾಡುತ್ತೇವೆ ; ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ
‘ಕ್ಯಾಬಿನೆಟ್ನಲ್ಲಿ ‘ಗ್ಯಾರಂಟಿ‘ ನಿರ್ಧಾರ
ಮುಖ್ಯಮಂತ್ರಿಗಳು ಅಧಿಕಾರ ಸ್ವೀಕಾರ ಮಾಡಿದ ಕ್ಷಣದಿಂದ ಗ್ಯಾರಂಟಿ ಯೋಜನೆ ಮಾಡ್ತೇವೆ ಎಂದು ಹೇಳಿದ್ದಾರೆ. ಅದಕ್ಕೆ ಕೆಲವೊಂದು ನಿಯಮಗಳು ಇರುತ್ತವೆ. ಅದನ್ನ ಚರ್ಚೆ ಮಾಡ್ತಾ ಇದ್ದಾರೆ ಎಂದು ಮಧು ಬಂಗಾರಪ್ಪ ಸ್ಪಷ್ಟಪಡಿಸಿದ್ದಾರೆ.
ಇವತ್ತು ಮೇಜರ್ ಚರ್ಚೆ ಆಗುತ್ತೆ, ಇವತ್ತು ಏನು ಚರ್ಚೆ ಆಗುತ್ತೋ ಅದು ನಾಳೆ ಹೊರಬೀಳುತ್ತದೆ. ಪ್ರಣಾಳಿಕೆ ಸಮಿತಿ ಉಪಾಧ್ಯಕ್ಷ ನಾನೇ ಆಗಿರೋದ್ರಿಂದ ಗ್ಯಾರಂಟಿ ಯೋಜನೆಗಳು ಜಾರಿ ಆಗುತ್ತವೆ ಎಂದು ತಿಳಿಸಿದ್ದಾರೆ.