Monday, November 25, 2024

ನೀರು ಬಿಡುಗಡೆಗೆ ಕೋರಿ ‘ಮಹಾ’ ಸರ್ಕಾರಕ್ಕೆ ಪತ್ರ ಬರೆದ ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಬೇಸಿಗೆಗಾಲ ಇರುವ ಕಾರಣ ರಾಜ್ಯದ ಹಲವು ಜಿಲ್ಲೆಗಳಿಗೆ ನೀರಿನ ಅಗತ್ಯವಿದೆ. ಆದರಿಂದ 6 ಟಿಎಂಸಿ ನೀರು ಬಿಡುಗಡೆ ಕೋರಿ ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆಗೆ ಸಿಎಂ ಸಿದ್ಧರಾಮಯ್ಯ (Cm Siddaramaiah) ಪತ್ರ ಬರೆದಿದ್ದಾರೆ.

ಯಾವೆಲ್ಲಾ ಜಿಲ್ಲೆಗೆ ನೀರಿನ ಪೂರೈಕೆ..? 

ಬೆಳಗಾವಿ, ವಿಜಯಪುರ, ಬಾಗಲಕೋಟೆ, ಕಲಬುರಗಿ, ಯಾದಗಿರಿ ಮತ್ತು ರಾಯಚೂರು ಜಿಲ್ಲೆಯ ಜನರಿಗೆ ಕುಡಿಯುವ ನೀರು ಅಗತ್ಯವಿದೆ.

6 ಟಿಎಂಸಿ ನೀರು ಬಿಡುಗಡೆಗೆ ಮನವಿ

ಉಜ್ಜನಿ, ಕೋಯ್ನಾ ಡ್ಯಾಂನಿಂದ ಕೃಷ್ಣಾ ಹಾಗೂ ಭೀಮಾ ನದಿಗೆ ತಲಾ 3 ಟಿಎಂಸಿ ಅಂತೆ ಒಟ್ಟು 6 ಟಿಎಂಸಿ ನೀರು ಬಿಡುಗಡೆಗೆ ಕರ್ನಾಟಕ ಮನವಿ ಮಾಡಿದೆ.

ಪತ್ರದಲ್ಲಿ ಏನಿದೆ..? 

ಮೇ ತಿಂಗಳಲ್ಲಿ 1 ಟಿಎಂಸಿ ನೀರು ಬಿಡುಗಡೆಗೆ ಪತ್ರ ಬರೆಯಲಾಗಿತ್ತು. ಅದರೆ ಆಗ ಜಲಾಶಯದಿಂದ ನೀರು ಬಿಡುಗಡೆ ಮಾಡಿದಕ್ಕೆ ಧನ್ಯವಾದಗಳು. ಈಗ ಜನರು ಮತ್ತು ಜಾನುವಾರುಗಳ ಕುಡಿಯುವ ನೀರಿಗಾಗಿ ಮತ್ತೆ ನೀರು ಬಿಡುಗಡೆ ಮಾಡುವಂತೆ ಪತ್ರದ ಮೂಲಕ ಕೋರಲಾಗಿದೆ.

ಶೀಘ್ರವೇ ಅಧಿಕಾರಿಗೆ ನಿರ್ದೇಶನ ನೀಡಬೇಕೆಂದು ಸಿಎಂ ಮನವಿ

ಕುಡಿಯುವ ನೀರಿನ ಪೂರೈಕೆಗಾಗಿ ವಾರ್ನಾ, ಕೊಯ್ನಾ ಜಲಾಶಯದಿಂದ ಕೃಷ್ಣಾ ನದಿಗೆ 2 ಟಿಎಂಸಿ ಮತ್ತು ಉಜ್ಜನಿ ಜಲಾಶಯದಿಂದ ಭೀಮಾ ನದಿಗೆ 3 ಟಿಎಂಸಿ ನೀರನ್ನು ತಕ್ಷಣ ಸಂಬಂಧಪಟ್ಟ ಅಧಿಕಾರಿಗೆ ನಿರ್ದೇಶನ ನೀಡಬೇಕೆಂದು ಸಿಎಂ ಸಿದ್ಧರಾಮಯ್ಯ ವಿನಂತಿಸಿದ್ದಾರೆ.

 

RELATED ARTICLES

Related Articles

TRENDING ARTICLES