Monday, December 23, 2024

ಸೂರಿ ಅಡ್ಡಾದಲ್ಲಿ ‘ಬ್ಯಾಡ್ ಮ್ಯಾನರ್ಸ್’ ರೆಬೆಲಿಸಂ : ಅಭಿ-ಅವಿವಾ ಮದ್ವೆ ಬಳಿಕ ಚಿತ್ರ ರಿಲೀಸ್

ಬೆಂಗಳೂರು : ಅಮರ್ ಆಗಿ ಚಂದನವನಕ್ಕೆ ಕಾಲಿಟ್ಟ ಅಭಿಷೇಕ್ ಅಂಬರೀಶ್, ಇದೀಗ ಬ್ಯಾಡ್ ಮ್ಯಾನರ್ಸ್​ ತೋರಿಸೋರಿಗೆ ಹೆಡೆಮುರಿ ಕಟ್ಟೋಕೆ ಸಜ್ಜಾಗಿದ್ದಾರೆ. ಅಂಬರೀಶ್ ಬರ್ತ್ ಡೇ ವಿಶೇಷ, ನಯಾ ಮಾಸ್ ಟೀಸರ್ ಲಾಂಚ್ ಆಗಿದೆ. ಅದರ ಜೊತೆಗೆ, ಇದೇ ಮೊದಲ ಬಾರಿ ತಂದೆಗಾಗಿ ಅಭಿ-ಅವಿವಾ ರೀಲ್ಸ್ ಮಾಡಿದ್ದಾರೆ.

ಅಭಿಷೇಕ್ ಅಂಬರೀಶ್.. ರೆಬೆಲ್ ಸ್ಟಾರ್ ಅಂಬರೀಶ್ ರೀತಿ ಒಂದು ಗತ್ತು ಮೇಂಟೇನ್ ಮಾಡ್ತಿರೋ ನಟ. ಅಮರ್ ಚಿತ್ರದಿಂದ ಬಣ್ಣದಲೋಕಕ್ಕೆ ಕಾಲಿಟ್ಟ ಅಭಿಷೇಕ್, ಸದ್ಯ ತಮ್ಮ ಎರಡನೇ ಚಿತ್ರ ಬ್ಯಾಡ್ ಮ್ಯಾನರ್ಸ್​ ರಿಲೀಸ್ ಹಂತ ತಲುಪಿದೆ. ಸುಕ್ಕಾ ಸೂರಿ ಌಕ್ಷನ್ ಕಟ್​​ನಲ್ಲಿ ಸುಧಿ ನಿರ್ಮಾಣದ ಈ ಚಿತ್ರ, ಪಕ್ಕಾ ರಾ ಅಂಡ್ ರಗಡ್ ಸಿನಿಮಾ ಆಗಿದ್ದು, ಸ್ಯಾಂಪಲ್ಸ್​ನಿಂದ ನಿರೀಕ್ಷೆ ಹೆಚ್ಚಿಸಿದೆ.

ಉಷಾ ಉತ್ತುಪ್ ಗಾಯನದಲ್ಲಿ ಟೈಟಲ್ ಸಾಂಗ್ ಹಿಟ್ ಆಗಿದ್ದು, ಅಂಬರೀಶ್ ಅವ್ರ 71ನೇ ಬರ್ತ್ ಡೇ ವಿಶೇಷ ಮತ್ತೊಂದು ಟೀಸರ್ ಲಾಂಚ್ ಆಗಿದೆ. ಅಭಿ ಅದರಲ್ಲಿ ಸುಕ್ಕಾ ಸ್ಟೈಲ್​​ನಲ್ಲಿ ಸ್ಟೆಪ್ ಹಾಕ್ತಾ ಇರೋ ಝಲಕ್ ಎಲ್ಲರ ಕಣ್ಣು ಕುಕ್ಕುವಂತೆ ಮಾಡಿದೆ. ಅಂದಹಾಗೆ ಇದು ಅಭಿ ಸಿನಿ ಕರಿಯರ್​ಗೆ ಮೇಜರ್ ಟ್ವಿಸ್ಟ್ ಕೊಡಲಿದ್ದು, ನ್ಯೂ ಟೀಸರ್​ಗೆ ಬೊಂಬಾಟ್ ರೆಸ್ಪಾನ್ಸ್ ವ್ಯಕ್ತವಾಗ್ತಿದೆ.

ಜೂ.5ಕ್ಕೆ ಕಲ್ಯಾಣೋತ್ಸವ

ಸದ್ಯ ಮದ್ವೆ ಗುಂಗಲ್ಲಿರೋ ಯಂಗ್ ರೆಬೆಲ್ ಸ್ಟಾರ್ ತನ್ನ ಬಹುಕಾಲದ ಗೆಳತಿ ಅವಿವಾ ಬಿದ್ದಪ್ಪರನ್ನು ವರಿಸಲಿದ್ದಾರೆ. ಇದೇ ಜೂನ್ 5ಕ್ಕೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಅಭಿ ಅಂಡ್ ಅವಿವಾ ಕಲ್ಯಾಣೋತ್ಸವ ನಡೆಯಲಿದೆ. ಅದಕ್ಕೆ ಮೋದಿ, ಅಮಿತ್ ಶಾ ಇಂದ ಹಿಡಿದು ಸಿಎಂ ಸಿದ್ದರಾಮಯ್ಯವರೆಗೆ ಬಹುತೇಕ ರಾಜಕಾರಣಿಗಳು ಹಾಗೂ ಸಿನಿಮಾ ತಾರೆಯನ್ನು ಸುಮಲತಾ ಅಂಬರೀಶ್ ಆಹ್ವಾನಿಸಿದ್ದಾರೆ.

ಜೂ.7ಕ್ಕೆ ಅದ್ದೂರಿ ಆರತಕ್ಷತೆ

ಜೂನ್ 7ಕ್ಕೆ ಅರಮನೆ ಮೈದಾನದಲ್ಲೇ ಅದ್ದೂರಿ ಆರತಕ್ಷತೆ ಕಾರ್ಯಕ್ರಮ ಕೂಡ ನಡೆಯಲಿದೆ. ಅಲ್ಲದೆ, ಮಂಡ್ಯದ ಮದ್ದೂರಿನ ಬಳಿ ಇರೋ ಗೆಜ್ಜಲಗೆರೆ ಗ್ರಾಮದಲ್ಲಿ ಬೀಗರ ಔತಣಕೂಟ ನಡೆಯಲಿದ್ದು, ಲಕ್ಷಾಂತರ ಮಂದಿಗೆ ನಾನ್​ವೆಜ್ ಊಟ ಹಾಕಿಸಲಿದೆ ಅಂಬಿ ಕುಟುಂಬ. ಹೀಗೆ ಒಂದ್ಕಡೆ ಮದ್ವೆ ತಯಾರಿ, ಮತ್ತೊಂದ್ಕಡೆ ಸಿನಿಮಾ ರಿಲೀಸ್ ತಯಾರಿಯಲ್ಲಿ ಅಭಿಷೇಕ್ ಅಂಬರೀಶ್ ಸಖತ್ ಬ್ಯುಸಿ ಆಗಿಬಿಟ್ಟಿದ್ದಾರೆ.

ಅಪ್ಪನ ಹಿಟ್ ಸಾಂಗ್ಸ್​ಗೆ ಅಭಿ ಸ್ಟೆಪ್

ಅಭಿ ಅಂಡ್ ಅವಿವಾ ಕಲ್ಯಾಣದ ಬಳಿಕ ಬ್ಯಾಡ್ ಮ್ಯಾನರ್ಸ್​ ರಿಲೀಸ್ ಆಗಲಿದ್ದು, ಇಷ್ಟೊಂದು ಬ್ಯುಸಿ ಶೆಡ್ಯೂಲ್​ನ ನಡುವೆಯೂ ಕೂಡ ಅಭಿಷೇಕ್ ತಮ್ಮ ತಂದೆಯ ಬರ್ತ್ ಡೇನ ಬಹಳ ಅವಿಸ್ಮರಣೀಯವಾಗಿ ಸೆಲೆಬ್ರೇಟ್ ಮಾಡಿದ್ದಾರೆ. ಅಪ್ಪನ ಜನುಮ ದಿನಕ್ಕೆ ಎಂದೂ ರೀಲ್ಸ್ ಮಾಡದ ಅಭಿ, ಅವಿವಾ ಜೊತೆಗೂಡಿ ಅಪ್ಪನ ಹಿಟ್ ಸಾಂಗ್ಸ್​ಗೆ ಅವ್ರದ್ದೇ ಸ್ಟೈಲ್​​ನಲ್ಲಿ ಸ್ಟೆಪ್ ಹಾಕಿದ್ದಾರೆ.

ಒಲವಿನ ಉಡುಗೊರೆ, ಚಕ್ರವ್ಯೂಹ, ಮಂಡ್ಯದ ಗಂಡು ಮುಂತಾದ ಚಿತ್ರಗಳ ಜನಪ್ರಿಯ ಹಾಡುಗಳಿಗೆ ನೃತ್ಯ ಮಾಡಿದ್ದಾರೆ ಅಭಿ ಅಂಡ್ ಅವಿವಾ.  ಹಾಡುಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿವೆ. ಒಟ್ಟಾರೆ ಅಭಿ ಮತ್ತು ರಚಿತಾ ರಾಮ್ ನಟನೆಯ ಬ್ಯಾಡ್ ಮ್ಯಾನರ್ಸ್​ ಚಿತ್ರದ ರಿಲೀಸ್ ಡೇಟ್, ಅಭಿ ಮದ್ವೆ ಬೆನ್ನಲ್ಲೇ ಅನೌನ್ಸ್ ಮಾಡಲಿದೆ ಟೀಂ.

  • ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES