ಚಿತ್ರದುರ್ಗ : ಐದು ವರ್ಷದಲ್ಲಿ ಇಬ್ಬರು ಸಿಎಂ ಆಗುತ್ತಾರೆ ಎಂಬ ವಿಚಾರ ಅಪ್ರಸ್ತುತ ಎಂದು ಅರಣ್ಯ ಇಲಾಖೆ ಸಚಿವ ಈಶ್ವರ್ ಖಂಡ್ರೆ ಹೇಳಿಕೆ ನೀಡಿದ್ದಾರೆ.
ಚಿತ್ರದುರ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದಲ್ಲಿ ಎರಡು ಅವಧಿಗೆ ಇಬ್ಬರು ಸಿಎಂ ಎಂಬ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಖಂಡ್ರೆ ಹೇಳಿಕೆ ಸಿದ್ದರಾಮಯ್ಯನವರೇ 5 ವರ್ಷ ಪೂರ್ಣಾವಧಿ ಸಿಎಂ ಎಂಬ ಸುಳಿವು ನೀಡಿದೆ.
ಬಿಜೆಪಿಯವರು ಹೀನಾಯವಾಗಿ ಸೋತಿದ್ದಾರೆ, ಮಾಡಲು ಕೆಲಸವಿಲ್ಲ. ಬಿಜೆಪಿ ನೀಡಿದ ಒಂದು ಭರವಸೆಯೂ ಈಡೇರಿಸಿಲ್ಲ. ಕಾಂಗ್ರೆಸ್ ಆಡಳಿತದಲ್ಲಿ ಹಿಂದೆಯೂ ನುಡಿದಂತೆ ನಡೆದಿದ್ದೇವೆ. ಈಗಲೂ ನುಡಿದಂತೆ ನಡೆಯುತ್ತಿದ್ದೇವೆ ಎಂದು ಸಚಿವ ಈಶ್ವರ್ ಖಂಡ್ರೆ ಹೇಳಿದ್ದಾರೆ.
ಇದನ್ನೂ ಓದಿ : ಬಜರಂಗದಳ ಬ್ಯಾನ್ ಬಗ್ಗೆ ಕೇಳಿದ್ದಕ್ಕೆ ‘ಕೈ’ ಮುಗಿದ ಸಚಿವ ಜಮೀರ್
ಬಿಜೆಪಿಗರಿಗೆ ನಡುಕ ಹುಟ್ಟಿದೆ. ಹತಾಶೆ ಮನೋಭಾವನೆಯಿಂದ ಬಿಜೆಪಿಗರು ಹೇಳಿಕೆ ಕೊಡುತ್ತಿದ್ದಾರೆ. ಕಾಂಗ್ರೆಸ್ ಆಡಳಿತಕ್ಕೆ ಬರುತ್ತಿದ್ದಂತೆ ನಕ್ಸಲರು ಆಕ್ಟಿವ್ ಎಂದು ಸಿ.ಟಿ ರವಿ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿದ ಅವರು,
ಸಿ.ಟಿ.ರವಿ ದುರ್ವರ್ತನೆ, ದುರಹಂಕಾರಕ್ಕೆ ಜನ ತಕ್ಕ ಪಾಠ ಕಲಿಸಿದ್ದಾರೆ. ಈಗಲಾದರೂ ಇಂಥ ಹೇಳಿಕೆ ಕೊಡುವುದು ಬಿಡಲಿ ಎಂದು ಕುಟುಕಿದ್ದಾರೆ.
ಇಂದು ಚಿತ್ರದುರ್ಗ ಜಿಲ್ಲೆಗೆ ಭೇಟಿ ಕೊಟ್ಟ ಸಂಧರ್ಭದಲ್ಲಿ ಶ್ರೀ ತರಳಬಾಳು ಜಗದ್ಗುರು ಬೃಹನ ಮಠ ಸಿರಿಗೇರಿಯ ಪೂಜ್ಯ ಡಾll ಶಿವಮೂರ್ತಿ ಶಿವಾಚಾರ್ಯರನ್ನು ಭೇಟಿ ಮಾಡಿ, ಅವರ ಆರೋಗ್ಯ ಮತ್ತು ಕುಶಲೋಪರಿಯನ್ನು ವಿಚಾರಿಸಿ ಪೂಜ್ಯರ ಆಶೀರ್ವಾದವನ್ನು ಪಡೆದುಕೊಂಡೆನು. pic.twitter.com/8bTeIbX5DX
— Eshwar Khandre (@eshwar_khandre) May 30, 2023
ನಾವು ಸುಳ್ಳು ಹೇಳಲ್ಲ, ಬಿಜೆಪಿಗೆ ಸುಳ್ಳೇ ಮನೆ ದೇವರು. ನಾವು ಗ್ಯಾರಂಟಿ ಯೋಜನೆ ಜಾರಿಗೊಳಿಸಿದ ಬಳಿಕ ಟೀಕೆ ಟಿಪ್ಪಣಿ ಮಾಡಲಿ. ಪ್ರತಿ ಮನೆಯ ಯಜಮಾನಿಗೆ ಗೃಹಲಕ್ಷ್ಮಿ ಯೋಜನೆ ನೆರವು ನೀಡಲಿದೆ. ಅತ್ತೆಗೋ, ಸೊಸೆಗೂ ಎಂದು ಸಣ್ಣ ಪುಟ್ಟ ವಿಚಾರ ಪ್ರಸ್ತಾಪ ನಗೆಪಾಟಲು ಎಂದು ಬಿಜೆಪಿ ನಾಯಕರ ಆರೋಪಕ್ಕೆ ತಿರುಗೇಟು ನೀಡಿದ್ದಾರೆ.