Thursday, January 23, 2025

ಧೋನಿಗಾಗಿ ತವರು ರಾಜ್ಯವನ್ನೇ ಸೋಲಿಸಿದ ಸರ್ ಜಡೇಜಾ..!

ಬೆಂಗಳೂರು : ಐಪಿಎಲ್ ಫೈನಲ್ ಪಂದ್ಯ ಹಲವು ವಿಶೇಷ ಕ್ಷಣಗಳಿಗೆ ಸಾಕ್ಷಿಯಾಗಿದೆ. ಚೆನ್ನೈ ನಾಯಕ ಎಂ.ಎಸ್ ಧೋನಿಗಾಗಿ ಆಲ್ ರೌಂಡರ್ ರವೀಂದ್ರ ಜಡೇಜಾ ತಮ್ಮ ತವರು ರಾಜ್ಯವನ್ನೇ ಸೋಲಿಸಿದರು.

ಹೌದು, ಐಪಿಎಲ್ ಫೈನಲ್ ನಲ್ಲಿ ಇಬ್ಬರು ಆಟಗಾರರು ಕ್ರಿಕೆಟ್ ಪ್ರೇಮಿಗಳ ದಿಲ್ ಕದ್ದಿದ್ದಾರೆ. ಒಬ್ಬರು ಗುಜರಾತ್ ಯುವ ಬ್ಯಾಟರ್ ಸಾಯಿ ಸುದರ್ಶನ್. ಇನ್ನೊಬ್ಬರು ಟೀಂ ಇಂಡಿಯಾ ಹಾಗೂ ಚೆನ್ನೈ ಅನುಭವಿ ಆಲ್ ರೌಂಡರ್ ರವೀಂದ್ರ ಜಡೇಜಾ.

ನಿನ್ನೆ ನಡೆದ ಪಂದ್ಯದಲ್ಲಿ ಸಾಯಿ ಸುದರ್ಶನ್ ಸ್ಫೋಟಕ ಪ್ರದರ್ಶನ ತೋರಿದರು. ಇವರು ಮೂಲತಃ ತಮಿಳುನಾಡಿನ ಆಟಗಾರ. ತನ್ನ ತವರು ರಾಜ್ಯದ ಚೆನ್ನೈ ಸೂಪರ್ ಕಿಂಗ್ಸ್ ತಮಡದ ವಿರುದ್ಧ ಬೊಂಬಾಟ್ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಸುದರ್ಶನ್ ಆಟಕ್ಕೆ ಕ್ರಿಕೆಟ್ ದಿಗ್ಗಜರು ಗುಣಗಾನ ಮಾಡಿದ್ದಾರೆ.

ಇದನ್ನೂ ಓದಿ : ಅದ್ಭುತ : ಜಡೇಜಾ 500 ವಿಕೆಟ್.. 5,000 ರನ್

ಗುಜರಾತ್ ರಾಜ್ಯದವರಾದ ಚೆನ್ನೈ ಆಲ್ ರೌಂಡರ್ ಸರ್ ಜಡೇಜಾ ತನ್ನ ತವರು ರಾಜ್ಯದ ಗುಜರಾತ್ ಟೈಟಾನ್ಸ್ ತಂಡದ ಸೋಲಿಗೆ ಕಾರಣವಾಗಿದ್ದಾರೆ. ಈ ಗೆಲುವು ಧೋನಿಗಾಗಿ ಎಂದು ಹೇಳಿದ್ದಾರೆ. ಇಬ್ಬರೂ ಆಟಗಾರರು ತಮ್ಮ ಸ್ವಂತ ರಾಜ್ಯದ ತಂಡದ ವಿರುದ್ಧ ಆಡಿರುವುದು ವಿಶೇಷ. ಈ ಕುರಿತ ಮೀಮ್ಸ್ ಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿವೆ.

ಜಡೇಜಾ ಕಾಲಿಗೆ ನಮಸ್ಕರಿಸಿದ ಪತ್ನಿ

ಐಪಿಎಲ್ ಫೈನಲ್ ನಲ್ಲಿ ಗೆಲುವು ಸಾಧಿಸಿದ ಬಳಿಕ ರವೀಂದ್ರ ಜಡೇಜಾ ಅವರನ್ನು ಶಾಸಕಿ ಹಾಗೂ ಪತ್ನಿ ರಿವಾಬಾ ಅಭಿನಂದಿಸಿದ್ದಾರೆ. ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಜಡೇಜಾ ಮ್ಯಾಚ್ ವಿನ್ನಂಗ್ ಪ್ರದರ್ಶನವನ್ನು ನೋಡಿ ಮೈದಾನದಲ್ಲಿ ಜಡ್ಡು ಕಾಲಿಗೆ ನಮಸ್ಕರಿಸಿ ಅಪ್ಪಿಕೊಂಡಿದ್ದಾರೆ. ಇದೊಂದು ಸುಂದರ ಕ್ಷಣ. ಇದೇ ಭಾರತೀಯ ಸಂಪ್ರದಾಯ ಎಂದು ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

RELATED ARTICLES

Related Articles

TRENDING ARTICLES