ಹುಬ್ಬಳ್ಳಿ : ದೇವೆಗೌಡ, ಯಡಿಯೂರಪ್ಪ, ಸಿದ್ದರಾಮಯ್ಯ ಸೋತು ಗೆದ್ದವರೇ.. ಸೋಲಿನಿಂದ ಎದೆಗುಂದಬೇಕಿಲ್ಲ. ಮುಂದಿನ ಚುನಾವಣೆಯಲ್ಲಿ ಎದ್ದು ಬರೋಣ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಕಾರ್ಯಕರ್ತರಿಗೆ ಆತ್ಮಸ್ಥೈರ್ಯ ತುಂಬಿದ್ದಾರೆ.
ಹುಬ್ಬಳ್ಳಿಯಲ್ಲಿ ಹಮ್ಮಿಕೊಂಡಿದ್ದ ಚುನಾವಣೆಯ ಆತ್ಮವಾಲೋಕ ಸಭೆಯಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಅವರು ಮಾತನಾಡಿದ್ದಾರೆ. ನಾವು ಹುಬ್ಬಳ್ಳಿ-ಧಾರವಾಡ ಕ್ಷೇತ್ರದಲ್ಲಿ ಸೋತಿರಬಹುದು. ಆದರೆ, ರಾಜ್ಯದಲ್ಲಿ ಕಾಂಗ್ರೆಸ್ ಗೆದ್ದಿದೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷದ ಈ ಅಭೂತಪೂರ್ವ ಗೆಲುವನ್ನು ಬಹುಶಃ ದೆಹಲಿಯಲ್ಲಿ ಕುಳಿತಿರುವವರು(ಬಿಜೆಪಿ ನಾಯಕರು) ನಿರೀಕ್ಷೆ ಮಾಡಿರಲಿಲ್ಲ. ಜನರು ಮನಸ್ಸು ಮಾಡಿದರು ಏನು ಬೇಕಾದರೂ ಮಾಡಬಹುದು ಅಂತ ತೋರಿಸಿದ್ದಾರೆ ಎಂದು ಜಗದೀಶ್ ಶೆಟ್ಟರ್ ಕೇಸರಿ ಪಡೆಗೆ ಟಕ್ಕರ್ ಕೊಟ್ಟಿದ್ದಾರೆ.
ದೆಹಲಿಯಲ್ಲಿ ಕುಳಿತವರಿಗೆ ಈಗ ಅರ್ಥವಾಗಿದೆ. ಇದು ರಾಷ್ಟ್ರ ರಾಜಕೀಯವನ್ನು ಅಲ್ಲೋಲ.. ಕಲ್ಲೋಲ.. ಮಾಡಿದ ಫಲಿತಾಂಶ. ನಾನು ವಯಕ್ತಿಕವಾಗಿ ಎಂದು ಸೋತ್ತಿಲ್ಲ. ಸೋಲು ನಮ್ಮ ಕುಟುಂಬಕ್ಕೆ ಹೊಸದಲ್ಲ. ಕೆಲವರು ನಾನು ಸೋತ್ರೆ ಡಿಪ್ರೆಶನ್ ಹೋಗುತ್ತೆ ಅಂತ ಹೇಳಿದ್ದರು. ನಾನು ಬೇರೆಯವರಿಗೆ ಡಿಪ್ರೆಶನ್ ಹೋಗುವಂತೆ ಮಾಡುತ್ತೆನೆ ಹೊರತು. ನಾನು ಯಾವತ್ತೂ ಡಿಪ್ರೆಶನ್ ಗೆ ಹೋಗಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ : ಪ್ರಧಾನಿ ಮೋದಿ ಸರ್ಕಾರಕ್ಕೆ ನವ ವಸಂತದ ಸಂಭ್ರಮ
ಡಿಪ್ರೆಶನ್ ಮಾಡಲು ಬಂದವರು ಈಗ ಎಲ್ಲಿ?
ನನ್ನನ್ನು ಡಿಪ್ರೆಶನ್ಗೆ ಹೋಗುವಂತೆ ಮಾಡಲು ಹೋದವರು ಈಗ ಎಲ್ಲಿ? ಸೋಲು ಅಂತಿಮವಲ್ಲ. ಮತ್ತೆ ಪುಟಿದು ಬರಬೇಕು. ಮಾಜಿ ಪ್ರಧಾನಿ ಹೆಚ್.ಡಿ. ದೇವೆಗೌಡ, ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ಸಿದ್ದರಾಮಯ್ಯ ಸೋತು ಗೆದ್ದವರೇ. ಸೋಲಿನಿಂದ ಎದೆಗುಂದಬೇಕಿಲ್ಲ, ಮುಂದಿನ ಚುನಾವಣೆಯಲ್ಲಿ ಎದ್ದು ಬರೋಣ. ಜಿ.ಪಂ, ತಾ.ಪಂ ಚುನಾವಣೆಯಲ್ಲಿ ಕಾಂಗ್ರೆಸ್ ಅತೀ ಹೆಚ್ಚು ಸ್ಥಾನಗಳು ಬರುತ್ತವೆ. ಆ ರೀತಿಯಲ್ಲಿ ನಾವು ಕಾರ್ಯ ಮಾಡಬೇಕು ಎಂದು ಹುರಿದುಂಬಿಸಿದ್ದಾರೆ.
ಹುಬ್ಬಳ್ಳಿಯ ಕೇಶ್ವಾಪುರದ ರಾಯ್ಕರ್ ಗೆಸ್ಟ್ ಹೌಸ್ ನಲ್ಲಿ ಇಂದು ಹುಬ್ಬಳ್ಳಿ – ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರದ ಚುನಾವಣೆಯ ಅವಲೋಕನ ಸಭೆ ನಡೆಸಿ, ಮಾತನಾಡಿ, ಚುನಾವಣೆ ಸಂದರ್ಭದಲ್ಲಿ ಶ್ರಮವಹಿಸಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ ಎಲ್ಲ ಕಾರ್ಯಕರ್ತರಿಗೆ, ಹಿತೈಷಿಗಳಿಗೆ ಮತ್ತು ಆಪ್ತರಿಗೆ ಅಭಿನಂದನೆ ಸಲ್ಲಿಸಲಾಯಿತು. pic.twitter.com/lycjYLS5MA
— Jagadish Shettar (@JagadishShettar) May 30, 2023
ಹಣ, ಐಟಿ ರೈಡ್ ಅಸ್ತ್ರ ಬಳಸಿ ಬಿಜೆಪಿ ಗೆದ್ದಿದೆ
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಈಗಿರುವ ಸ್ಥಾನಗಳನ್ನು ಉಲ್ಟಾ ಮಾಡಬೇಕು. ಕರ್ನಾಟಕದ ಈ ಫಲಿತಾಂಶ ದೇಶದ ಮುಂದಿನ ಎಲ್ಲಾ ಚುನಾವಣೆಗಳ ದಿಕ್ಸೂಚಿ. ನಾನು ಎಂದು ಹಣ ಕೊಟ್ಟು ಚುನಾವಣೆಗೆ ಗೆದ್ದಿಲ್ಲ. ಆದರೆ, ಈ ಬಾರಿ ಹಣ ಕೊಟ್ಟು ಬಿಜೆಪಿ ಗೆದ್ದಿದೆ. ಬ್ರೈನ್ ವಾಶ್ ಮಾಡಿ, ಹಣದ ಪ್ರಭಾವ, ಐಟಿ ರೈಡ್ ಅಸ್ತ್ರ ಬಳಸಿ ಬಿಜೆಪಿ ಗೆದ್ದಿದೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಆರೋಪ ಮಾಡಿದ್ದಾರೆ.