Monday, December 23, 2024

3 ಗ್ಯಾರಂಟಿ ಈಡೇರಿಸಿದರೂ ಲೋಕಸಭೆ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಬರತ್ತೆ; ಜಗದೀಶ್​ ಶೆಟ್ಟರ್​

ಹುಬ್ಬಳ್ಳಿ: 3 ಗ್ಯಾರಂಟಿ ಈಡೇರಿಸಿದರೂ ಲೋಕಸಭೆ ಚುನಾವಣೆಯಲ್ಲಿ ನಮಗೆ ಹೆಚ್ಚಿನ ಸೀಟ್ ಬರತ್ತೆ ಎಂದು ಜಗದೀಶ್ ಶೆಟ್ಟರ್ ಹೇಳಿದ್ದಾರೆ.

ಹೌದು, ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು ನಾವು 3 ಗ್ಯಾರಂಟಿ ಈಡೇರಿಸಿದರೂ ಕಾಂಗ್ರೆಸ್​ ಲೋಕಸಭೆ ಚುನಾವಣೆಯಲ್ಲಿ ಹೆಚ್ಚಿನ ಸೀಟ್ ಬರತ್ತೆ. ಇಡೀ ರಾಜ್ಯದಲ್ಲಿ ಕಾಂಗ್ರೆಸ್(Congress) ಗೆದ್ದು ಸರ್ಕಾರ ರಚನೆ ಮಾಡಿರುವುದು ಇದಕ್ಕೆ ಸಾಕ್ಷಿ ಎಂದಿದ್ದಾರೆ.

ಈ ಬಾರಿ ಕರ್ನಾಟಕದಲ್ಲಿ ಕಾಂಗ್ರೆಸ್​ ಬಹುಮತದಿಂದ ಅಧಿಕಾರಕ್ಕೆ ಬರುತ್ತೆ ಅಂತ  ದಿಲ್ಲಿ ನಾಯಕರು ಕೂಡ ನೀರಿಕ್ಷೆ ಮಾಡಿರಲಿಲ್ಲ. ಪರೋಕ್ಷವಾಗಿ ಮೋದಿ, ಅಮಿತ್ ಶಾ ವಿರುದ್ದ ಶೆಟ್ಟರ್ ಶೆಟ್ಟರ್ ವಾಗ್ದಾಳಿ ನಡೆಸಿದರು.

ಇನ್ನು ಜನ ಮನಸ್ಸು ಮಾಡಿದ್ರೆ, ಬದಲಾವಣೆ ತರಬಹುದು ಅನ್ನೋದಕ್ಕೆ ಕರ್ನಾಟಕದ ಫಲಿತಾಂಶ ಸಾಕ್ಷಿಯಾಗಿದ್ದು,ಚುನಾವಣೆಯಲ್ಲಿ ಸೋಲು ಗೆಲವು ಸಹಜ, ನಾನು ವಯಕ್ತಿಕವಾಗಿ ಸೋತಿಲ್ಲ. ಮೂರು ಸೋಲು ಕಂಡ ಕುಟುಂಬ ನಮ್ಮದು, ಇದು ಹೊಸದಲ್ಲ.ನಾನು ಯಾವುದೇ ಡಿಪ್ರೆಶನ್​ ಗೆ ಹೋಗಿಲ್ಲ ಎಂದರು.

2024 ರ ಲೋಕಸಭೆ ಚುನಾವಣೆಯಲ್ಲಿ ನಮ್ಮ ಹೋರಾಟ ಆರಂಭವಾಗತ್ತೆ ಇಡೀ ರಾಜ್ಯದ ತುಂಬಾ ನಾನು ಪ್ರಚಾರ ಮಾಡ್ತೀನಿ. ನಮ್ಮನ್ನ ಉಪಯೋಗಿಸಿ ಎಂದು ನಾನು ಕಾಂಗ್ರೆಸ್ ನಾಯಕರಿಗೆ ತಿಳಿಸಿದ್ದೇನೆ ಎಂದರು.

 

RELATED ARTICLES

Related Articles

TRENDING ARTICLES