ತುಮಕೂರು : ನನಗೆ ಬೇರೆ ಖಾತೆ ಸಿಗುವ ನಿರೀಕ್ಷೆ ಇತ್ತು. ಆದರೆ, ಪುನಃ ಗೃಹ ಖಾತೆ ಸಿಕ್ಕಿದೆ ಎಂದು ಸಚಿವ ಡಾ.ಜಿ ಪರಮೇಶ್ವರ ಹೇಳಿದ್ದಾರೆ.
ಗೃಹ ಖಾತೆ ನಿಮಗೆ ಒಪ್ಪಿಗೆ ಇದೆಯಾ ಅನ್ನೋ ಪ್ರಶ್ನೆಗೆ ತುಮಕೂರಿನಲ್ಲಿ ಉತ್ತರಿಸಿರುವ ಅವರು, ನಮಗೆ ಒಪ್ಪಿಗೆ ಇರೋದು ಬೇರೆ ವಿಚಾರ. ಪಕ್ಷ ಕೊಟ್ಟ ಜವಾಬ್ದಾರಿಯನ್ನ ನಿಭಾಯಿಸಬೇಕು ಎಂದು ತಿಳಿಸಿದ್ದಾರೆ.
ಪಕ್ಷ ಯಾವ ಜವಾಬ್ದಾರಿ ಕೊಡುತ್ತೋ ಅದನ್ನು ಮಾಡಬೇಕು. ನಾನು ಎರಡು ಬಾರಿ ಗೃಹ ಸಚಿವನಾಗಿ ಕೆಲಸ ಮಾಡಿದ್ದೇನೆ. ನನ್ನ ಮೇಲೆ ಹೆಚ್ಚಿನ ವಿಶ್ವಾಸವಿಟ್ಟು ಗೃಹ ಖಾತೆ ಕೊಟ್ಟಿದ್ದಾರೆ. ಈ ಸಂದರ್ಭದಲ್ಲಿ ಗೃಹ ಖಾತೆ ಬಹಳ ಮುಖ್ಯವಾದದ್ದು ಎಂದು ನನಗೆ ಜವಾಬ್ದಾರಿ ಕೊಟ್ಟಿದ್ದಾರೆ. ತೊಂದ್ರೆ ಇಲ್ಲ ಕೆಲಸ ಮಾಡುತ್ತೇನೆ ಎಂದು ಹೇಳಿದ್ದಾರೆ.
ಚಾಲೆಂಜ್ ಅಂತಾ ಏನೂ ಇಲ್ಲ. ನಾವು ಜನ ಸಮುದಾಯಕ್ಕೆ ಭರವಸೆ ಕೊಟ್ಟಿದ್ದೇವೆ. ಅದಕ್ಕೆ ಸ್ಪಂದಿಸಿ ಜನ ನಮಗೆ ಮತ ಹಾಕಿದ್ದಾರೆ. ಎಲ್ಲಾ ಸಚಿವರು ಇದನ್ನು ಮನಸ್ಸಿನಲ್ಲಿಟ್ಟುಕೊಂಡು ಕೆಲಸ ಮಾಡ್ಬೇಕು ಅಂತಾ ಸಿಎಂ ಕಿವಿಮಾತು ಹೇಳಿದ್ದಾರೆ. ಜನರು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಅದಕ್ಕೆ ಸರಿಸಮಾನವಾಗಿ ಕೆಲಸ ಮಾಡೋಣ ಅಂತಾ ಹೇಳಿದ್ದಾರೆ ಎಂದಿದ್ದಾರೆ.
ಇದನ್ನೂ ಓದಿ : ಮಗು ಹುಟ್ಟಿ 15 ದಿನ ಆಗಿದೆ.. ಬಟ್ಟೆ ಹೊಲಿಸೋಕೆ ಅಳತೆ ಕೊಡಬೇಕು : ಡಿ.ಕೆ ಶಿವಕುಮಾರ್ ಟಾಂಗ್
ಗೊಂದಲ ಸೃಷ್ಟಿ ಮಾಡೋದು ಬಿಜೆಪಿ ಉದ್ದೇಶ
ಐದು ಗ್ಯಾರಂಟಿ ಜಾರಿ ಬಗ್ಗೆ ಗೊಂದಲವಾಗಿರೋ ವಿಚಾರದ ಬಗ್ಗೆ ಮಾತನಾಡಿರುವ ಅವರು, ಜನ ಸಮುದಾಯದಲ್ಲಿ ಗೊಂದಲ ಸೃಷ್ಟಿ ಮಾಡಬೇಕು ಅನ್ನೋದು ಅವರ ಉದ್ದೇಶ ಅಂತಾ ಕಾಣುತ್ತೆ. ನಾವು ಮೊದಲನೇ ಕ್ಯಾಬಿನೆಟ್ ನಲ್ಲಿ ತೀರ್ಮಾನ ತಗೋತೀವಿ ಅಂತಾ ಹೇಳಿದ್ವಿ. ಅದರ ಪ್ರಕಾರ ಆದೇಶ ಹೊರಡಿಸಿದ್ದೇವೆ ಎಂದು ಡಾ.ಜಿ ಪರಮೇಶ್ವರ ಹೇಳಿದ್ದಾರೆ.
ಅವರಾದ್ರೆ ಹಾಗೆ ಕೊಡ್ತಿದ್ರಾ?
ಯಾವ ಯಾವ ಇಲಾಖೆಗೆ ಯಾವ ಯಾವ ಗ್ಯಾರಂಟಿ ಬರುತ್ತೆ ಅದನ್ನು ಜಾರಿ ಮಾಡಲು ಹೇಳಿದ್ದೇವೆ. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗೆ ಅನ್ನಭಾಗ್ಯ ಯೋಜನೆ ಬಗ್ಗೆ ನಿರ್ದೇಶನ ನೀಡಿದ್ದೇವೆ. ಒಂದೊಂದು ಇಲಾಖೆಗೂ ಆದೇಶ ಹೊರಡಿಸಿ ವರ್ಕ್ ಔಟ್ ಮಾಡಿ ವರದಿ ನೀಡುವಂತೆ ಹೇಳಿದ್ದೀವಿ. ಜೂನ್ 1ರಂದು ಕ್ಯಾಬಿನೆಟ್ ಮೀಟಿಂಗ್ ಇದೆ. ಅಂದು ಎಲ್ಲವೂ ತೀರ್ಮಾನ ಆಗಲಿದೆ. ಈ ರೀತಿ ತುಂಬಾ ನಿಯಮಾವಳಿಗಳಿವೆ. ಅದನ್ನೆಲ್ಲ ಬಿಟ್ಟು ಹಾಗೆ ಕೊಟ್ಟಬಿಡಿ ಅಂತಾ ಬೊಮ್ಮಾಯಿ ಹೇಳ್ತಿದ್ದಾರೆ. ಅವರಾದ್ರೆ ಹಾಗೆ ಕೊಡ್ತಿದ್ರಾ ಎಂದು ಪ್ರಶ್ನೆ ಮಾಡಿದ್ದಾರೆ.