Wednesday, January 22, 2025

ಸಿದ್ದರಾಮಯ್ಯ ಸಂಪುಟದಲ್ಲಿ ಅತಿ ಶ್ರೀಮಂತ ಮಿನಿಸ್ಟರ್ ಯಾರು ಗೊತ್ತಾ..?

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramiah) ನೇತೃತ್ವದ 34 ಮಂದಿಯ ಸಂಪೂರ್ಣ ಸಚಿವ ಸಂಪುಟ  ರಚನೆಯಾಗಿದ್ದು, ತಡರಾತ್ರಿ ಖಾತೆಗಳನ್ನು ಹಂಚಿಕೆ ಮಾಡಲಾಗಿದೆ.

ಹೌದು, ನನ್ನಿ ರಾತ್ರಿ ಸಿದ್ದರಾಮಯ್ಯ (Siddaramaiah) ನೇತೃತ್ವದ ನೂತನ ಸರ್ಕಾರದ ಸಚಿವ ಸಂಪುಟದ ಖಾತೆ ಹಂಚಿಕೆಯ ಅಧಿಕೃತ ಪಟ್ಟಿ ಪ್ರಕಟವಾಗಿದೆ. ಈ ಸಂಪುಟದಲ್ಲಿರುವ ಸಚಿವರ ಆಸ್ತಿ (Property), ವಯಸ್ಸು (Age), ಅಪರಾಧ (criminal) ಮತ್ತು ಶೈಕ್ಷಣಿಕ ವಿವರ ಬಹಿರಂಗಗೊಂಡಿದೆ.

ಅದರ ವರದಿಯ ಪ್ರಕಾರ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್(DK Shivakumar) ಅವರು ಎಲ್ಲಾ ಸಚಿವರ ಪೈಕಿ ಅತ್ಯಂತ ಶ್ರೀಮಂತರಾಗಿದ್ದಾರೆ.ಕನಕಪುರ ವಿಧಾನಸಭಾ ಕ್ಷೇತ್ರದ ಶಾಸಕ ಡಿಕೆ ಶಿವಕುಮಾರ್ ಅವರು ಬರೊಬ್ಬರಿ 1,413.80 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿದ್ದಾರೆ.

ಇನ್ನು ಮುಧೋಳ ಮೀಸಲು ಕ್ಷೇತ್ರದ ತಿಮ್ಮಾಪುರ ರಾಮಪ್ಪ ಬಾಳಪ್ಪ ಅವರು 58.56 ಲಕ್ಷ ರೂ. ಮೌಲ್ಯದ ಆಸ್ತಿ ಹೊಂದುವ ಮೂಲಕ ಬಡ ಸಚಿವ ಎನ್ನಲಾಗುತ್ತಿದೆ.

ಕರ್ನಾಟಕ ಸಂಪುಟದಲ್ಲಿ ಒಟ್ಟು 31 (ಶೇ. 97ರಷ್ಟು) ಸಚಿವರು ಕೋಟ್ಯಾಧಿಪತಿಗಳಾಗಿದ್ದು, ಅವರ ಸರಾಸರಿ ಆಸ್ತಿ 119.06 ಕೋಟಿ ರೂ. ಆಗಿದೆ. 32 ಸಚಿವರ ಪೈಕಿ ಡಿಕೆ ಶಿವಕುಮಾರ್ ಅಗ್ರಸ್ಥಾನದಲ್ಲಿದ್ದಾರೆ.

 

 

 

 

RELATED ARTICLES

Related Articles

TRENDING ARTICLES