ಬೆಂಗಳೂರು: ಜ್ಯೂನಿಯರ್ ರೆಬೆಲ್ ಸ್ಟಾರ್ ಅಭಿಷೇಕ್ ಅಂಬರೀಶ್ (Abhishek Ambareesh) ಮತ್ತು ಅವಿವಾ ಬಿಡಪ್ಪ ಜ್ಯೂನ್ 5ರಂದು ಹಸೆಮಣೆ ಏರಲಿದ್ದಾರೆ.
ಹೌದು, ಇದೀಗ ಸೋಷಿಯಲ್ ಮೀಡಿಯಾದಲ್ಲಿ ಅಭಿ-ಅವಿವಾ ಅವರ ಮದುವೆ ಅಮಂತ್ರಣ ಪತ್ರ ವೈರಲ್ ಆಗುತ್ತಿದೆ.
ಈ ಅಮಂತ್ರಣ ಪತ್ರದಲ್ಲಿ ಜ್ಯೂನಿಯರ್ ರೆಬೆಲ್ ಸ್ಟಾರ್ ಅಭಿಷೇಕ್ ಅಂಬರೀಶ್ (Abhishek Ambareesh) ಮತ್ತು ಅವಿವಾ ಬಿಡಪ್ಪ ಜ್ಯೂನ್ 5ರಂದು ಹಸೆಮಣೆ ಏರಲಿದ್ದಾರೆ.

ಜ್ಯೂನ್ 7ರಂದು ಸಂಜೆ 7ರಿಂದ ತ್ರಿಪುರವಾಸಿನಿ ಪ್ಯಾಲೆಸ್ ಗ್ರೌಂಡ್‌ನಲ್ಲಿ ಆರತಕ್ಷತೆ (Wedding reception) ನಡೆಯಲಿದೆ.
ಅವಿವಾ ಮತ್ತು ಅಭಿಷೇಕ್ ಕಳೆದ ಡಿಸೆಂಬರ್ನಲ್ಲಿ ಎಂಗೇಜ್ ಆಗಿದ್ದರು. ಗುರು-ಹಿರಿಯರ ಸಮ್ಮುಖದಲ್ಲಿಯೆ ಈ ಜೋಡಿ ನಿಶ್ವಿತಾರ್ಥ ಮಾಡಿಕೊಂಡಿದ್ದರು.

ಜೂನ್ ತಿಂಗಳಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡ್ತಿರೋ ಈ ಜೋಡಿ, ಬಹು ದಿನಗಳ ಸ್ನೇಹಿತರೇ ಆಗಿದ್ದಾರೆ. ಈ ಬಗ್ಗೆ ಎಲ್ಲೂ ಅಭಿ ಹೇಳಿಕೊಂಡಿರಲಿಲ್ಲ. ಅವಿವಾ ಕೂಡ ಏನೂ ಎಲ್ಲೂ ಹೇಳಿರಲಿಲ್ಲ. ಆದರೆ ಇವರ ಸ್ನೇಹ ಎಂಗೇಜ್ಮೆಂಟ್ ಟೈಮ್ ಅಲ್ಲಿಯೇ ರಿವೀಲ್ ಆಯಿತು.