Saturday, November 2, 2024

ಚೆನ್ನೈ-ಗುಜರಾತ್ ಫೈನಲ್ ಪಂದ್ಯ ಕ್ಷಣಗಣನೆ : ಯಾರಿಗೆ ಒಲಿಯಲಿದೆ ಚಾಂಪಿಯನ್ ಪಟ್ಟ?

ಬೆಂಗಳೂರು : ಭಾರೀ ಮಳೆಯಿಂದಾಗಿ ಭಾನುವಾರ (ನಿನ್ನೆ) ರದ್ದಾಗಿದ್ದ ಐಪಿಎಲ್ ಫೈನಲ್ ಪಂದ್ಯ ಇಂದು ನಡೆಯಲಿದೆ. ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ಹಾಗೂ ಮಾಜಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಪ್ರಶಸ್ತಿಗಾಗಿ ಫೈಟ್ ನಡೆಸಲಿವೆ.

ಐಪಿಎಲ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಫೈನಲ್ ಪಂದ್ಯ ಮೀಸಲು ದಿನದಂದು ನಡೆಯುತ್ತಿದೆ. ಅಹಮದಾಬಾದ್ ​ನ ನರೇಂದ್ರ ಮೋದಿ ಕ್ರೀಡಾಂಗಣ ಈ ವಿಶೇಷ ಪಂದ್ಯಕ್ಕೆ ಸಾಕ್ಷಿಯಾಗಲಿದೆ. ರಾತ್ರಿ 7ಕ್ಕೆ ಟಾಸ್ ಪ್ರಕ್ರಿಯೆ ನಡೆಯಲಿದ್ದು, 7.30ಕ್ಕೆ ಪಂದ್ಯ ಆರಂಭವಾಗಲಿದೆ.

ಐಪಿಎಲ್ ಇತಿಹಾಸದಲ್ಲಿ 10ನೇ ಬಾರಿಗೆ ಫೈನಲ್ ಪ್ರವೇಶಿಸಿರುವ ಚೆನ್ನೈ ತಂಡ ಐದನೇ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಲು ಸಜ್ಜಾಗಿದೆ. ಕಳೆದ ಬಾರಿಗೆ ಟ್ರೋಫಿಗೆ ಮತ್ತಿಟ್ಟಿದ್ದ ಗುಜರಾತ್ ತವರು ಅಂಗಳದಲ್ಲಿ ಮತ್ತೆ ಎರಡನೇ ಬಾರಿಗೆ ಚಾಂಪಿಯನ್ ಆಗುವ ತವಕದಲ್ಲಿದೆ.

ಚೆನ್ನೈ ಸ್ಟ್ರೆಂಥ್

  • ನಾಯಕ ಧೋನಿ ಅನುಭವ ಹಾಗೂ ನಾಯಕತ್ವ
  • ಬ್ಯಾಟಿಂಗ್, ಬೌಲಿಂಗ್ ಎರಡೂ ವಿಭಾಗಗಳಲ್ಲಿ ಚೆನ್ನೈ ಬಲಿಷ್ಠ
  • ಆರಂಭಿಕ ಬ್ಯಾಟರ್ ಋತುರಾಜ್ ಗಾಯಕ್ವಾಡ್, ಡೆವೋನ್ ಕಾನ್ವೆ ಬೊಂಬಾಟ್ ಫಾರ್ಮ್​
  • ಅಜಿಂಕ್ಯಾ ರಹಾನೆ, ಶಿವಂ ದುಬೆ ಸ್ಫೋಟಕ ಬ್ಯಾಟಿಂಗ್
  • ನಾಯಕ ಧೋನಿ, ರವೀಂದ್ರ ಜಡೇಜಾ ಅದ್ಭುತ ಮ್ಯಾಚ್ ಫಿನಿಶ್
  • ದೀಪಕ್ ಚಹಾರ್, ಮತೀಶ ಪತಿರಣ ತೂಫಾನ್ ಬೌಲಿಂಗ್

ಇದನ್ನೂ ಓದಿ : ರೆಕಾರ್ಡ್ ಲೈಕ್ಸ್ ಮೀ.. : IPLನಲ್ಲಿ ಹೊಸ ಇತಿಹಾಸ ಸೃಷ್ಟಿಸಲಿದ್ದಾರೆ ತಲಾ ಧೋನಿ!

ಗುಜರಾತ್ ಸ್ಟ್ರೆಂಥ್

  • ಹಾಲಿ ಚಾಂಪಿಯನ್ ಎಂಬ ಆತ್ಮವಿಶ್ವಾಸ, ತವರು ಅಭಿಮಾನಿಗಳ ಸಪೋರ್ಟ್
  • ಈ ಆವೃತ್ತಿಯಲ್ಲಿ ಬೊಂಬಾಟ್ ಪ್ರದರ್ಶನ ಹಾಗೂ ಅಂಕಪಟ್ಟಿಯಲ್ಲಿ ಅಗ್ರಸ್ಥಾನ
  • ಬ್ಯಾಟಿಂಗ್, ಬೌಲಿಂಗ್ ಎರಡೂ ವಿಭಾಗದಲ್ಲಿ ಪಾಂಡ್ಯ ಪಡೆ ಬಲಿಷ್ಠ
  • ಆರಂಭಿಕ ಬ್ಯಾಟರ್ ಸಾಹ, ಶುಭಮನ್ ಗಿಲ್, ಮಿಲ್ಲರ್ ಸ್ಫೋಟಕ ಬ್ಯಾಟಿಂಗ್
  • ಡೆತ್ ಓವರ್ ಗಳಲ್ಲಿ ನಾಯಕ ಪಾಂಡ್ಯ, ರಶೀದ್ ಖಾನ್, ವಿಜಯ್ ಶಂಕರ್ ಅಬ್ಬರ
  • ಮೊಹಮ್ಮದ್ ಶಮಿ, ಮೋಹಿತ್ ಶರ್ಮಾ ಬೌಲಿಂಗ್ ನಲ್ಲಿ ಕಮಾಲ್

ಚೆನ್ನೈ ಸಂಭಾವ್ಯ ತಂಡ

ಎಂ.ಎಸ್ ಧೋನಿ(ನಾಯಕ/ವಿ.ಕೀ), ಋತುರಾಜ್ ಗಾಯಕ್ವಾಡ್, ಡೆವೋನ್ ಕಾನ್ವೆ, ಅಜಿಂಕ್ಯಾ ರಹಾನೆ, ಅಂಬಟಿ ರಾಯುಡು, ಶಿವಂ ದುಬೆ, ಮೊಯೀನ್ ಅಲಿ, ರವೀಂದ್ರ ಜಡೇಜಾ, ದೀಪಕ್ ಚಹರ್, ತುಷಾರ್ ದೇಶಪಾಂಡೆ, ಮತೀಶ ಪತಿರಣ

ಗುಜರಾತ್ ಸಂಭಾವ್ಯ ತಂಡ

ಹಾರ್ದಿಕ್ ಪಾಂಡ್ಯ (ನಾಯಕ), ವೃದ್ಧಿಮಾನ್ ಸಹಾ(ವಿ.ಕೀ), ಶುಭ್​ಮನ್ ಗಿಲ್, ಸಾಯಿ ಸುದರ್ಶನ್, ಡೇವಿಡ್ ಮಿಲ್ಲರ್, ರಾಹುಲ್ ತೇವಾಟಿಯಾ, ರಶೀದ್ ಖಾನ್, ನೂರ್ ಅಹ್ಮದ್, ಮೊಹಮ್ಮದ್ ಶಮಿ, ಮೋಹಿತ್ ಶರ್ಮಾ, ವಿಜಯ್ ಶಂಕರ್

RELATED ARTICLES

Related Articles

TRENDING ARTICLES