Saturday, November 2, 2024

ಐಪಿಎಲ್ ಫೈನಲ್ : ಟಾಸ್ ಗೆದ್ದ ಧೋನಿ ಬೌಲಿಂಗ್ ಆಯ್ಕೆ

ಬೆಂಗಳೂರು : ಗುಜರಾತ್ ಟೈಟಾನ್ಸ್ ವಿರುದ್ಧದ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.

16ನೇ ಆವೃತ್ತಿಯ ಐಪಿಎಲ್ ಫೈನಲ್ ಪಂದ್ಯ ನಿನ್ನೆ ನಡೆಯಬೇಕಿತ್ತು. ಆದರೆ, ಅಹಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಿನ್ನೆ ಸುರಿದ ಭಾರೀ ಮಳೆಯಿಂದ ಪಂದ್ಯವನ್ನು ಮೀಸಲು ದಿನವಾದ ಇಂದಿಗೆ (ಸೋಮವಾರ) ಮುಂದೂಡಲಾಗಿತ್ತು.

ಹಾರ್ದಿಕ್ ಪಾಂಡ್ಯ ಸಾರಥ್ಯದ ಹಾಲಿ ಚಾಂಪಿಯನ್ ಗುಜರಾತ್ ತಂಡ ಫೈನಲ್ ಗೆದ್ದು ಸತತ ಎರಡನೇ ಬಾರಿಗೆ ಟ್ರೋಫಿಗೆ ಮುತ್ತಿಡುವ ಉತ್ಸಾಹದಲ್ಲಿದೆ. ಇತ್ತ, 10ನೇ ಬಾರಿಗೆ ಫೈನಲ್ ಪ್ರವೇಶಿಸಿರುವ ಅನುಭವಿ ನಾಯಕ ಎಂ.ಎಸ್ ಧೋನಿ 5ನೇ ಬಾರಿ ಚೆನ್ನೈಗೆ ಚಾಂಪಿಯನ್ ಕಿರೀಟ ತೊಡಿಸಲು ಸಜ್ಜಾಗಿದ್ದಾರೆ.

ಅಬ್ಬಾ.. ವರುಣನ ಕಾಟ ಇಲ್ಲ

ಐಪಿಎಲ್ ಪ್ರೇಕ್ಷಕರಿಗೆ ಗುಡ್ ನ್ಯೂಸ್. ಗುಜರಾತ್ ಹಾಗೂ ಚೆನ್ನೈ ಫೈನಲ್ ಪಂದ್ಯಕ್ಕೆ ಮಳೆಯ ಭೀತಿ ಇಲ್ಲ. ಬೆಳಗ್ಗೆಯಿಂದ ಅಹಮದಾಬಾದ್ ಕ್ರೀಡಾಂಗಣದಲ್ಲಿ ಮಳೆಯಾಗಿಲ್ಲ. ಹೀಗಾಗಿ, ಫೈನಲ್ ಪಂದ್ಯ ಪೂರ್ಣ 20 ಓವರ್ ನಡೆಯಲಿದೆ. ಒಂದು ವೇಳೆ ಮಳೆ ಬಂದರೂ ಪಂದ್ಯಕ್ಕೆ ಅಡ್ಡಿಯಾಗುವ ಪರಿಸ್ಥಿತಿ ಇರುವುದಿಲ್ಲ ಎಂದು ತಿಳಿದುಬಂದಿದೆ.

ಚೆನ್ನೈ ತಂಡ

ಎಂ.ಎಸ್ ಧೋನಿ(ನಾಯಕ/ವಿ.ಕೀ), ಋತುರಾಜ್ ಗಾಯಕ್ವಾಡ್, ಡೆವೋನ್ ಕಾನ್ವೆ, ಅಜಿಂಕ್ಯಾ ರಹಾನೆ, ಅಂಬಟಿ ರಾಯುಡು, ಮೊಯೀನ್ ಅಲಿ, ರವೀಂದ್ರ ಜಡೇಜಾ, ದೀಪಕ್ ಚಹರ್, ತುಷಾರ್ ದೇಶಪಾಂಡೆ, ಮತೀಶ ಪತಿರಣ, ಮಹೀಷ್ ತೀಕ್ಷಣ

ಗುಜರಾತ್ ತಂಡ

ಹಾರ್ದಿಕ್ ಪಾಂಡ್ಯ (ನಾಯಕ), ವೃದ್ಧಿಮಾನ್ ಸಹಾ(ವಿ.ಕೀ), ಶುಭ್​ಮನ್ ಗಿಲ್, ಸಾಯಿ ಸುದರ್ಶನ್, ಡೇವಿಡ್ ಮಿಲ್ಲರ್, ವಿಜಯ್ ಶಂಕರ್, ರಾಹುಲ್ ತೇವಾಟಿಯಾ, ರಶೀದ್ ಖಾನ್, ನೂರ್ ಅಹ್ಮದ್, ಮೊಹಮ್ಮದ್ ಶಮಿ, ಮೋಹಿತ್ ಶರ್ಮಾ

RELATED ARTICLES

Related Articles

TRENDING ARTICLES