ನಿಂಬೆ ಹಣ್ಣಿನಿಂದ ನಮ್ಮಆರೋಗ್ಯ ಅಷ್ಟೇ ಅಲ್ಲ ಸೌಂದರ್ಯ ವೃದ್ಧಿಗೂ ಕೂಡ ಅಷ್ಟೇ ಪ್ರಯೋಕನಕಾರಿ ಆಗಿದ್ರೆ ನಾವು ನಿಂಬೆಹಣ್ಣಿನ ರಸದಿಂದ ಸೇವನೆಯಿಂದ ಮಾಡುವುದರಿಂದ ಏನೆಲ್ಲಾ ಪ್ರಯೋಜನಗಳು ಸಿಗಬಹುದು ತಿಳಿಯೋಣ ಬನ್ನಿ.
ಹೌದು, ಇತ್ತೀಚಿನ ದಿನಗಳಲ್ಲಿ ನಮ್ಮ ಸುತ್ತಮುತ್ತಲ ಜನರ ಜೀವನ ಶೈಲಿಯಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನು ಗಮನಿಸುತ್ತಾ ಹೋದರೆ, ಬೆಳಗಿನ ಖಾಲಿ ಹೊಟ್ಟೆಯಲ್ಲಿ ನಿಂಬೆ ರಸ ಸೇವಿಸುವ ಅಭ್ಯಾಸ ಕಂಡು ಬರುತ್ತಿದೆ. ಪ್ರತಿಯೊಬ್ಬರಿಗೂ ನಿಂಬೆಯ ಬಗ್ಗೆ ಒಲವು ಹೆಚ್ಚಾಗುತ್ತಿದೆ.
- ನಿಂಬೆ ಹಣ್ಣಿನ ರಸವನ್ನು ನೆತ್ತಿಯ ಮೇಲೆ ಹಾಕಿಕೊಳ್ಳೋದ್ರಿಂದ ತಲೆಹೊಟ್ಟು, ಕೂದಲು ಉದುರುವಿಕೆ ಮತ್ತು ನೆತ್ತಿಗೆ ಸಂಬಂಧಿಸಿದ ಇತರ ಸಮಸ್ಯೆಗಳಿಗೆ ರಾಮಬಾಣವಿದ್ದಂತೆ.
- ಚರ್ಮದ ಮೇಲೆ ಯಾವುದೇ ಕಲೆ ಇದ್ದರು ನಿಂಬೆಹಣ್ಣಿನಿಂದ ತೆಗೆದುಹಾಕಬಹುದು. ಹೇಗೆಂದರೆ ನಿಂಬೆಹಣ್ಣಿನಲ್ಲಿ ತಂಪಾಗಿಸುವ ಏಜೆಂಟ್ ಅನ್ನು ಹೊಂದಿದ್ದು ಅದು ನಮ್ಮ ಚರ್ಮದ ಮೇಲೆ ಸುಡುವ ಸಂವೇದನೆಯನ್ನು ಕಡಿಮೆ ಮಾಡುತ್ತದೆ.
- ನಿಂಬೆ ರಸವನ್ನು ಕುಡಿಯೋದ್ರಿಂದ ಹೃದಯದ ಸಮಸ್ಯೆಗಳು ಏನೇ ಇದ್ದರು ಸಮಸ್ಯೆಯಿಂದ ಹೊರಬರಬಹುದು . ಯಾಕೆಂದರೆ ಅದರರಲ್ಲಿ ಪೊಟ್ಯಾಷಿಯಂ ಅಂಶ ಇರೋದ್ರಿಂದ ಹೃದಯಕ್ಕೆ ಬಲ ಕೊಡುತ್ತದೆ.
- ಜ್ವರ ಇರುವವರು ನಿಂಬೆಹಣ್ಣಿನ ರಸ ಸೇವಿಸೋದ್ರಿಂದ ಜ್ವರ ಕಡಿಮೆಯಾಗುತ್ತದೆ. ಅದು ಹೇಗೆಂದರೆ ರಸ ಸೇವನೆಯಿಂದ ನಿಮ್ಮ ಬೆವರುವಿಕೆಯನ್ನು ಹೆಚ್ಚಿಸೋದ್ರಿಂದ ಜ್ವರದ ಪ್ರಮಾಣ ಕಡಿಮೆಯಾಗುತ್ತದೆ.
- ಬಿಸಿ ನೀರಿಗೆ ನಿಂಬೆರಸ ಹಾಕಿ ಬೆಳಿಗ್ಗೆ ಕುಡಿಯೋದ್ರಿಂದ ಕೊಬ್ಬಿನ ಅಂಶ ಕರಗುತ್ತದೆ.
- ಸುಸ್ತಾದ ಸಂದರ್ಭದಲ್ಲಿ ನಿಂಬೆ ರಸ ಸೇವಿಸೋದ್ರಿಂದ ಸುಸ್ತಿನ ಪ್ರಮಾಣ ಕಡಿಮೆಯಾಗುತ್ತದೆ.
- ನಿಂಬೆರಸದಲ್ಲಿ ಸಿಟ್ರಿಕ್ ಆ್ಯಸಿಡ್ ಇರೋದ್ರಿಂದ ನಿಂಬೆ ಹೊರಳಿನಿಂದ ಸ್ಕ್ರಬ್ ಮಾಡೋದ್ರಿಂದ ಟ್ಯಾನ್ ರಿಮೂವಾಗುತ್ತದೆ.