Thursday, December 19, 2024

ನನ್ನೊಬ್ಬನನ್ನ ಸೋಲಿಸಲು ಹೋಗಿ ಬಿಜೆಪಿಯೇ ಸೋತಿದೆ ; ಮಾಜಿ ಸಿಎಂ ಜಗದೀಶ್ ಶೆಟ್ಟರ್

ಹುಬ್ಬಳ್ಳಿ:ನನ್ನೊಬ್ಬನನ್ನ ಸೋಲಿಸಲು ಹೋಗಿ ಬಿಜೆಪಿ ತಾನೇ ಸೋತಿದೆ. ಪರೋಕ್ಷವಾಗಿ ಬಿಎಲ್ ಸಂತೋಷ್ ವಿರುದ್ದ ಜಗದೀಶ್​ ಶೆಟ್ಟರ್ ಟಾಂಗ್ ಕೊಟ್ಟಿದ್ದಾರೆ.

ಹೌದು, ಹುಬ್ಬಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ನಾನು ಕಾಂಗ್ರೆಸ್ ಸೇರೋ ಸಮಯದಲ್ಲಿ ಹೇಳಿರೋ ಪ್ರಶ್ನೆಗೆ ಇದುವರೆಗೂ ಬಿಜೆಪಿ‌ಯವರು ಯಾರೂ ಉತ್ತರ ಕೊಟ್ಟಿಲ್ಲ. ಬಿಜೆಪಿಯವರು ಎಲ್ಲಿದಾರೆ? ಗೊತ್ತಿಲ್ಲ ಎಂದು ಹೇಳಿದ್ದಾರೆ.

ಕ್ಯಾಬಿನೆಟ್​ನಲ್ಲಿ ನಾನು ಮಿನಿಸ್ಟರ್ ಆಗಬೇಕು ಅನ್ನೋದು ಜನರ ಅಭಿಲಾಷೆ ಇತ್ತು. ಹಲವು ಕಾರಣದಿಂದ ಆಗಿಲ್ಲ. ಇನ್ನು ಹಲವಾರು ಸ್ಥಾನಮಾನಗಳಿವೆ. ಯಾವುದೇ ಸ್ಥಾನ ಕೊಟ್ರು, ನಿಭಾಯಿಸಿಕೊಂಡು ಹೋಗುತ್ತೇನೆ. ವೈಯಕ್ತಿಕವಾಗಿ ನಾನು ಯಾವುದೇ ಆಸೆ ವ್ಯಕ್ತಪಡಿಸಿಲ್ಲ.ಇನ್ನು ನಾನು ಯಾವ ರೀತಿ ಮುಂದೆ ಹೋಗಬೇಕು ಎಂಬ ಬಗ್ಗೆ ಕಾಂಗ್ರೆಸ್ ತೀರ್ಮಾನ ಮಾಡುತ್ತೆ. ಕಾಂಗ್ರೆಸ್ ಗೆ ಜನ ಬೆಂಬಲ ನೀಡಿದ್ದಾರೆ ಎಂದರು.

ಲೋಕಸಭಾ ಚುನಾವಣೆಗೆ ಇನ್ನು ಒಂದು ವರ್ಷ ಇದೆ. ಕಾಂಗ್ರೆಸ್ ಯಾವ ಜವಾಬ್ದಾರಿ ನೀಡುತ್ತೆ ಅದನ್ನ ನಿಭಾಯಿಸುತ್ತೇನೆ. ಉತ್ತರ ಕರ್ನಾಟಕ ಭಾಗದ ನಾಯಕರಿಗೆ ಕೆಲವು ಪ್ರಮುಖ ಸ್ಥಾನ ಸೀಗುವ ಮೂಲಕ ಸಾಕಷ್ಟು ಅವಕಾಶಗಳಿವೆ. ಮುಂದಿನ ಕ್ಯಾಬಿನೆಟ್ ನಲ್ಲಿ ಒಂದು ನಿರ್ಧಾರ ಮಾಡ್ತೇವೆ ಎಂದಿದ್ದಾರೆ.

ಗ್ಯಾರೆಂಟಿ ಅನುಷ್ಠಾನ ಮಾಡಲು ಸ್ವಲ್ಪ ಸಮಯ ಬೇಕಾಗುತ್ತೆ. ಪ್ರತಿಪಕ್ಷ ಅದನ್ನ ರಾಜಕೀಯವಾಗಿ ಬಳಸಿಕೊಳ್ತಾ ಇದ್ದಾರೆ. ಹೊಸ ಸರ್ಕಾರ ಬಂದಿದ್ದು, ರಾಜಕಾರಣದಲ್ಲಿ ತಾಳ್ಮೆ ಬೇಕಾಗುತ್ತೆ ಎಂದಿದ್ದಾರೆ.

 

RELATED ARTICLES

Related Articles

TRENDING ARTICLES