Monday, December 23, 2024

IPL ಫೈನಲ್ ರದ್ದು : ಭಾರೀ ಮಳೆ ಹಿನ್ನಲೆ ನಾಳೆಗೆ ಪಂದ್ಯ ಮುಂದೂಡಿಕೆ

ಬೆಂಗಳೂರು : ನಿರಂತರವಾಗಿ ಸುರಿದ ಭಾರೀ ಮಳೆ ಹಿನ್ನಲೆಯಲ್ಲಿ ಐಪಿಎಲ್ ಫೈನಲ್ ಪಂದ್ಯ ನಾಳೆ(ಸೋಮವಾರ)ಗೆ ಮುಂದೂಡಲಾಗಿದೆ.

ಹೌದು, ಅಹಮದಾಬಾದ್ ನ ನರೇಂದ್ರ ಮೋದಿ ಅಂತರಾಷ್ಟ್ರೀಯ ಕ್ರಿಡಾಂಗಣದಲ್ಲಿ ಇಂದು ನಡೆಯಬೇಕಿದ್ದ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಗುಜರಾತ್ ಟೈಟನ್ಸ್ ನಡುವಿನ ಫೈನಲ್ ಪಂದ್ಯ ಮಳೆಯಿಂದ ರದ್ದಾಗಿದೆ.

ನಾಳೆ ರಿವರ್ಸ್ ಡೇ ಘೋಷಣೆ ಮಾಡಲಾಗಿದ್ದು, 20 ಓವರ್ ಗಳ ಸಂಪೂರ್ಣ ಪಂದ್ಯ ನಡೆಯಲಿದೆ. ನಿಗದಿಯಂತೆ ಸೋಮವಾರ ರಾತ್ರಿ 7 ಗಂಟೆಗೆ ಟಾಸ್ ಪ್ರಕ್ರಿಯೆ ನಡೆಯಲಿದ್ದು, 7.30ಕ್ಕೆ ಪಂದ್ಯ ಶುರುವಾಗಲಿದೆ.

ಇದನ್ನೂ ಓದಿ : ರೆಕಾರ್ಡ್ ಲೈಕ್ಸ್ ಮೀ.. : IPLನಲ್ಲಿ ಹೊಸ ಇತಿಹಾಸ ಸೃಷ್ಟಿಸಲಿದ್ದಾರೆ ತಲಾ ಧೋನಿ!

ವರುಣನ ಕಣ್ಣಾಮುಚ್ಚಾಲೆ

ಚೆನ್ನೈ ಮತ್ತು ಗುಜರಾತ್ ನಡುವಿನ ಫೈನಲ್ ಪಂದ್ಯಕ್ಕೆ ವರುಣನ ಕಾಟ ಮುಂದುವರಿದಿದೆ. ಟಾಸ್ ಆರಂಭವಾಗುವ ಮೊದಲು ಆರಂಭವಾಗಿದ್ದ ಮಳೆ ನಿರಂತರವಾಗಿ ಸುರಿಯಿತು. ಆಗಾಗ್ಗೆ ಮಳೆ ಕಡಿಮೆಯಾಗುತ್ತಿತ್ತು. ಬಳಿಕ, ಒಮ್ಮೆಲೆ ಜೋರು ಮಳೆ, ಸ್ವಲ್ಪ ಹೊತ್ತು ತುಂತುರು ಮಳೆಯಾಗುತ್ತಿತ್ತು. ಹೀಗಾಗಿ, ಮೈದಾನದ ತುಂಬ ಮಳೆ ನೀರು ನಿಂತಿದೆ. ಬಿಸಿಸಿಐ ನಿಯಮದ ಪ್ರಕಾರ ಅಂಪೈರ್ ಗಳು ರಿಸರ್ವ್ ಡೇ ಘೊಷಿಸಿದ್ದಾರೆ.

RELATED ARTICLES

Related Articles

TRENDING ARTICLES