Monday, January 20, 2025

ಯಾವ ಜಿಲ್ಲೆಗೆ ಎಷ್ಟು ಸಚಿವ ಸ್ಥಾನ? ಯಾವ ಜಿಲ್ಲೆಗೆ ಸಿಕ್ಕಿಲ್ಲ ಮಂತ್ರಿಗಿರಿ : ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೈಲ್ಸ್

ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟದ ಸಚಿವರು ಇಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಆ ಮೂಲಕ ಕಾಂಗ್ರೆಸ್ ಸರ್ಕಾರ ಎಲ್ಲ 34 ಸಚಿವ ಸ್ಥಾನಗಳು ಫುಲ್​ ಫಿಲ್ ಆಗಿದೆ.

ಸಿದ್ದರಾಮಯ್ಯ ಸರ್ಕಾರದಲ್ಲಿ 23 ಜಿಲ್ಲೆಗಳಳ ಶಾಸಕರಿಗೆ ಈ ಬಾರಿ ಸಚಿವ ಸ್ಥಾನ ಒಲಿದಿದೆ. 8 ಜಿಲ್ಲೆಗಳಿಗೆ ‘ಶಿವ’ರಾಮಯ್ಯ ಸರ್ಕಾರದಲ್ಲಿ ಮಂತ್ರಿಗಿರಿ ಮಿಸ್ ಆಗಿದೆ. ಕೋಲಾರ, ಹಾಸನ, ಉಡುಪಿ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಕೊಡಗು, ಚಾಮರಾಜನಗರ, ವಿಜಯನಗರ ಜಿಲ್ಲೆಗಳಿಗೆ ಸಚಿವ ಸ್ಥಾನ ಸಿಕ್ಕಿಲ್ಲ.

ಯಾವ ಜಿಲ್ಲೆಗೆ ಎಷ್ಟು ಸಚಿವ ಸ್ಥಾನ? ಯಾವ ಜಾತಿಗೆ ಎಷ್ಟು ಸಚಿವ ಸ್ಥಾನ? ಲಭಿಸಿದೆ ಎಂಬ ಬಗ್ಗೆ ಇಲ್ಲಿದೆ ನೋಡಿ ಮಾಹಿತಿ.

ರಾಜಧಾನಿಗೆ 6 ಮಂತ್ರಿ ಭಾಗ್ಯ

ಸಿದ್ದು ಸಂಪುಟದಲ್ಲಿ ಬೆಂಗಳೂರಿಗೆ ಸಿಂಹಪಾಲು. ಬೆಂಗಳೂರಿಗೆ 6 ಸಚಿವ ಸ್ಥಾನ, ಮೈಸೂರು 3, ವಿಜಯಪುರ 2, ತುಮಕೂರು 2, ಕಲಬುರಗಿ 2, ಬೆಳಗಾವಿ 2, ಬೀದರ್ 2, ರಾಮನಗರ 1, ಬೆಂಗಳೂರು ಗ್ರಾಮಾಂತರ 1, ದಾವಣಗೆರೆ 1, ಚಿತ್ರದುರ್ಗ 1, ಚಿಕ್ಕಬಳ್ಳಾಪುರ 1, ಯಾದಗಿರಿ 1, ಶಿವಮೊಗ್ಗ 1, ರಾಯಚೂರು 1, ಬಳ್ಳಾರಿ 1, ಬಾಗಲಕೋಟೆ 1, ಉತ್ತರ ಕನ್ನಡ 1, ಗದಗ 1, ಮಂಡ್ಯ 1, ಧಾರವಾಡ 1, ಕೊಪ್ಪಳ 1, ಹಾವೇರಿ ಜಿಲ್ಲೆಗೆ 1 ಸಚಿವ ಸ್ಥಾನ ಒಲಿದಿದೆ.

ಇದನ್ನೂ ಓದಿ : ನೂತನ ಸಚಿವರಿಗೆ ಖಾತೆ ಹಂಚಿಕೆ : ಯಾರಿಗೆ ಯಾವ ಜವಾಬ್ದಾರಿ?

ಯಾವ ಜಾತಿಗೆ ಎಷ್ಟು ಸಚಿವ ಸ್ಥಾನ

ಲಿಂಗಾಯತ 6, ಒಕ್ಕಲಿಗ 4, ಪರಿಶಿಷ್ಟ ಪಂಗಡ 2, ಪರಿಶಿಷ್ಟ ಜಾತಿ 1, ಕುರುಬ 1, ಈಡಿಗ 1, ಜೈನ್ 1, ಮರಾಠ 1, ಮುಸ್ಲಿಂ 1, ಬ್ರಾಹ್ಮಣ 1, ಮೊಗೇರ 1, ಬೋವಿ 1, ರಾಜು ಸಮುದಾಯ 1, ನಾಮಧಾರಿ ರೆಡ್ಡಿ 1 ಸಮುದಾಯಕ್ಕೆ ಕಾಂಗ್ರೆಸ್ ಹೈಕಮಾಂಡ್ ಮಂತ್ರಿ ಭಾಗ್ಯ ನೀಡಿದೆ.

ಜಾತಿವಾರು ಬಲಾಬಲ

ಲಿಂಗಾಯತ ಸಮುದಾಯ : 9

ಎಸ್ಸಿ, ಎಸ್ಟಿ ಸಮುದಾಯ : 9

ಹಿಂದುಳಿದ ವರ್ಗ (OBC) : 6

ಒಕ್ಕಲಿಗ ಸಮುದಾಯ : 4

ಅಲ್ಪಸಂಖ್ಯಾತ ಸಮುದಾಯ : 4

ಬ್ರಾಹ್ಮಣ ಸಮುದಾಯ : 1

ಜೈನ ಸಮುದಾಯ : 1

RELATED ARTICLES

Related Articles

TRENDING ARTICLES