Saturday, April 20, 2024

2ನೇ ದಿನವೂ ‘ಪವರ್ ಫರ್ನಿಚರ್ ಎಕ್ಸ್ ಪೋ’ಗೆ ಸಖತ್ ರೆಸ್ಪಾನ್ಸ್

ಬೆಂಗಳೂರು : ಒಂದು ಕನಸಿನ ಮನೆ ಕಟ್ಟಬೇಕು. ಮನೆಯ ತುಂಬೆಲ್ಲಾ ಒಳ್ಳೊಳ್ಳೆ ಫರ್ನಿಚರ್ಸ್​ ಇರಬೇಕು. ಮನೆ ಜೊತೆಗೆ ಇಂಟೀರಿಯರ್ ಎಲ್ಲರನ್ನೂ ಅಟ್ರಾಕ್ಟ್ ಮಾಡಬೇಕು ಅಂತ ಎಲ್ಲರೂ ಆಸೆ ಪಡುತ್ತಾರೆ. ಅಂತಹವರಿಗಾಗಿ ಪವರ್‌ ಟಿವಿ ಸಹಭಾಗಿತ್ವದಲ್ಲಿ ಫರ್ನಿಚರ್ ಎಕ್ಸ್​ ಪೋ ನಡೆಯುತ್ತಿದೆ. 2ನೇ ದಿನವೂ ಎಕ್ಸ್​ ಪೋಗೆ ಸಾರ್ವಜನಿಕರಿಂದ ಉತ್ತಮ ರೆಸ್ಪಾನ್ಸ್ ಲಭಿಸಿದೆ.

ಹೌದು, ನಿಮ್ಮೆಲ್ಲರಿಗೂ ತಿಳಿದಂತೆ ಪವರ್ ಟಿವಿ ಬೆಂಗಳೂರು ಫರ್ನಿಚರ್ ಎಕ್ಸ್ ಪೋವನ್ನು ಆಯೋಜನೆ ಮಾಡಿದೆ. ಜೆ.ಪಿ.ನಗರದಲ್ಲಿರುವ ಶುಭ್ ಕನ್ವೆನ್ಷನ್‌ ಸೆಂಟರ್‌ ನಲ್ಲಿ ಈ ಎಕ್ಸ್‌ಪೋ ನಡೆಯುತ್ತಿದೆ. ಇನ್ನೂ 2 ದಿನ ಈ ಎಕ್ಸ್‌ಪೋ ನಡೆಯಲಿದ್ದು, ಗ್ರಾಹಕರಿಂದ ಭರ್ಜರಿ ರೆಸ್ಪಾನ್ಸ್ ವ್ಯಕ್ತವಾಗುತ್ತಿದೆ.

ಒಂದು ಕಡೆ ಎಲ್ಲರನ್ನೂ ಕೈ ಬೀಸಿ ಕರೆಯುತ್ತಿರುವ ಚಿತ್ತಾಕರ್ಷಕವಾಗಿ ಕಾಣೋ ಸೋಫಾಗಳು, ಮತ್ತೊಂದು ಕಡೆ ಗ್ರ್ಯಾಂಡ್ ಲುಕ್ ಕೊಡುವ ಐಷಾರಾಮಿ ಪೀಠೋಪಕರಣಗಳು, ಎಲ್ಲರನ್ನೂ ಅಟ್ರ್ಯಾಕ್ಟ್‌ ಮಾಡೋ ಡೈನಿಂಗ್ ಟೇಬಲ್. ಒಂದೆಡೆ, ನೂರಾರು ತರಹೇವಾರಿ ಪೀಠೋಪಕರಣ. ಮತ್ತೊಂದು ಕಡೆ ಹೋಮ್ ಡೆಕೋರ್, ಕಾರ್ಪೆಟ್, ವಾಲ್ ಪೇಪರ್, ದಿನ ಬಳಕೆ ವಸ್ತುಗಳು.

40 % ರಿಂದ 70 % ಆಫರ್

ಈ ಫರ್ನಿಚರ್ ಎಕ್ಸ್‌ಪೋಗೆ ಬೆಳಗ್ಗೆಯಿಂದಲೇ ನೂರಾರು ಸಂಖ್ಯೆಯಲ್ಲಿ ಗ್ರಾಹಕರು ಭಾಗಿಯಾದರು. ತಮ್ಮ ಮನೆಗೆ ಹೊಂದಾಣಿಕೆಯಾಗುವಂತಹ ಪೀಠೋಪಕರಣಗಳು ಸೇರಿ ಹಲವು ವಸ್ತುಗಳನ್ನು ಬುಕ್ ಮಾಡಿಕೊಂಡರು. ಕೆಲವು ಸ್ಟಾಲ್‌ಗಳಲ್ಲಿ 40 % ಆಫರ್ ಇದ್ರೆ, ಇನ್ನೂ ಕೆಲವು ಕಡೆ 6 ರಿಂದ 70 % ಇತ್ತು. ಹೀಗಾಗಿ, ಜನ ಈ ಸುವರ್ಣವಕಾಶವನ್ನು ಮಿಸ್ ಮಾಡಿಕೊಳ್ಳಬಾರದು ಅಂತ ಮುಗಿಬಿದ್ದು ಬುಕ್ ಮಾಡಿದರು.

ಇದನ್ನೂ ಓದಿ : ಪವರ್ ‘ಫರ್ನಿಚರ್ ಎಕ್ಸ್ ಪೋ’ಗೆ ಚಾಲನೆ : ಸಮ್ಮರ್ ಸೇಲ್ ಪ್ರಯುಕ್ತ 70% ರಷ್ಟು ರಿಯಾಯಿತಿ

15 ಲಕ್ಷದವರೆಗಿನ ವಸ್ತುಗಳು

ಈ ಎಕ್ಸ್‌ಪೋದಲ್ಲಿ 5000 ದಿಂದ 15 ಲಕ್ಷದವರೆಗಿನ ತರಹೇವಾರಿ ವಸ್ತುಗಳು ಸಿಗುತ್ತಿದ್ದವು. ಮತ್ತೊಂದು ಸ್ಪೆಷಾಲಿಟಿ ಎಂದರೆ ಮಲೇಷಿಯಾ, ಸಿಂಗಾಪುರ, ದುಬೈ ಕಡೆಗೆ ಎಕ್ಸ್ಪೋರ್ಟ್ ಆಗುವಂತಹ ವಸ್ತುಗಳನ್ನು ಕೂಡ ಈ ಎಕ್ಸ್‌ಪೋದಲ್ಲಿ ಮಾರಾಟ ಮಾಡಲಾಗುತ್ತಿದೆ. ವೆರೈಟಿ ವುಡ್‌ನ ಆಯ್ಕೆಗಳು ಇಲ್ಲಿದ್ದು, ಜನ ತಮ್ಮಿಷ್ಟದ ವಸ್ತುಗಳನ್ನು ವೀಕೆಂಡ್ ಆದ ಕಾರಣ ಶಾಪಿಂಗ್ ಮಾಡುವ ಮೂಲಕ ಸಂತಸ ವ್ಯಕ್ತಪಡಿಸಿದರು.

ಒಟ್ಟಾರೆ, ಪವರ್ ಟಿವಿ ಫರ್ನಿಚರ್ ಎಕ್ಸ್‌ಪೋಗೆ ಭರ್ಜರಿ ರೆಸ್ಪಾನ್ಸ್ ವ್ಯಕ್ತವಾಗುತ್ತಿದೆ. ಸುಮಾರು ಜನ ಎಕ್ಸ್ ಪೋಗೆ ವಿಸಿಟ್ ಕೊಟ್ಟರು. ಇನ್ನೂ ಎರಡು ದಿನಗಳ ಕಾಲ ಎಕ್ಸ್‌ ಪೋ ನಡೆಯಲಿದೆ. ಸಾರ್ವಜನಿಕರು ಒಮ್ಮೆ ಜೆ.ಪಿ.ನಗರದಲ್ಲಿರುವ ಶುಭ್ ಕನ್ವೆನ್ಷನ್‌ ಸೆಂಟರ್‌ಗೆ ಉಚಿತವಾಗಿ ವಿಸಿಟ್ ಮಾಡಿ ಎಕ್ಸ್‌ಪೋದಲ್ಲಿ ರೌಂಡ್ ಹಾಕಬಹುದು. ತಮ್ಮ ಮನೆಗೆ ಬೇಕಾದ ಆಕರ್ಷಕ ಪೀಠೋಪಕರಣಗಳನ್ನು ಖರೀದಿಸಬಹುದು.

RELATED ARTICLES

Related Articles

TRENDING ARTICLES