ಬೆಂಗಳೂರು: ಕೇಂದ್ರ ಲೋಕಸೇವಾ ಆಯೋಗ ಪೂರ್ವಭಾವೀ ಪರೀಕ್ಷೆ ನಡೆಯುವ ಸಲುವಾಗಿ ಮೆಟ್ರೊ ರೈಲುಗಳ ಸಂಚಾರವು 7 ಗಂಟೆಯಿಂದ ಆರಂಭವಾಗುತ್ತಿದವು ಆದರೆ UPSC ಪರೀಕ್ಷೆಯಿರುವ ಹಿನ್ನೆಲೆಯಲ್ಲಿ ಮೇ 28 ರಂದು ಬೆಳಗ್ಗೆ 7 ರ ಬದಲು ಒಂದು ಗಂಟೆ ಮುಂಚಿತವಾಗಿ ಸಂಚಾರ ಆರಂಭಿಸಲಿವೆ.
ಹೌದು,ಭಾನುವಾರ ಬೆಳಿಗ್ಗೆ 6ರಿಂದಲೇ ಮೆಟ್ರೊ ರೈಲುಗಳ ಸಂಚಾರವಾಗಲಿದೆ.ಭಾನುವಾರದಂದು ನಡೆಯಲಿರುವ UPSC ಪರೀಕ್ಷಾರ್ಥಿಗಳಿಗೆ ತೊಂದರೆಯಾಗಬಾರದೆಂದು BMRCLಯಿದ ಮಹತ್ವದ ಆದೇಶ ಹೊರಡಿಸಲಾಗಿದೆ. ಈ ಮೂಲಕ ಪರೀಕ್ಷಾರ್ಥಿಗಳಿಗೆ ನಮ್ಮ ಮೆಟ್ರೋ ಅನುಕೂಲ ಕಲ್ಪಿಸಿದೆ.
ಇನ್ನೂ ಪ್ರತಿದಿನ ಬೆಳಿಗ್ಗೆ 7 ಘಂಟೆಗೆ ಮೆಟ್ರೋ ಸೇವೆ ಆರಂಭವಾಗುತ್ತಿತ್ತು. ಆದರೆ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸಮಯ ಬದಲಾವಣೆ ಮಾಡಲಾಗಿದೆ. ಬೆಳಿಗ್ಗೆ 6:00 ರಿಂದಲೇ ಮೆಟ್ರೋ ಸೇವೆ ಆರಂಭವಾಗಲಿದೆ. ಟರ್ಮಿನಲ್ ನಿಲ್ದಾಣಗಳಾದ ಬೈಯಪ್ಪನಹಳ್ಳಿ, ನಾಗಸಂದ್ರ, ಕೃಷ್ಣರಾಜ ಪುರ, ವೈಟ್‌ಫೀಲ್ಡ್ ಗಳಲ್ಲಿ ಮೆಟ್ರೋ ಸೇವೆಯನ್ನು ವಿಸ್ತರಣೆ ಮಾಡಲಾಗಿದೆ ಎಂದು ಬೆಂಗಳೂರು ಮೆಟ್ರೋ ರೈಲು ಕಾರ್ಪೋರೇಷನ್ ಲಿಮಿಟೆಡ್ ಮಾಹಿತಿ ನೀಡಿದೆ.