Sunday, December 22, 2024

ಕಾಂಗ್ರೆಸ್ ಗ್ಯಾರಂಟಿ ಆಶ್ವಾಸನೆಗಳು ಬಿಜೆಪಿ ಸೋಲಿಗೆ ಕಾರಣ : ಮಾಜಿ ಸಚಿವ ಶ್ರೀರಾಮುಲು

ಬೆಂಗಳೂರು : ಕಾಂಗ್ರೆಸ್ ಪಕ್ಷ ಘೋಷಿಸಿದ್ದ ಐದು ಉಚಿತ ಗ್ಯಾರಂಟಿ ಆಶ್ವಾಸನೆಗಳು‌ ಬಿಜೆಪಿ ಸೋಲಿಗೆ ಕಾರಣ‌ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಹೇಳಿದ್ದಾರೆ.

ಕೇಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಬಿಜೆಪಿ ಪಕ್ಷ ಅಧಿಕಾರ ಕಳೆದುಕೊಳ್ಳಲು ಕಾಂಗ್ರೆಸ್ ಗ್ಯಾರಂಟಿಗಳೇ ಕಾರಣ ಎಂದು ತಿಳಿಸಿದ್ದಾರೆ.

ಕಾಂಗ್ರೆಸ್ ನವರು ಉಚಿತ ಗ್ಯಾರಂಟಿಗಳನ್ನು ಅಧಿಕಾರಕ್ಕೆ ಬಂದ 24 ಗಂಟೆಯೊಳಗೆ ಈಡೇರಿಸುತ್ತೇವೆ ಅಂತಿದ್ರು. ಈಗ ಅಧಿಕಾರಕ್ಕೆ ಬಂದ ಮೇಲೆ ಕುಂಟು ನೆಪ ಹೇಳಿ ಷರತ್ತು ಹಾಕುತ್ತಿದ್ದಾರೆ. ಕಾಂಗ್ರೆಸ್ ಸುಳ್ಳು ಹೇಳಿಕೊಂಡು ಜನರ ದಿಕ್ಕು ತಪ್ಪಿಸುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಇದನ್ನೂ ಓದಿ : ಮುಂದಿನ ಕ್ಯಾಬಿನೆಟ್ ನಲ್ಲಿ 5 ಗ್ಯಾರಂಟಿ ಈಡೇರಿಸುತ್ತೇವೆ : ಸಿಎಂ ಸಿದ್ದರಾಮಯ್ಯ

ರಾಜ್ಯಾದ್ಯಂತ ಮಹಿಳೆಯರು ರೊಚ್ಚಿಗೆಳ್ತಾರೆ

ಗ್ಯಾರಂಟಿ ಆಶ್ವಾಸನೆಗಳ ಮೂಲಕ ಸುಳ್ಳು ಹೇಳಿಕೊಂಡು ಅಧಿಕಾರಕ್ಕೆ ಬಂದಿದ್ದಾರೆ. ಹೀಗಾಗಿ, ನಾವು ಸೋಲು ಅನುಭವಿಸಬೇಕಾಯಿತು. ಮುಂದಿನ ದಿನಗಳಲ್ಲಿ ಮತ್ತೆ ಪುಟಿದೇಳುತ್ತೇವೆ. ಆಶ್ವಾಸನೆಗಳನ್ನು ಈಡೇರಿಸಲಿಲ್ಲ ಅಂದ್ರೆ ಮಹಿಳೆಯರು ರೊಚ್ಚಿಗೆಳ್ತಾರೆ. ಕೊಡೋಕೆ ಆಗಲ್ಲ ಅಂದ ಮೇಲೆ ಸುಳ್ಳು ಆಶ್ವಾಸನೆ ಯಾಕೆ ಕೊಡಬೇಕು ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಪ್ರಶ್ನೆ ಮಾಡಿದ್ದಾರೆ.

ಹೆಣ್ಮಕ್ಕಳು ಕಾಂಗ್ರೆಸ್ಕೈಹಿಡಿದಿದ್ದಾರೆ

ಕಂಡೀಷನ್ಸ್ ಹಾಕಿದ್ರೆ ಯಾರಿಗೆ ಉಪಯೋಗ ಆಗುತ್ತೆ. ಸುಳ್ಳು ಹೇಳಿಕೊಂಡು ಅಧಿಕಾರಕ್ಕೆ ಬಂದವರು ಕಾಂಗ್ರೆಸ್ ನವರು. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ‌ನವರಿಗೆ ರಾಜ್ಯದ ಜನರು ತಕ್ಕ ಶಿಕ್ಷೆ ಕೊಡ್ತಾರೆ. ಜೀವನದಲ್ಲಿ ಸೋಲು ಇಲ್ಲದ ನಾವು ಇಂದು ಸೋತಿದ್ದೇವೆ‌. ಸುಳ್ಳು ಆಶ್ವಾಸನೆಗಳ ಕಾರಣ ನಮಗೆ ಸೋಲಾಗಿದೆ. ಹೆಣ್ಣು ಮಕ್ಕಳು ಕಾಂಗ್ರೆಸ್ ಕೈ ಹಿಡಿದ ಕಾರಣ ಅಧಿಕಾರಕ್ಕೆ ಬಂದಿದೆ ಎಂದು ಹೇಳಿದ್ದಾರೆ.

RELATED ARTICLES

Related Articles

TRENDING ARTICLES