Monday, December 23, 2024

‘ಗಿಲ್’ಕ್ಕೊ ಶಿವ ‘ಗಿಲ್’ಕ್ಕೊ : ಯಂಗ್ ಗನ್ ‘ಗಿಲ್’ ಘರ್ಜನೆಗೆ ಮುಂಬೈ ‘ಗಲಿಬಿಲಿ’

ಬೆಂಗಳೂರು : ‘ಗಿಲ್’ಕ್ಕೊ ಶಿವ ‘ಗಿಲ್’ಕ್ಕೊ.. ಯಾವನೊ ಇವ್ನು ‘ಗಿಲ್’ಕ್ಕೊ.. ಎಲ್ಲಿಂದ ಬಂದ ‘ಗಿಲ್’ಕ್ಕೊ.. ಈ ಸಾಲುಗಳು ಇದೀಗ ಕ್ರಿಕೆಟ್ ಅಭಿಮಾನಿಗಳ ಬಾಯಲ್ಲಿ ಗುನುಗುತ್ತಿದೆ.

ಯೆಸ್, ಮುಂಬೈ ಇಂಡಿಯನ್ಸ್ ವಿರುದ್ಧ ನಡೆಯುತ್ತಿರುವ ಕ್ವಾಲಿಫೈಯರ್-2 ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಸ್ಫೋಟಕ ಬ್ಯಾಟರ್ ಶುಭಮನ್ ಗಿಲ್ ಸಿಡಿಲಬ್ಬರದ ಶತಕ ದಾಖಲಿಸಿದ್ದಾರೆ. ಗಿಲ್ ಘರ್ಜನೆಗೆ ಕ್ರಿಕೆಟ್ ಪ್ರೇಮಿಗಳು ಪಿಧಾ ಆಗಿದ್ದಾರೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ತಂಡಕ್ಕೆ ಆರಂಭಿಕ ಆಟಗಾರ ಶುಭಮನ್ ಗಿಲ್ ಬೊಂಬಾಟ್ ಆಟದ ಮೂಲಕ ಬೂಸ್ಟ್ ನೀಡಿದರು. 32 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ ಗಿಲ್, 49 ಎಸೆತಗಳಲ್ಲಿ ಶತಕ ಪೂರೈಸಿದರು.

ಮುಂಬೈ ಬೌಲರ್ ಗಳನ್ನು ಮನಬಂದಂತೆ ದಂಡಿಸಿದ ಗಿಲ್ ಅಹ್ಮದಾಬಾದ್ ​ನ ನರೇಂದ್ರ ಮೋದಿ ಕ್ರೀಡಾಂಗಣದ ಮೂಲೆ ಮೂಲೆಗೂ ಚೆಂಡಿನ ದರ್ಶನ ಮಾಡಿದರು. ಬರೋಬ್ಬರಿ 8 ಸಿಕ್ಸರ್ ಹಾಗೂ 4 ಬೌಂಡರಿ ನೆರವಿನೊಂದಿಗೆ ಶತಕ ಸಿಡಿಸಿದರು. ಪ್ರಸಕ್ತ ಟೂರ್ನಿಯಲ್ಲಿ ಇದು ಶುಭಮನ್ ಗಿಲ್ ಅವರ ಮೂರನೇ ಶತಕವಾಗಿದೆ. ಇದಕ್ಕೂ ಮುನ್ನ ಸನ್ ರೈಸರ್ಸ್ ಹೈದರಾಬಾರ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಶತಕ ಸಿಡಿಸಿದ್ದರು.

ಇದನ್ನೂ ಓದಿ : ಮಧ್ವಾಲ್ ಮ್ಯಾಜಿಕ್ ಗೆ ‘ಕನ್ನಡಿಗ ಕುಂಬ್ಳೆ’ ದಾಖಲೆ ಉಡೀಸ್..!

60 ಎಸೆತದಲ್ಲಿ 129 ರನ್ ಚಚ್ಚಿದ ಗಿಲ್

ಅರ್ಧಶತಕ ಹಾಗೂ ಶತಕದ ಬಳಿಕವೂ ಯಂಗ್ ಗನ್ ಬ್ಯಾಟ್ ಅಬ್ಬರಿಸಿತು. ಮುಂಬೈನ ಬೌಲಿಂಗ್ ಅಸ್ತ್ರಗಳನ್ನೆಲ್ಲೇ ಧೂಳಿಪಟ ಮಾಡಿದ ಶುಭಮನ್ ಗಿಲ್ 7 ಬೌಂಡರಿ ಹಾಗೂ 10 ಬೊಂಬಾಟ್ ಸಿಕ್ಸರ್ ನೆರವಿನೊಂದಿಗೆ ಗಿಲ್ 129 ರನ್ ಗಳಿಸಿದರು. ಆಕಾಶ್ ಮಧ್ವಲ್ ಎಸೆದ 17ನೇ ಓವರ್‌ ನ ನಾಲ್ಕನೇ ಎಸೆತದಲ್ಲಿ ಶುಭಮನ್ ಗಿಲ್  ಟಿಮ್ ಡೇವಿಡ್ ಕ್ಯಾಚ್ ನೀಡಿ ಔಟಾದರು.

ಐಪಿಎಲ್ ಪ್ಲೇಆಫ್ ನಲ್ಲಿ ವೇಗದ ಶತಕ

ಶುಭಮನ್ ಗಿಲ್ : 49 ಎಸೆತ

ರಜತ್ ಪಾಟಿದಾರ್ : 49 ಎಸೆತ

ವೃದ್ಧಿಮಾನ್ ಸಹಾ : 49 ಎಸೆತ

ವೀರೇಂದ್ರ ಸೆಹ್ವಾಗ್ : 50 ಎಸೆತ

ಮುರಳಿ ವಿಜಯ್ : 51 ಎಸೆತ

ಶೇನ್ ವ್ಯಾಟ್ಸನ್ : 51 ಎಸೆತ

RELATED ARTICLES

Related Articles

TRENDING ARTICLES