Monday, December 23, 2024

ಶಿವಣ್ಣ ಫೇವರಿಟ್ ಸ್ಪಾಟ್ ನಲ್ಲಿ ‘ಭೈರತಿ ರಣಗಲ್’ ಮುಹೂರ್ತ

ಬೆಂಗಳೂರು : ದಿ ವೆಯ್ಟ್ ಈಸ್ ಓವರ್. ಮಫ್ತಿ ಪ್ರೀಕ್ವೆಲ್ ಭೈರತಿ ರಣಗಲ್ ಸೆಟ್ಟೇರಿದೆ. ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಧೂಳೆಬ್ಬಿಸಲಿರೋ ಶಿವರಾಜ್​ಕುಮಾರ್, ಈ ಮೂಲಕ ಮಹತ್ವದ ಹೆಜ್ಜೆ ಇಟ್ಟಿದ್ದಾರೆ.

ಹೌದು, ಮಫ್ತಿ ಸಿನಿಮಾ ನೋಡಿದ ಪ್ರತಿಯೊಬ್ಬರನ್ನೂ ಭೈರತಿ ರಣಗಲ್ ಪಾತ್ರ ಕಾಡಿತ್ತು. ಈ ಸಿನಿಮಾ ಬಂದು ಐದು ವರ್ಷಗಳು ಕಳೆದರೂ ಸಹ ಇಂದಿಗೂ ಶಿವರಾಜ್​ಕುಮಾರ್ ಮಾಡಿದ್ದ ಪಾತ್ರ ಜೀವಂತ. ಕಾರಣ ಅದರಲ್ಲಿ ಸತ್ವ ಇತ್ತು. ಪವರ್ ಜೊತೆ ಖದರ್ ಇತ್ತು. ಒಮ್ಮೆ ಸಿನಿಮಾ ನೋಡಿದವರಿಗೆ ಪದೇ ಪದೆ ನೋಡಬೇಕು ಅನಿಸುತ್ತಿತ್ತು. ಅಷ್ಟರ ಮಟ್ಟಿಗೆ ನಿರ್ದೇಶಕ ನರ್ತನ್ ಅದರ ತೂಕ ಹೆಚ್ಚಿಸೋ ಕಾರ್ಯ ಮಾಡಿದ್ದರು.

ಅಲ್ಲಿ ಅಂಡರ್​ಕವರ್ ಪೊಲೀಸ್ ಆಫೀಸರ್ ಗಣ ಪಾತ್ರದಾರಿ ಶ್ರೀಮುರಳಿ ಅಬ್ಬರಿಸಿದ್ದರು. ಆದ್ರೀಗ ಮಫ್ತಿ ಪ್ರೀಕ್ವೆಲ್ ಬರ್ತಿದ್ದು, ಇಲ್ಲಿ ಭೈರತಿ ರಣಗಲ್ ಅನ್ನೋ ಗ್ಯಾಂಗ್​ಸ್ಟರ್ ಹೇಗೆ ಹುಟ್ಟಿಕೊಂಡ ಅನ್ನೋ ಕಥಾನಕ ಬೆಳ್ಳಿಪರದೆ ಬೆಳಗಲಿದೆ. ಜೂನ್ ಎರಡನೇ ವಾರದಿಂದ ಶೂಟಿಂಗ್ ಕಿಕ್​ಸ್ಟಾರ್ಟ್​ ಆಗಲಿದ್ದು, ಇಂದು ಸಿನಿಮಾ ಅಧಿಕೃತವಾಗಿ ಸೆಟ್ಟೇರಿದೆ.

ಬಂಡಿ ಮಹಾಕಾಳಿ ಸನ್ನಿಧಿಯಲ್ಲಿ ಮುಹೂರ್ತ

ಶಿವಣ್ಣನ ಲಕ್ಕಿ ಸ್ಪಾರ್ಟ್​, ಟಗರು ಸಿನಿಮಾ ಮುಹೂರ್ತ ಕಂಡಿದ್ದ ಬಂಡಿ ಮಹಾಕಾಳಿ ಆಲಯದಲ್ಲೇ ಭೈರತಿ ರಣಗಲ್ ಚಿತ್ರ ಸೆಟ್ಟೇರಿದ್ದು ಇಂಟರೆಸ್ಟಿಂಗ್. ಅಂದಹಾಗೆ ಈ ಸಿನಿಮಾನ ಮಫ್ತಿ ಡೈರೆಕ್ಟರ್ ನರ್ತನ್ ಅವರೇ ನಿರ್ದೇಶಿಸುತ್ತಿದ್ದು, ಗೀತಾ ಪಿಕ್ಚರ್ಸ್​ ಬ್ಯಾನರ್​ನಡಿ ಗೀತಾ ಶಿವರಾಜ್​ಕುಮಾರ್ ನಿರ್ಮಾಣ ಮಾಡ್ತಿದ್ದಾರೆ. ಪೂಜಾ ಕಾರ್ಯಕ್ರಮಕ್ಕೆ ಶಿವಣ್ಣ ಅವರು ಭೈರತಿ ರಣಗಲ್ ಗೆಟಪ್​ನಲ್ಲೇ ಪಂಚೆಯಲ್ಲಿ ಮಗಳು ಹಾಗೂ ಪುತ್ರಿ ಜೊತೆ ಎಂಟ್ರಿ ಕೊಟ್ಟಿದ್ದು ವಿಶೇಷ.

ಪ್ಯಾನ್ ಇಂಡಿಯಾ ಚಿತ್ರವಾಗಿ ಭೈರತಿ ರಣಗಲ್

ಕನ್ನಡದ ಜೊತೆ ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂನಲ್ಲೂ ಈ ಸಿನಿಮಾ ತಯಾರಾಗಲಿದ್ದು, ಪ್ಯಾನ್ ಇಂಡಿಯಾ ಚಿತ್ರವಾಗಿ, ಶಿವಣ್ಣನಿಗೆ ನ್ಯಾಷನಲ್ ಸ್ಟಾರ್ ಪಟ್ಟ ತಂದುಕೊಡಲಿದೆ. ಓಂ ಚಿತ್ರದ ಸತ್ಯ, ಜೋಗಿಯ ಮಾದೇಶ, ಟಗರು ಸಿನಿಮಾದ ಶಿವ ಪಾತ್ರಗಳ ಬಳಿಕ ಶಿವರಾಜ್​ಕುಮಾರ್​ಗೆ ಬಹಳ ಖುಷಿ ಕೊಟ್ಟ ರೋಲ್ ಮಫ್ತಿಯ ಭೈರತಿ ರಣಗಲ್. ಅದೇ ಕಾರಣದಿಂದ ಮಫ್ತಿ ಪ್ರೀಕ್ವೆಲ್ ಬಳಿಕ ಭೈರತಿ ರಣಗಲ್-2 ಕೂಡ ಮಾಡೋ ಯೋಜನೆಯಲ್ಲಿದೆ ಟೀಂ.

ನನ್ನ ಇನ್ನೂ 31 ವರ್ಷ ಅಂದ್ಕೊಂಡಿದ್ದಾರೆ

ಟೆಕ್ನಿಷಿಯನ್ಸ್ ಎಲ್ಲಾ ನನ್ನ ಇನ್ನೂ 31 ಅಂದ್ಕೊಂಡಿದ್ದಾರೆ. ಆದ್ರೆ ನಂಗೆ 61 ವರ್ಷ ಅನ್ನೋದು ಮರೆತಿದ್ದಾರೆ. ಯುದ್ಧ ಭೂಮಿಗೆ ಇಳಿಸಿ, ಯುದ್ಧ ಮಾಡಿಸೋ ಮಾಸ್ ಪಾತ್ರಗಳನ್ನೇ ಕೊಡ್ತಾರೆ. ಆದರೂ, ಪರವಾಗಿಲ್ಲ. ಎಷ್ಟು ಸಾಧ್ಯವೋ ಅಷ್ಟೂ ಎಫರ್ಟ್​ ಹಾಕಿ ರಂಜಿಸೋಕೆ ಪ್ರಯತ್ನಿಸುವೆ ಅಂತ ತಮ್ಮ ಪಾತ್ರ ಹಾಗೂ ಸಿನಿಮಾದ ಬಗ್ಗೆ ಶಿವರಾಜ್​ಕುಮಾರ್ ಮುಕ್ತವಾಗಿ ಮಾತನಾಡಿದರು.

ಇನ್ನು, ಪತಿಯ ಸಿನಿಮಾಗೆ ಬಜೆಟ್​ನ ಲಿಮಿಟ್ ಇಲ್ಲದೆ ಸುರಿಸೋಕೆ ಗೀತಾ ಶಿವರಾಜ್​ಕುಮಾರ್ ಕೂಡ ಸಿದ್ಧವಾಗಿದ್ದಾರೆ. ವೇದ ರೀತಿ ಕ್ವಾಲಿಟಿ ಪ್ರಾಡಕ್ಟ್ ಕೊಡೋ ಧಾವಂತದಲ್ಲಿರೋ ಟೀಂ, ಹೊಸ ದಾಖಲೆ ಬರೆಯೋ ಮುನ್ಸೂಚನೆ ನೀಡಿದೆ.

  • ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES