ಬೆಂಗಳೂರು: ದೇಶದಲ್ಲಿ ನೂತನ ಸಂಸತ್ ಕಟ್ಟಡ ನಿರ್ಮಾಣ ಪೂರ್ಣಗೊಂಡಿದ್ದು, ಭವನದ ಉದ್ಘಾಟನೆಗೆ ವೇದಿಕೆ ಸಜ್ಜಾಗಿದೆ.
ಹೌದು, ಮೇ 28ರ ಭಾನುವಾರ ಪ್ರಧಾನಿ ನರೇಂದ್ರ ಮೋದಿ ಮತ್ತು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರು ನೂತನ ಕಟ್ಟಡವನ್ನು ಉದ್ಘಾಟಿಸಲಿದ್ದಾರೆ.
ನೂತನ ಸಂಸತ್ ಭವನ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಕನಸಿನ ಯೋಜನೆಯಾಗಿದೆ. ₹970 ಕೋಟಿ ವೆಚ್ಚದಲ್ಲಿ ಟಾಟಾ ಪ್ರಾಜೆಕ್ಟ್ ಲಿಮಿಟೆಡ್ ನೂತನ ಸಂಸತ್ ಭವನ ನಿರ್ಮಾಣ ಮಾಡಿದೆ. ಲೋಕಸಭಾ ಸಭಾಂಗಣ ನವಿಲಿನ ಥೀಮ್ ಆಧಾರಿತವಾಗಿ ರಚಿಸಲ್ಪಟ್ಟಿದ್ದರೆ, ರಾಜ್ಯಸಭಾ ಸಭಾಂಗಣ ಕಮಲದ ಹೂವಿನ ಥೀಮ್ ಕೂಡ ಹೊಂದಿದೆ.
ಇನ್ನೂ ರಾಷ್ಟ್ರಪಕ್ಷಿ ಮತ್ತು ರಾಷ್ಟ್ರೀಯ ಹೂವನ್ನು ಆಧರಿಸಿ, ಈ ವಿನ್ಯಾಸ ರೂಪಿಸಲಾಗಿದೆ. ಹೊಸ ಕಟ್ಟದ ತ್ರಿಕೋನಾಕಾರದಲ್ಲಿದ್ದು, ಈಗಿರುವ ಲೋಕಸಭಾ ಸಭಾಂಗಣಕ್ಕಿಂತ ಮೂರು ಪಟ್ಟು ದೊಡ್ಡದಾಗಿದೆ.