Wednesday, January 22, 2025

G20 ಸಮ್ಮಿಟ್ ನಲ್ಲಿ ಚೆರ್ರಿ, ಭಾರತ ಟಾಕ್ ಆಫ್ ದಿ ವರ್ಲ್ಡ್ : ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೈಲ್ಸ್

ಬೆಂಗಳೂರು : ತ್ರಿಬಲ್ ಆರ್ ಸಿನಿಮಾದಿಂದ ಗ್ಲೋಬಲ್ ಸ್ಟಾರ್ ಆಗಿ ರಾರಾಜಿಸ್ತಿರೋ ರಾಮ್ ಚರಣ್ ತೇಜಾ, ಒಂದಿಲ್ಲ ಒಂದು ಕಾರಣದಿಂದ ನ್ಯಾಷನಲ್, ಇಂಟರ್​ನ್ಯಾಷನಲ್ ನ್ಯೂಸ್ ಆಗ್ತಿದ್ದಾರೆ. ರೀಸೆಂಟ್ ಆಗಿ ಶ್ರೀನಗರದಲ್ಲಿ ನಡೆದ G20 ಶೃಂಗಸಭೆಯಲ್ಲಿ ಭಾಗಿಯಾಗೋ ಮೂಲಕ ಭಾರತದ ಸಿನಿಮಾ ಮತ್ತು ಸಂಸ್ಕೃತಿ ಬಗ್ಗೆ ಮಾತನಾಡಿದ್ದಾರೆ.

ಹೌದು, ತ್ರಿಬಲ್ ಆರ್ ಸಿನಿಮಾ ನಮ್ಮ ಭಾರತೀಯ ಚಿತ್ರರಂಗದ ದೃಷ್ಠಿಕೋನವನ್ನೇ ಬದಲಿಸಿಬಿಟ್ಟಿದೆ. ಅದರಲ್ಲೂ ತೆಲುಗು ಚಿತ್ರರಂಗ ಬಾಲಿವುಡ್​ ಹಾಗೂ ಹಾಲಿವುಡ್​ಗಿಂತ ಯಾವುದರಲ್ಲೂ ಕಮ್ಮಿ ಇಲ್ಲ ಅನ್ನೋದನ್ನ ಪ್ರೂವ್ ಮಾಡಿತು. ರಾಜಮೌಳಿಯ ತ್ರಿಬಲ್ ಆರ್ ಸಿನಿಮಾ ವಿಶ್ವ ಸಿನಿದುನಿಯಾದಲ್ಲಿ ಹೊಸ ಅಲೆ ಎಬ್ಬಿಸಿತು. ಅದರಲ್ಲೂ ಜೂನಿಯರ್ ಎನ್​ಟಿಆರ್ ಹಾಗೂ ರಾಮ್ ಚರಣ್​ ತೇಜಾಗೆ ಎಲ್ಲಿಲ್ಲದ ಮೈಲೇಜ್ ನೀಡಿತು.

ಗ್ಲೋಬಲ್ ಸ್ಟಾರ್​ ಆಗಿ ರಾರಾಜಿಸ್ತಿರೋ ರಾಮ್ ಚರಣ್, ಆಸ್ಕರ್ ಅಂಗಳದಲ್ಲೂ ಸಖತ್ ಹೈಲೈಟ್ ಆದರು. ಸಾಲು ಸಾಲು ಹಾಲಿವುಡ್ ಪ್ರಶಸ್ತಿಗಳನ್ನ ಪಡೆದು, ವಿಶ್ವದ ಮೂಲೆ ಮೂಲೆಯಲ್ಲಿ ಫ್ಯಾನ್ಸ್​ನ ಹೆಚ್ಚಿಸಿಕೊಂಡಿದ್ದಾರೆ. ಜೊತೆಗೆ ನಮ್ಮ ಸಂಸ್ಕೃತಿ, ನಾಡು, ನುಡಿಯ ಗೌರವ ಕೂಡ ಎತ್ತಿ ಹಿಡಿದಿದ್ದಾರೆ. ನ್ಯಾಷನಲ್ ಲೆವೆಲ್​ ಸೆಮಿನಾರ್​ಗಳಲ್ಲಿ ಮಿಂಚಿದ್ದ ಚರಣ್, ಇದೀಗ ಜಿ20 ಶೃಂಗಸಭೆಯ ಕೇಂದ್ರಬಿಂದು ಆಗಿದ್ದಾರೆ.

ವೈಟ್ ಅಂಡ್ ವೈಟ್​ನಲ್ಲಿ ಚೆರ್ರಿ ಮಿಂಚು

ಸುಮಾರು 60ಕ್ಕೂ ಅಧಿಕ ದೇಶಗಳ ಗಣ್ಯಾತಿ ಗಣ್ಯರ ಜೊತೆ ವೇದಿಕೆ ಹಂಚಿಕೊಂಡಿರೋ ಚಿರಂಜೀವಿ ತನಯ ಚರಣ್, ಸಿನಿಮಾ ಪ್ರವಾಸೋದ್ಯಮ ಕುರಿತ ಮಹತ್ವದ ಸಭೆಯಲ್ಲಿ ವೈಟ್ ಅಂಡ್ ವೈಟ್​ನಲ್ಲಿ ಮಿಂಚಿದ್ದಾರೆ. ಶ್ರೀನಗರದಲ್ಲಿ ನಡೆಯುತ್ತಿರೋ ಮೂರು ದಿನಗಳ ಕಾರ್ಯಕ್ರಮದಲ್ಲಿ ಮೊದಲ ದಿನವೇ ಚರಣ್ ವರ್ಲ್ಡ್​ ಸೆನ್ಸೇಷನ್ ಆಗಿದ್ದಾರೆ.

ನಾಟು ನಾಟು ಸಾಂಗ್​ಗೆ ಸ್ಟೆಪ್

ವೇದಿಕೆ ಮೇಲೆ ನೆರೆದಿದ್ದ ಫಾರಿನ್ ಡೆಲಿಗೇಟ್ಸ್ ಜೊತೆ ಆಸ್ಕರ್ ವಿಜೇತ ನಾಟು ನಾಟು ಸಾಂಗ್​ಗೆ ಸ್ಟೆಪ್ ಹಾಕಿದ್ದಾರೆ. ಅದೂ ಅಲ್ಲಿನ ಅತಿಥಿಗಳೊಟ್ಟಿಗೆ ಅನ್ನೋದು ಮತ್ತಷ್ಟು ಇಂಟರೆಸ್ಟಿಂಗ್. ಇನ್ನು ಸಾಕಷ್ಟು ವಿಷಯಗಳ ಬಗ್ಗೆ ಚರ್ಚೆ ನಡೆಸಿರೋ ರಾಮ್ ಚರಣ್, ನಮ್ಮ ಭಾರತೀಯ ಸಿನಿಮಾಗಳಿಗೆ ಲೊಕೇಷನ್ಸ್ ಹುಡುಕಿಕೊಂಡು ವಿದೇಶಗಳಿಗೆ ಹೋಗುವಂತಾಗಬಾರದು. ಇಲ್ಲೇ ಅಂತಹ ರಮಣೀಯ ತಾಣಗಳನ್ನ ಸೃಷ್ಟಿಸಬೇಕು ಎಂದಿದ್ದಾರೆ.

ಹಳೆಯ ನೆನಪು ಮೆಲುಕು ಹಾಕಿ ಚರಣ್

ಅಷ್ಟೇ ಅಲ್ಲ, ನಾನು ಇನ್ಮೇಲೆ ಹಾಲಿವುಡ್ ಡೈರೆಕ್ಟರ್​ ಅಥ್ವಾ ಪ್ರೊಡ್ಯೂಸರ್ ಜೊತೆ ಕೆಲಸ ಮಾಡೋವರೆಗೂ ಇಲ್ಲಿನ ಲೊಕೇಷನ್ಸ್​​ನಲ್ಲೇ ಚಿತ್ರಿಸಲು ಇಚ್ಚಿಸುತ್ತೇನೆ ಎಂದಿದ್ದಾರೆ. ಆರ್ಥಿಕ ಬೆಳವಣಿಗೆ ಹಾಗೂ ಸಾಂಸ್ಕೃತಿಕ ಉಳಿವಿಕೆಯಲ್ಲಿ ಸಿನಿಮಾ ಪ್ರವಾಸೋದ್ಯಮದ ಮಹತ್ವ ಅನ್ನೋ ವಿಷಯದ ಕುರಿತ ಸಭೆ ಅದಾಗಿದ್ದು, 1986ರಿಂದ ಚರಣ್ ಕಾಶ್ಮೀರ್​ಗೆ ಹೋಗಿ ಬರ್ತಿದ್ದಾರಂತೆ. 2016ರಲ್ಲಿ ತಮ್ಮದೇ ಚಿತ್ರವೊಂದರ ಶೂಟಿಂಗ್ ನಿಮಿತ್ತ ಕಾಶ್ಮೀರ್ ತೆರಳಿದ್ದರಂತೆ. ಹೀಗೆ ತಮ್ಮ ಹಳೆಯ ನೆನಪುಗಳನ್ನು ಮೆಲುಕು ಹಾಕಿ ಚರಣ್ ಎಲ್ಲರ ಗಮನ ಸೆಳೆದಿದ್ದಾರೆ.

ಸದ್ಯ ಸೆನ್ಸೇಷನಲ್ ಡೈರೆಕ್ಟರ್ ಶಂಕರ್ ಸಾರಥ್ಯದಲ್ಲಿ ತಯಾರಾಗ್ತಿರೋ ಗೇಮ್ ಚೇಂಜರ್ ಚಿತ್ರದಲ್ಲಿ ಬಣ್ಣ ಹಚ್ಚಿರೋ ಅವ್ರು, ಇಂಡಿಯನ್ ಸಿನಿಮಾದ ಗೇಮ್ ಚೇಂಜರ್ ಆಗ್ತಿದ್ದಾರೆ. ಇದರಲ್ಲಿ ವಿನಯ ವಿಧೇಯ ರಾಮ ಚಿತ್ರದ ಬಳಿಕ ಬಾಲಿವುಡ್ ಬ್ಯೂಟಿ ಕೈರಾ ಜೊತೆ ಚರಣ್ ತೆರೆ ಹಂಚಿಕೊಂಡಿದ್ದು, ಪ್ಯಾನ್ ಇಂಡಿಯಾ ಸಿನಿಮಾ ಆಗಿ ತಯಾರಾಗ್ತಿದೆ.

  • ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES