Saturday, May 18, 2024

ಲೋಕಸಭಾ ಚುನಾವಣೆ ಆದ್ಮೇಲೆ ಸರ್ಕಾರ ನಡೆಯುತ್ತೋ, ಇಲ್ವೋ? : ಹೆಚ್.ಡಿ ಕುಮಾರಸ್ವಾಮಿ ಟಕ್ಕರ್

ಬೆಂಗಳೂರು : ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಐದು ವರ್ಷ ನಡೆಯುತ್ತೋ, ಇಲ್ವೋ ಗೊತ್ತಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಹಮ್ಮಿಕೊಂಡಿದ್ದ ಜೆಡಿಎಸ್ ಪಕ್ಷದ ಆತ್ಮಾವಲೋಕನ ಸಭೆಯಲ್ಲಿ ಮಾತನಾಡಿದ ಅವರು, ಲೋಕಸಭಾ ಚುನಾವಣೆ ಆದ್ಮೇಲೆ ಏನಾಗುತ್ತೋ ‌ಗೊತ್ತಿಲ್ಲ. ನಾನು ಭವಿಷ್ಯ ಹೇಳ್ತಿಲ್ಲ. ವಾಸ್ತವದ ಮೇಲೆ ಹೇಳ್ತಿದ್ದೇನೆ. ನನ್ನ ಮೇಲೆ ಸಂಶಯ ‌ಪಡೋದು ಬೇಡ ಎಂದ ತಿಳಿಸಿದ್ದಾರೆ.

ಕುಮಾರಸ್ವಾಮಿಗೆ ದುಡ್ಡು ಬರುತ್ತೆ ಅಂತ ಅಂದುಕೊಂಡಿರಬಹುದು. ನನಗೆ ಯಾರು ದುಡ್ಡು ಕೊಟ್ಟಿದ್ದಾರೆ ಹೇಳಿ. ಎರಡು ಬಾರಿ ಆಪರೇಷನ್ ಆದರೂ ನಾನು ಕೆಲಸ ಮಾಡಿದ್ದೇನೆ. ಆ ನೋವು ನನಗೆ ಇದೆ. ಒಂದು ಗಾದೆ ಇದೆ, ಯಾರನ್ನಾದ್ರೂ ಹಾಳು ಮಾಡಬೇಕಂದ್ರೆ ಹಳೆ ಲಾರಿ ಕೊಡಿಸಿ ಎಂಬ ಮಾತಿದೆ. ಈಗ ಅದೇ ರೀತಿ ಯಾರನ್ನಾದರೂ ಹಾಳು ಮಾಡಬೇಕು ಅಂದರೆ ರಾಜಕೀಯಕ್ಕೆ ಕರ್ಕೊಂಡು ಬಂದರೆ ಮುಗೀತಲ್ವಾ ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.

ಇದನ್ನೂ ಓದಿ : ಇದು ರಿವರ್ಸ್​ ಗೇರ್ ಸರ್ಕಾರ ; ಬಸವರಾಜ ಬೊಮ್ಮಾಯಿ

ಆಗ ಫ್ರೀ ಅಂದೋವ್ರು, ಈಗ ಕಂಡೀಷನ್ ಅಂದ್ರು

ನಾನು ಯಾವ ರೀತಿ ಕಷ್ಟ ಅನುಭವಿಸಿದ್ದೇನೆ ಅನ್ನೋದು ನನಗೆ ಗೊತ್ತು. ಕಾಂಗ್ರೆಸ್, ಬಿಜೆಪಿ ಅಷ್ಟು ಕೊಡ್ತಾರೆ. ನೀವು ಎಷ್ಟು ಕೊಡ್ತೀರ ಅನ್ನೋವ್ರು. ಕಾಂಗ್ರೆಸ್ ನವರು ಉಚಿತ ಗ್ಯಾರಂಟಿ ಕಾರ್ಡ್ ಕೊಟ್ಟಿದ್ದಾರೆ. ಆಗ ಫ್ರೀ ಅಂದೋವ್ರು, ಈಗ ಕಂಡೀಷನ್ ಅಂತೆ. ಬಸ್ ಫ್ರೀ ಅಂದ್ರು, ಈಗ ವೋಲ್ವೋ ಬಸ್ ಗೆ ಇಲ್ಲ, ಎಕ್ಸ್ ಪ್ರೆಸ್ ಗೆ ಇಲ್ಲ ಅಂತಾರೆ ಎಂದು ಕೈ ನಡೆಗೆ ಆಕ್ರೋಶ ಹೊರಹಾಕಿದ್ದಾರೆ.

ಪ್ರತಿ ಮನೆಯ ಗೃಹಿಣಿಗೆ 2,000 ಸಾವಿರ ರೂ. ಅಂದ್ರು. ಅದನ್ನೂ ನೋಡೋಣ. ಇಂಥ ವಿಚಾರ ಇಟ್ಟುಕೊಂಡು ಜನರ ಮುಂದೆ ಹೋಗಿ, ಹಣ ಇಟ್ಟುಕೊಂಡು ಜನರ ಮುಂದೆ ಹೋಗಬೇಡಿ. ಆಂದೋಲನ ಇಟ್ಟುಕೊಂಡು ಹೋಗಿ. ಎಲ್ಲರಿಗೂ ಸಹಕಾರ ಕೊಡಲು ಪ್ರಯತ್ನ ಪಟ್ಟಿದ್ದೇವೆ. ಪಕ್ಷದ ಸಂಘಟನೆಯಲ್ಲಿ ಭಾಗವಹಿಸಿದ್ದೇವೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

RELATED ARTICLES

Related Articles

TRENDING ARTICLES