Monday, December 23, 2024

ಪ್ರಬಲ ಖಾತೆಗಳಿಗಾಗಿ ‘ಶಿವ’ರಾಮಯ್ಯ ಬಿಗಿಪಟ್ಟು, ಹೈಕಮಾಂಡ್ ಗೆ ಇಕ್ಕಟ್ಟು..!

ಬೆಂಗಳೂರು : ಸಚಿವ ಸಂಪುಟ ವಿಸ್ತರಣೆಗೂ ಮೊದಲೇ ಖಾತೆ ಕಿತ್ತಾಟ ಜೋರಾಗಿಬಿಟ್ಟಿದೆ. ಪ್ರಬಲ ಖಾತೆಗಳಿಗಾಗಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್ ನಡುವೆ ಬಿಗ್ ಫೈಟ್ ಏರ್ಪಟ್ಟಿದೆ. ಸಿಎಂ, ಡಿಸಿಎಂ ಹಗ್ಗಜಗ್ಗಾಟ ನೋಡಿ, ಸಚಿವರೆಲ್ಲಾ ಥಂಡಾ ಹೊಡೆದಿದ್ದಾರೆ‌‌.

ಹೌದು, ಮುಖ್ಯಮಂತ್ರಿ ಹುದ್ದೆ ಸಿದ್ದರಾಮಯ್ಯನವರಿಗೆ ನೀಡಿದ್ದೀರಿ. ನನಗೆ ಎರಡು, ಬೆಂಬಲಿಗರಿಗೆ ಐದು ಪ್ರಬಲ ಖಾತೆಗಳನ್ನು ಕೊಡಿ ಅಂತಾ ಡಿಸಿಎಂ ಡಿ.ಕೆ ಶಿವಕುಮಾರ್ ಪಟ್ಟು ಹಿಡಿದಿದ್ದಾರೆ.

ನಿನ್ನೆಯಿಂದ ಸಿಎಂ, ಡಿಸಿಎಂ ದೆಹಲಿಯಲ್ಲಿ ಕೂತು ಖರ್ಗೆ, ಸುರ್ಜೇವಾಲಾ, ಕೆ.ಸಿ ವೇಣುಗೋಪಾಲ್ ಜೊತೆ ಮ್ಯಾರಥಾನ್ ಮೀಟಿಂಗ್ ನಡೆಸ್ತಿದ್ದಾರೆ. ಸಂಪುಟ ವಿಸ್ತರಣೆ ಮಾತ್ರ ಖಾತೆ ಕಗ್ಗಂಟು ಕೂಡ ಹೈಕಮಾಂಡ್ ಗೆ ತಲೆನೋವಾಗಿದೆ.

ಸಚಿವಾಕಾಂಕ್ಷಿಗಳ ಪಟ್ಟಿ ಜೊತೆ, ಖಾತೆಗಳ ಪಟ್ಟಿಯನ್ನೂ ಹೈಕಮಾಂಡ್ ಮುಂದೆ ಇಟ್ಟಿದ್ದಾರೆ. ನಿನ್ನೆ ಸಿಎಂ ಸಿದ್ದರಾಮಯ್ಯಗೂ ಮೊದಲೇ ಡಿ.ಕೆ ಶಿವಕುಮಾರ್ ದೆಹಲಿಗೆ ತೆರಳಿ, ಖರ್ಗೆ ಜೊತೆ ಮಾತುಕತೆ ನಡೆಸಿದ್ದಾರೆ. ಸಿಎಂ ಹುದ್ದೆ ವಿಚಾರದಲ್ಲಿ ನೀವು ಹೇಳಿದಂತೆ ಕೇಳಿದ್ದೀನಿ.‌ ಪ್ರಬಲ ಖಾತೆಗಳನ್ನು ನಮಗೇ ಕೊಡಬೇಕು ಅಂತಾ ಎಐಸಿಸಿ ಅಧ್ಯಕ್ಷರ ಬಳಿ ಡಿಮ್ಯಾಂಡ್ ಮಾಡಿದ್ದಾರೆ‌.

ಸಿಎಂ,ಡಿಸಿಎಂ ನಡುವೆ ಬಿಗ್ ಫೈಟ್

ಬೆಂಗಳೂರು ಅಭಿವೃದ್ಧಿ ಖಾತೆಗಾಗಿ ಸಿಎಂ-ಡಿಸಿಎಂ ನಡುವೆ ಬಿಗ್ ಫೈಟ್ ಏರ್ಪಟ್ಟಿದೆ. ಬೆಂಗಳೂರು ಅಭಿವೃದ್ಧಿ ಖಾತೆ ತಮ್ಮ ಬಳಿಯೇ ಇಟ್ಟುಕೊಳ್ಳಲು ಸಿಎಂ ಸಿದ್ದರಾಮಯ್ಯ ಚಿಂತನೆ ನಡೆಸಿದ್ದಾರೆ. ಈ ಖಾತೆಯನ್ನ ನಾನೇ ಇಟ್ಟುಕೊಳ್ಳುತ್ತೇನೆ ಎಂದು ಆಪ್ತರ ಬಳಿಯೂ ಹೇಳಿಕೊಂಡಿದ್ದಾರೆ. ಇದಕ್ಕೆ ಡಿ.ಕೆ ಶಿವಕುಮಾರ್ ಅಡ್ಡಗಾಲು ಹಾಕಿದ್ದು, ಬೆಂಗಳೂರು ಅಭಿವೃದ್ಧಿ ಖಾತೆ ನನಗೆ ಕೊಡಿ ಅಂತಾ ಹೈಕಮಾಂಡ್ ಮುಂದೆ ಡಿಮ್ಯಾಂಡ್ ಮಾಡಿದ್ದಾರೆ. ಈ ವಿಚಾರದ ಬಗ್ಗೆ ಚರ್ಚಿಸಲೆಂದೇ ನಿನ್ನೆ ಸಿಎಂಗೂ ಮೊದಲೇ ಡಿಸಿಎಂ ಡಿಕೆಶಿ ದೆಹಲಿಗೆ ತೆರಳಿದ್ದು ಅಂತಾ ಹೇಳಲಾಗುತ್ತಿದೆ.

ಇದನ್ನೂ ಓದಿ : ಇದು ರಿವರ್ಸ್​ ಗೇರ್ ಸರ್ಕಾರ ; ಬಸವರಾಜ ಬೊಮ್ಮಾಯಿ

ಜಲಸಂಪನ್ಮೂಲ ಖಾತೆ ಮೇಲೆಬಂಡೆ’ ಕಣ್ಣು

ಇನ್ನೂ, ಬೆಂಗಳೂರು ಅಭಿವೃದ್ಧಿ ಖಾತೆ ಮಾತ್ರವಲ್ಲ. ಜಲಸಂಪನ್ಮೂಲ ಖಾತೆ ಮೇಲೂ ಡಿ.ಕೆ ಶಿವಕುಮಾರ್ ಕಣ್ಣಾಕಿದ್ದಾರೆ. ಮೇಕೆದಾಟು ಯೋಜನೆ, ಎತ್ತಿನಹೊಳೆ ಯೋಜನೆಗಳಿಗೆ ಚುರುಕುಮುಟ್ಟಿಸಿ, ಕ್ರೆಡಿಟ್ ತೆಗೆದುಕೊಳ್ಳೋ ಚಿಂತನೆ ಮಾಡಿದ್ದಾರೆ. ಈ ಯೋಜನೆಗಳು ಫುಲ್ ಫಿಲ್ ಆದರೆ, ಹಳೆ ಮೈಸೂರು ಭಾಗಕ್ಕೆ ಶಾಶ್ವತ ಕುಡಿಯುವ ನೀರು ಒದಗಿಸಿದ ಕೀರ್ತಿ ಡಿ.ಕೆ ಶಿವಕುಮಾರ್ ಗೆ ಸಲ್ಲುತ್ತೆ. ಜೊತೆಗೆ ಸಿದ್ದರಾಮಯ್ಯ ಹಾಗೂ ಆಪ್ತ ಎಂ.ಬಿ ಪಾಟೀಲ್ ಗೂ ಟಕ್ಕರ್ ಕೊಡೋ ಪ್ಲ್ಯಾನ್ ಕೂಡ ಇದೆ. ಈ ಮೂಲಕ ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆಯೋ ರಣತಂತ್ರ ಡಿ.ಕೆ ಶಿವಕುಮಾರ್ ರೂಪಿಸಿದ್ದಾರೆ.

ಇದಲ್ಲದೆ, ವಸತಿ ಖಾತೆ ಮೇಲೆ ಡಿ.ಕೆ ಶಿವಕುಮಾರ್ ಆಪ್ತರ ಕಣ್ಣು ಬಿದ್ದಿದೆ‌. ವಸತಿ ಇಲಾಖೆಯಲ್ಲಿ 15ರಿಂದ 20 ಸಾವಿರ ಮನೆಗಳನ್ನು ಹಂಚಿಕೆ ಮಾಡೋ ಪ್ಲ್ಯಾನ್ ಹಾಕಿಕೊಂಡು, ತೀವ್ರ ಲಾಭಿ ನಡೆಸ್ತಿದ್ದಾರೆ. ಆರೋಗ್ಯ, ಕಂದಾಯ, ಗೃಹ, ಇಂಧನ, ಲೋಕೋಪಯೋಗಿ ಖಾತೆಗಳನ್ನ ತಮ್ಮ ಬೆಂಬಲಿಗರಿಗೆ ಕೊಡಿಸಲು ಡಿ.ಕೆ ಶಿವಕುಮಾರ್ ಗೇಮ್ ಶುರು ಮಾಡಿದ್ದಾರೆ.

RELATED ARTICLES

Related Articles

TRENDING ARTICLES