Wednesday, January 22, 2025

ಗುಡ್ ನ್ಯೂಸ್ ಕೊಟ್ಟ ಕಿಚ್ಚ : ಕಬಾಲಿ, ಅಸುರನ್ ಪ್ರೊಡ್ಯೂಸರ್ ಜೊತೆ ‘ಕಿಚ್ಚ 46’ ಕಿಕ್ ಸ್ಟಾರ್ಟ್

ಬೆಂಗಳೂರು : ಸುನಾಮಿ ಬರೋಕೂ ಮುನ್ನ ಕಡಲು ತುಂಬಾ ಪ್ರಶಾಂತವಾಗಿರುತ್ತೆ ಅನ್ನೋದು ಅಕ್ಷರಶಃ ಸತ್ಯ. ವಿಕ್ರಾಂತ್ ರೋಣ ಬಳಿಕ ಕ್ರಿಕೆಟ್, ಪಾಲಿಟಿಕ್ಸ್ ಅಂತ ಸೈಲೆಂಟ್ ಆಗಿದ್ದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್, ಇದೀಗ ಬಿಗ್ ಬ್ರೇಕಿಂಗ್ ನ್ಯೂಸ್ ಕೊಟ್ಟಿದ್ದಾರೆ. ಕಾಲಿವುಡ್​ನ ಪ್ರತಿಷ್ಠಿತ ಪ್ರೊಡಕ್ಷನ್ ಹೌಸ್ ಜೊತೆ ಸಿನಿಮಾ ಮಾಡೋಕೆ ಸಜ್ಜಾಗಿದ್ದಾರೆ. ಟೀಸರ್ ಜೊತೆ ಬರ್ತೀನಿ ಅನ್ನೋ ಹಿಂಟ್ ಕೂಡ ಕೊಟ್ಟಿದ್ದಾರೆ.

ಹೌದು, ವಿಕ್ರಾಂತ್ ರೋಣ ಚಿತ್ರದ ಬಳಿಕ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸಖತ್ ಸೈಲೆಂಟ್ ಆಗಿದ್ರು. ಸ್ಯಾಂಡಲ್​ವುಡ್​ನಿಂದ ಹಿಡಿದು ಅಕ್ಕಪಕ್ಕದ ಟಾಲಿವುಡ್, ಕಾಲಿವುಡ್ ಸೇರಿ ಬಾಲಿವುಡ್​​ವರೆಗೂ ಮೋಸ್ಟ್ ಡಿಮ್ಯಾಂಡಿಂಗ್ ಹೀರೋ ಅನಿಸಿಕೊಂಡಿರೋ ಕಿಚ್ಚ, ಇದೇ ಮೊದಲ ಬಾರಿ ಇಷ್ಟು ದಿನ ಯಾವುದೇ ಸಿನಿಮಾಗೆ ಕಮಿಟ್ ಆಗದೆ ಹಾಗೆಯೇ ಇದ್ದರು.

ಸುದೀಪ್ ನೆಕ್ಸ್ಟ್ ಸಿನಿಮಾ ಯಾರ ಜೊತೆ ಆಗಲಿದೆ ಅನ್ನೋ ಪ್ರಶ್ನೆಗೆ ಉತ್ತರ ಸಿಕ್ಕಿರಲಿಲ್ಲ. ಆದರೆ, ಫ್ಯಾನ್ಸ್​ಗೆ ಪತ್ರದ ಮೂಲಕ ಮೂರು ಪ್ರಾಜೆಕ್ಟ್​​ಗಳನ್ನ ಫೈನಲ್ ಮಾಡ್ತಿದೀನಿ ಅನ್ನೋ ಮಾತನ್ನ ಮನವರಿಕೆ ಮಾಡಿದ್ರು ಸುದೀಪ್. ಆದ್ರೀಗ ಕಿಚ್ಚನ 46ನೇ ವೆಂಚರ್ ಯಾರೊಟ್ಟಿಗೆ ಅನ್ನೋದು ಪಕ್ಕಾ ಆಗಿದೆ. ನಿರ್ಮಾಪಕರು ಫೈನಲ್ ಆಗಿದ್ದು, ಇನ್ನೇನಿದ್ರೂ ಡೈರೆಕ್ಟರ್ ಹೆಸರು ರಿವೀಲ್ ಆಗಬೇಕಿದೆ.

ಕಿಚ್ಚನಿಗೆ ಚಿನ್ನದ ಸರ ಗಿಫ್ಟ್

ತಮಿಳಿನ ಖ್ಯಾತ ನಿರ್ಮಾಪಕ ಕಲೈಪುಲಿ ಎಸ್ ಥಾನು ನಮ್ಮ ಕಿಚ್ಚನ ಮುಂದಿನ ಚಿತ್ರಕ್ಕೆ ಬಂಡವಾಳ ಹೂಡಲು ಸಜ್ಜಾಗಿದ್ದಾರೆ. ರೀಸೆಂಟ್ ಆಗಿ ಕಿಚ್ಚನ ಬರ್ತ್ ಡೇ ವಿಶೇಷ, ಬೆಂಗಳೂರಿನ ಜೆ.ಪಿ ನಗರದಲ್ಲಿರೋ ಸುದೀಪ್ ಅವರ ನಿವಾಸಕ್ಕೆ ಆಗಮಿಸಿದ್ದ ಕಲೈಪುಲಿ, ನೆಕ್ಸ್ಟ್ ಸಿನಿಮಾ ಮಾಡೋದಾಗಿ ಹೇಳಿ ಹೋಗಿದ್ದರು. ಅದಕ್ಕೆ ಟೋಕನ್ ಆಫ್ ಅಡ್ವಾನ್ಸ್ ರೀತಿ ಒಂದು ಚಿನ್ನದ ಸರ ಕೂಡ ಗಿಫ್ಟ್ ಮಾಡಿದ್ದರು. ಇದೀಗ ಅದು ಅಧಿಕೃತ ಆಗಿದೆ.

ಪ್ಯಾನ್ ಇಂಡಿಯಾ ಸಿನಿಮಾನ?

ಕ್ರಿಕೆಟ್ ಹಾಗೂ ಪಾಲಿಟಿಕ್ಸ್ ಎರಡನ್ನೂ ಮುಗಿಸಿ, ಸದ್ಯ ಮತ್ತೆ ಬಣ್ಣ ಹಚ್ಚೋಕೆ ಕ್ಯಾರವಾನ್​ನತ್ತ ತೆರಳಿದ್ದಾರೆ ಕಿಚ್ಚ ಸುದೀಪ್. ಸದ್ಯ ಪೋಟೋಶೂಟ್ ಹಾಗೂ ಟೀಸರ್ ಶೂಟ್ ಕಾರ್ಯಗಳು ಭರದಿಂದ ಸಾಗ್ತಿದ್ದು, ಅದು ಪ್ಯಾನ್ ಇಂಡಿಯಾ ಸಿನಿಮಾನ..? ಅಥವಾ ಕನ್ನಡ-ತಮಿಳಿನ ದ್ವಿಭಾಷಾ ಚಿತ್ರವಾ ಅನ್ನೋದು ಇನ್ನಷ್ಟೇ ಗೊತ್ತಾಗಬೇಕಿದೆ. ಏಕ್ದಮ್ ಟೀಸರ್​ ಸಮೇತ ಬರೋದಾಗಿ ವಿಡಿಯೋ ಮೂಲಕ ಹಿಂಟ್ ನೀಡಿದ್ದಾರೆ ಕಿಚ್ಚ.

ರೀಸೆಂಟ್ ಆಗಿ ವಿಕ್ರಾಂತ್ ರೋಣ ಚಿತ್ರದ ಡೈರೆಕ್ಟರ್ ಅನೂಪ್ ಭಂಡಾರಿ ನಿರ್ದೇಶನದಲ್ಲಿ ಬಿಲ್ಲ ರಂಗ ಬಾಷ ಸಿನಿಮಾ ಮಾಡ್ತಾರೆ ಕಿಚ್ಚ ಎನ್ನಲಾಗಿತ್ತು. ಅದಕ್ಕೆ ತಮ್ಮದೇ ಹೋಮ್ ಬ್ಯಾನರ್​ನಡಿ ಪ್ರಿಯಾ ಸುದೀಪ್ ಅವರ ಹಣ ಹೂಡಲಿದ್ದಾರೆ ಅನ್ನೋ ಮಾತುಗಳು ಕೇಳಿಬಂದಿದ್ದವು. ಆದ್ರೀಗ ಬಿಲ್ಲ ರಂಗ ಬಾಷಗೂ ಮುನ್ನ ಕಲೈಪುಲಿ ಎಸ್ ಥಾನು ನಿರ್ಮಾಣದಲ್ಲಿ ಹೊಸ ಡೈರೆಕ್ಟರ್ ಌಕ್ಷನ್ ಕಟ್ ಹೇಳೋದು ಪಕ್ಕಾ ಆಗಿದೆ.

  • ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES